Weekly Job Horoscope: ನಿಮ್ಮ ರಾಶಿಗನುಗುಣವಾಗಿ ವಾರದ ಉದ್ಯೋಗ ಭವಿಷ್ಯ ತಿಳಿಯಿರಿ

Weekly Job Horoscope: ನಿಮ್ಮ ರಾಶಿಗನುಗುಣವಾಗಿ ವಾರದ ಉದ್ಯೋಗ ಭವಿಷ್ಯ ತಿಳಿಯಿರಿ


ವಾರದ ಜಾತಕ: ನಿಮ್ಮ ರಾಶಿಗನುಗುಣವಾಗಿ ವಾರದ ಉದ್ಯೋಗ ಭವಿಷ್ಯ ತಿಳಿಯಿರಿ

ಮಾರ್ಚ್ 29 ರಿಂದ ಏಪ್ರಿಲ್ 04 ರವರೆಗೆ ಈ ವಾರವಿದ್ದು ಶ್ರಮವು ನಿರರ್ಥಕವಾಗಬಹುದು. ಕಲ್ಪಿಸಿಕೊಂಡಿದ್ದು ಆಗಿಲ್ಲ ಎಂಬ ನೋವು, ಬರಬೇಕಾದ ಹಣವು ತಲುಪಿದೆ. ಆತ್ಮವಿಶ್ವಾಸ ಅಲ್ಪ ಕಡಿಮೆಯಾದಂತೆ ತೋರಿದರೂ ಮತ್ತೆ ಅದು ಮೇಲೇರುವುದು. ಈಸ ಬೇಕು ಇದ್ದು ಜಯಿಸಬೇಕು ಎನ್ನುವ ಸ್ಥಿತಿ ನಿರ್ಮಾಣ ನಿರ್ಮಾಣ.

ಮೇಷ:

ವೃತ್ತಿಯಲ್ಲಿ ಹೊಸ ಜವಾಬ್ದಾರಿಗಳು ನಿಮ್ಮನ್ನು ಹುಡುಕಿಕೊಂಡು ಬರಲಿವೆ. ಮೇಲಧಿಕಾರಿಗಳ ಮೆಚ್ಚುಗೆಗೆ ಪಾತ್ರರಾಗುವಿರಿ. ಸಹೋದ್ಯೋಗಿಗಳ ಸಹಕಾರದಿಂದ ಬಾಕಿ ಉಳಿದ ಕೆಲಸಗಳು ಪೂರ್ಣಗೊಳ್ಳಲಿವೆ.

ವೃಷಭ:

ಕೆಲಸದ ಸ್ಥಳದಲ್ಲಿ ತಾಳ್ಮೆ ಅಗತ್ಯ. ಅನಗತ್ಯ ವಾಗ್ವಾದಗಳಿಂದ ದೂರವಿರಿ. ವಿದೇಶಿ ಕಂಪನಿಗಳಲ್ಲಿ ಕೆಲಸ ಮಾಡುವವರಿಗೆ ಉತ್ತಮ ಅವಕಾಶಗಳು ದೊರೆಯುವ ಸಾಧ್ಯತೆಯಿದೆ. ಸ್ವಲ್ಪ ಶ್ರಮ ವಹಿಸಿದರೆ ಯಶಸ್ಸು ಖಚಿತ.

ಮಿಥುನ:

ನಿಮ್ಮತೆಗೆ ಮನ್ನಣೆ ಸಿಗಲಿದೆ. ಹೊಸ ಉದ್ಯೋಗದ ಹುಡುಕಾಟದಲ್ಲಿದ್ದರೆ ಈ ವಾರ ಶುಭ ಫಲ ಸಿಗಲಿದೆ. ವ್ಯಾಪಾರಸ್ಥರಿಗೆ ಲಾಭದಾಯಕ ಸಮಯವಿದು. ಆತ್ಮವಿಶ್ವಾಸದಿಂದ ಮುನ್ನಡೆಯಿರಿ.

