ಬೆಂಗಳೂರಿನ ಬಸವೇಶ್ವರ ನಗರದಲ್ಲಿ, ತನ್ನ ಮಗಳನ್ನು ಮದುವೆ ಮಾಡಿಕೊಡಲು ನಿರಾಕರಿಸಿದಕ್ಕೆ ಮಹಿಳೆಯೊಬ್ಬರ ಮೇಲೆ ವ್ಯಕ್ತಿಯೊಬ್ಬ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ್ದಾನೆ. ಈ ಘಟನೆಯಲ್ಲಿ ಮಹಿಳೆ ಗಂಭೀರವಾಗಿ ಗಾಯಗೊಂಡಿದ್ದು, ಆಸ್ಪತ್ರೆಯಲ್ಲಿ ಸಾವು-ಬದುಕಿನ ನಡುವೆ ಹೋರಾಡುತ್ತಿದ್ದಾರೆ.

19 ವರ್ಷದ ಮಗಳೊಂದಿಗೆ ಜೀವನ ನಡೆಸುತ್ತಿದ್ದ ಮಹಿಳೆ ಗೀತಾ ಎಂಬವರಿಗೆ ಮುತ್ತು ಎಂಬಾತ ಪರಿಚಯವಾಗಿದ್ದನು. ಮೂವರು ಒಂದೇ ಮನೆಯಲ್ಲಿದ್ದರು. ಮೂವರಿಗೂ ಒಳ್ಳೆಯ ಪರಿಚಯವಿತ್ತು.

ಮೂವರು ಬೆಂಗಳೂರಿನ ಬಸವೇಶ್ವರ ನಗರದ ಸಾಣೆಗುರುವನಹಳ್ಳಿಯಲ್ಲಿ ವಾಸವಾಗಿದ್ದರು. ಗೀತಾ ಪ್ರಾವಿಷನ್ ಸ್ಟೋರ್ ಇಟ್ಟುಕೊಂಡು ಜೀವನ ನಡೆಸುತ್ತಿದ್ದರು. ಮುತ್ತು ಸಹ ಅದೇ ಏರಿಯಾದಲ್ಲಿ ಟೀ ಸ್ಟಾಲ್ ಇಟ್ಕೊಂಡಿದ್ದನು. ವ್ಯಾಪಾರಿಗಳಾಗಿದ್ದರಿಂದ ಮುತ್ತು ಮತ್ತು ಗೀತಾ ನಡುವೆ ಪರಿಚಯವಿತ್ತು.

ಗೀತಾ ಅವರಿಗೆ ನಿಮ್ಮ ಮಗಳನ್ನು ನನಗೆ ಕೊಟ್ಟು ಮದುವೆ ಮಾಡಿಕೊಡಿ ಎಂದು ಮುತ್ತು ಪದೇ ಪದೇ ಪೀಡಿಸುತ್ತಿದ್ದನು. ಆದ್ರೆ ಗೀತಾ ಈ ಮದುವೆಗೆ ಒಪ್ಪಿಗೆ ನೀಡಿರಲಿಲ್ಲ. ಗೀತಾ ಒಪ್ಪದಿದ್ದಾಗ ಮದುವೆ ಮಾಡಿಸುವಂತೆ ಮುತ್ತು ಒತ್ತಡ ಹಾಕುತ್ತಿದ್ದನು.

ಮದುವೆಗೆ ಒಪ್ಪದಿದ್ದಾಗ ಕೋಪಗೊಂಡ ಮುತ್ತು, ಮಧ್ಯರಾತ್ರಿ 1 ಗಂಟೆಗೆ ಗೀತಾ ಅವರ ಮೇಲೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ್ದಾನೆ. ನಂತರ ಅಲ್ಲಿಂದ ಎಸ್ಕೇಪ್ ಆಗಿದ್ದಾನೆ. ಕೂಡಲೇ ಗೀತಾ ಅವರನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ.

ಇದನ್ನೂ ಓದಿ: ಯಾದಗಿರಿಯಲ್ಲಿ ಅಭಿವೃದ್ಧಿ ಹೆಸರಲ್ಲಿ ಹಣ ದುರ್ಬಳಕೆ? Smart TVಗೆ ₹2 ಲಕ್ಷ, ಟಾಯ್ಲೆಟ್ ಕುಡ್ಡಿಗೆ ₹5 ಲಕ್ಷ!

ಗೀತಾ ಅವರ ದೇಹ ಶೇ.50ರಷ್ಟು ಬೆಂಕಿಗಾಹುತಿಯಾಗಿದ್ದು, ಸಾವು ಬದುಕಿನ ಮಧ್ಯೆ ಹೋರಾಟ ನಡೆಸುತ್ತಿದ್ದಾರೆ. ಈ ಸಂಬಂಧ ಬಸವೇಶ್ವರ ನಗರ ಪೊಲೀಸ್ ಠಾಣೆಯಲ್ಲಿ ಕೊಲೆ ಯತ್ನ ಪ್ರಕರಣ ದಾಖಲಾಗಿದ್ದು, ಆರೋಪಿಗಾಗಿ ಹುಡುಕಾಟ ನಡೆಸಲಾಗುತ್ತಿದೆ.

ಇದನ್ನೂ ಓದಿ: ಬೆಂಗಳೂರೇ ಬೆಚ್ಚಿ ಬೀಳಿಸುವಂತ ದೃಶ್ಯ : ನಡುರಸ್ತೆಯಲೇ ಯುವತಿಗೆ ಲೈಂ*ಗಿಕ ದೌರ್ಜನ್ಯ

Source link
ಮದುವೆ ನಿರಾಕರಣೆ: ಯುವತಿ ತಾಯಿಯ ಜೀವಕ್ಕೆ ಕುತ್ತು ತಂದ ದುರುಳ!