ಬೆಂಗಳೂರು, ಡಿಸೆಂಬರ್ 24: ದೇಶದಲ್ಲಿ ಇದೇ ಮೊದಲ ಬಾರಿಗೆ ಚೈನಾದ ಹ್ಯಾಂಗ್ಜೋ ಮಾದರಿಯಲ್ಲಿ ಬೆಂಗಳೂರಿನ ಯಲಹಂಕದಲ್ಲಿ ಬಗ್ಗೆ ಟರ್ಮಿನಲ್ ನಿರ್ಮಾಣಕ್ಕೆ ಇಲಾಖೆ ಸಿದ್ದತೆ ನಡೆಸಿದೆ. ಒಟ್ಟು 20 ಕೋಟಿ ರೂಪಾಯಿ ವೆಚ್ಚದಲ್ಲಿ ಮಲ್ಟಿ ಲೆವಲ್ ಸ್ಟೇಷನ್ ನಿರ್ಮಾಣಕ್ಕೆ ಪ್ಲ್ಯಾನ್ ನಡೆಯುತ್ತಿತ್ತು, ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ಮಾರ್ಗದಲ್ಲಿ ಇದು ಇರಲಿದೆ.
ರೈಲ್ ವೀಲ್ ಫ್ಯಾಕ್ಟರಿ ಬಳಿ ಟರ್ಮಿನಲ್ ಸ್ಟೇಷನ್ ನಿರ್ಮಾಣ
ಸ್ಥಳದಲ್ಲಿ ದೇವನಹಳ್ಳಿಯಲ್ಲಿ ಈ ಟರ್ಮಿನಲ್ ಸ್ಟೇಷನ್ ನಿರ್ಮಾಣ ಮಾಡಲು ಇಲಾಖೆ ಚಿಂತನೆ ನಡೆಸಿತ್ತು. ಆದರೆ ಅಲ್ಲಿ ಜಾಗದ ಸಮಸ್ಯೆ ಹಿನ್ನೆಲೆ ಯಲಹಂಕದ ರೈಲ್ ವೀಲ್ ಫ್ಯಾಕ್ಟರಿ ಬಳಿ ಟರ್ಮಿನಲ್ ಸ್ಟೇಷನ್ ಮಾಡಲು ಸೌತ್ ವೆಸ್ಟರ್ನ್ ಒಲವು ತೋರಿಸಿದೆ ಎನ್ನಲಾಗುತ್ತದೆ, ಈ ಬಗ್ಗೆ ಯಲಹಂಕ ನಿವಾಸಿಗಳು ಸಂತಸ ವ್ಯಕ್ತಪಡಿಸುತ್ತಿದ್ದಾರೆ.
ಇದನ್ನೂ ಓದಿ: ಪ್ರಯಾಣಿಕರೇ ಗಮನಿಸಿ, ಇನ್ಮುಂದೆ ಟಿಕೆಟ್ ಅನ್ನು ಮೊಬೈಲ್ ನಲ್ಲಿ ತೋರಿಸಿದ್ರೆ ಸಾಲ್ದು
ಒಟ್ಟು ಐದು ಫ್ಲೋರ್‌ಗಳಲ್ಲಿ ರೈಲು ಸಂಚಾರ!
ಇನ್ನು ಈ ಟರ್ಮಿನಲ್ 16 ಫ್ಲಾಟ್ ಫಾರಂ ಇರಲಿದೆ. ಅಂಡರ್ ಗ್ರೌಂಡ್, ಫಸ್ಟ್ ಫ್ಲೋರ್ ಸೇರಿದಂತೆ ಒಟ್ಟು ಐದು ಫ್ಲೋರ್‌ಗಳಲ್ಲಿ ರೈಲುಗಳು ಸಂಚಾರ ಮಾಡಲಿವೆಯಂತೆ. ಆ ಮೂಲಕ ಇದು ದೇಶದ ಮೊದಲ ಸಂಪೂರ್ಣ ಎತ್ತರದ ಸ್ಟೇಷನ್ ಆಗಲಿದೆ. ಜೊತೆಗೆ ಈ ಟರ್ಮಿನಲ್ ಬ್ಲ್ಯೂ ಲೈನ್ ಕೋಗಿಲು ಕ್ರಾಸ್ ಮೆಟ್ರೋ ನಿಲ್ದಾಣಕ್ಕೂ ಸಂಪರ್ಕ ಕಲ್ಪಿಸಲಿದೆ. ಯಲಹಂಕ-ದೊಡ್ಡಬಳ್ಳಾಪುರ ಹೆದ್ದಾರಿ ಕಡೆಯಿಂದ ಟರ್ಮಿನಲ್‌ನ ಮುಖ್ಯದ್ವಾರ ಇರಲಿದೆ. ಈ ಬಗ್ಗೆ ಪ್ರಯಾಣಿಕರು ಸಂತಸ ವ್ಯಕ್ತಪಡಿಸಿದ್ದು, ಈ ಟರ್ಮಿನಲ್ ನಿರ್ಮಾಣವಾದರೆ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಸಂಚಾರವೂ ಸುಲಭ ಎಂದು ಅಭಿಪ್ರಾಯಪಟ್ಟಿದ್ದಾರೆ.
ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ.