
ಯಶ್ (ಯಶ್) ಅವರ ತಂದೆಯ ಹೆಸರು ಅರುಣ್ ಕುಮಾರ್. ಯಾಯಿ ಹೆಸರು ಪುಷ್ಪಾ. ಇವರ ಬಗ್ಗೆ ಹೊಸದಾಗಿ ಹೇಳಬೇಕಿಲ್ಲ. ಇವರು ನಿರ್ಮಾಣ ಸಂಸ್ಥೆ ಆರಂಭಿಸಿ ಸಿನಿಮಾಗಳ ನಿರ್ಮಾಣ ಕಾರ್ಯಕ್ಕೆ ಇಳಿದಿದ್ದಾರೆ. ಅರುಣ್ ಕುಮಾರ್ ಹಾಗೂ ಪುಷ್ಪಾ ಅವರ ಬಗ್ಗೆ ಯಶ್ ಈ ಮೊದಲು ಮಾತನಾಡಿದ್ದ ವಿಡಿಯೋ ವೈರಲ್ ಆಗಿದೆ. ಜನವರಿ 8 ಯಶ್ ಜನ್ಮದಿನ. ಈ ವಿಶೇಷ ದಿನಕ್ಕಾಗಿ ಫ್ಯಾನ್ಸ್ ಕಾದಿದ್ದಾರೆ.
ಯಶ್ ಅವರು ತುಂಬಾ ಕಷ್ಟಪಟ್ಟಿದ್ದರು ಯಾವುದೇ ಅನುಮಾನವಿಲ್ಲ. ಅದು ನಟನೆಗೆ ಬಂದಮೇಲೆ ಮಾತ್ರ. ಏಕೆಂದರೆ ಸಣ್ಣವರಿದ್ದಾಗ ಅವರಿಗೆ ಕಷ್ಟ ನೋಡಲು ಕುಟುಂಬದವರು ಅವಕಾಶ ನೀಡಿಲ್ಲ. ಈ ಬಗ್ಗೆ ಹಲವು ವರ್ಷಗಳ ಹಿಂದೆ TV9 ಕನ್ನಡದ ‘ನನ್ನ ಕಥೆ’ ಕಾರ್ಯಕ್ರಮದಲ್ಲಿ ಮಾತನಾಡಿದ್ದರು.
‘ನನ್ನ ತಂದೆ ತಾಯಿಗೆ ಕಷ್ಟವಾದರೂ ನಮಗೆ ಏನೂ ತೊಂದರೆ ಇಲ್ಲ. ಕಾನ್ಫಿಡೆನ್ಸ್ ನೀಡಿ ಬೆಳೆಸಿದ್ದರು. ನಾನು ಮೈಸೂರಿನ ಪಡವಾರಹಳ್ಳಿ ಎಂಬ ಏರಿಯಾದಲ್ಲಿ ಹುಟ್ಟಿ ಬೆಳೆದಿದ್ದೆ. ಪಾಶ್ ಏರಿಯಾ, ಹಳ್ಳಿಯ ವಾತಾವರಣನೂ ಇತ್ತು. ಎಲ್ಲಾ ರೀತಿಯ ವಾತಾವರಣ ನೋಡಿ ಬೆಳೆದಿದ್ದೆ’ ಎಂದರು ಯಶ್.
‘ನನ್ನ ತಂದೆ ತಾಯಿ ಶಿಕ್ಷಣಕ್ಕೆ ಕೊರತೆ ಇಲ್ಲ. ಡ್ರೈವರ್ ಮಕ್ಕಳಿಗೆ ಕಷ್ಟ ಇರುತ್ತದೆ ಎಂಬುದು ಗೊತ್ತಿರಲಿಲ್ಲ. ಬುದ್ಧಿ ಬಂದಮೇಲೆ ಬೇರೆ ಡ್ರೈವರ್ ಮಕ್ಕಳನ್ನು ನೋಡಿದಾಗ ಕಷ್ಟ ಗೊತ್ತಾಯಿತು. ಮಹಾಜನ ಸ್ಕೂಲ್ನಲ್ಲಿ ನಾನು ಓದಿದ್ದೆ. ರಾಜಕಾರಣಿ, ಅಧಿಕಾರ ಮಕ್ಕಳು ಅಲ್ಲಿದ್ದರು’ ಅವರು.
ಇದನ್ನೂ ಓದಿ: ಬರ್ತ್ ಡೇಗೂ ಮೊದಲು ಸ್ಟೈಲಿಶ್ ಆಗಿ ಫೋಟೋಶೂಟ್ ಮಾಡಿದ ಯಶ್; ಇಲ್ಲಿವೆ ಚಿತ್ರಗಳು
‘ಸಣ್ಣ ವಯಸ್ಸಿನಲ್ಲಿ ನಾಟಕ ಮಾಡುತ್ತಿದೆ. ಅದು ನನಗೆ ಸ್ಫೂರ್ತಿ ಕೊಡ್ತು. ನಟನೆಗೆ ಸೇರಬೇಕು ಎಂದಿತ್ತು. ಸಿನಿಮಾದಲ್ಲಿ ರಾಜಕೀಯ ಇರುತ್ತದೆ ಎಂಬುದು ಗೊತ್ತಿತ್ತು. ಬೆಂಗಳೂರು ಎಂಬುದೇ ಗೊತ್ತಿಲ್ಲ. ಅಕೌಂಟ್ ನಂಗೆ ಇಷ್ಟ ಇರಲಿಲ್ಲ. ನಟನೆ ಬಗ್ಗೆ ಆಸಕ್ತಿ ಇತ್ತು’ ಅವರು. ಧಾರಾವಾಹಿಗಳಿಂದ ಬಣ್ಣದ ಬದುಕು ಆರಂಭಿಸಿದ ಅವರು ಈಗ ಸ್ಟಾರ್ ಹೀರೋ ಆಗಿದ್ದಾರೆ. ‘ಟಾಕ್ಸಿಕ್’ ಮಾರ್ಚ್ 19 ರಂದು ರಿಲೀಸ್ ಆಗುತ್ತಿದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ಮಾಡಿ.