ಕರ್ಕಾಟಕ:

ಉದ್ಯೋಗದಲ್ಲಿ ವರ್ಗಾವಣೆಯ ಸಾಧ್ಯತೆಗಳಿವೆ. ಕೆಲಸದ ಒತ್ತಡ ಹೆಚ್ಚಾಗಿ ಮಾನಸಿಕ ಕಿರಿಕಿರಿ ಉಂಟಾಗಬಹುದು. ಶಿಸ್ತಿನಿಂದ ಕೆಲಸ ನಿರ್ವಹಿಸಿದರೆ ಸವಾಲುಗಳನ್ನು ಸಮರ್ಥವಾಗಿ ಎದುರಿಸಬಹುದು.

ಸಿಂಹ:

ಕಠಿಣ ಪರಿಶ್ರಮಕ್ಕೆ ತಕ್ಕ ಪ್ರತಿಫಲ ದೊರೆಯಲಿದೆ. ಗೌರವ ಮತ್ತು ಪ್ರತಿಷ್ಠೆ ಹೆಚ್ಚಾಗಲಿದೆ. ನಿಮ್ಮ ನಾಯಕತ್ವದ ಗುಣಗಳಿಗೆ ಪ್ರಶಂಸೆ ಇರುತ್ತದೆ. ಹೊಸ ಯೋಜನೆಗಳಿಗೆ ಇದು ಸೂಕ್ತ ಸಮಯ.

ಕನ್ಯಾ:

ಉದ್ಯೋಗದಲ್ಲಿ ಸಣ್ಣಪುಟ್ಟ ಅಡೆತಡೆಗಳು ಎದುರಾಗಬಹುದು. ಮಾತು ಬಿಗಿಹಿಡಿಯುವುದು ಉತ್ತಮ. ಹಿರಿಯ ಅಧಿಕಾರಿಗಳ ಸಲಹೆಯನ್ನು ಪಾಲಿಸಿ. ಆರ್ಥಿಕ ಲಾಭಕ್ಕಿಂತ ಅನುಭವಕ್ಕೆ ಪ್ರಾಮುಖ್ಯತೆ ನೀಡಿ.

ತುಲಾ:

ಪಾಲುದಾರಿಕೆ ವ್ಯವಹಾರದಲ್ಲಿ ಲಾಭವಿದೆ. ಉದ್ಯೋಗಿಗಳಿಗೆ ಬಡ್ತಿಯ ಸೂಚನೆಗಳಿವೆ. ತಂಡದ ಸದಸ್ಯರೊಂದಿಗೆ ಸಾಮರಸ್ಯದಿಂದ ಕಾರ್ಯನಿರ್ವಹಿಸುತ್ತದೆ. ನಿರೀಕ್ಷಿತ ಗುರಿಯನ್ನು ಸುಲಭವಾಗಿ ತಲುಪುವಿರಿ.

ವೃಶ್ಚಿಕ:

ಶತ್ರುಗಳ ಬಗ್ಗೆ ಜಾಗ್ರತೆ ಇರಲಿ. ನಿಮ್ಮ ಕೆಲಸದ ಮೇಲೆ ಹೆಚ್ಚಿನ ಗಮನ ಹರಿಸಿ. ಕಠಿಣ ಪರಿಶ್ರಮವೊಂದೇ ನಿಮಗೆ ಯಶಸ್ಸು ತಂದುಕೊಡಬಲ್ಲದು. ವಾರದ ಅಂತ್ಯಕ್ಕೆ ಶುಭ ಸುದ್ದಿ ಕೇಳುವಿರಿ.

ಧನು:

ವೃತ್ತಿ ಜೀವನದಲ್ಲಿ ಸಕಾರಾತ್ಮಕ ಬದಲಾವಣೆಗಳು ಇರುತ್ತದೆ. ಹೊಸ ಕೌಶಲ್ಯಗಳನ್ನು ಕಲಿಯಲು ಆಸಕ್ತಿ ತೋರುವಿರಿ. ಕಚೇರಿಯಲ್ಲಿ ನಿಮ್ಮ ಪ್ರಭಾವ ಹೆಚ್ಚಾಗಲಿದೆ. ಆರ್ಥಿಕ ಸ್ಥಿತಿ ಸುಧಾರಿಸಲಿದೆ.

ಮಕರ:

ಕೆಲಸದ ಒತ್ತಡದಿಂದ ಕುಟುಂಬದ ಕಡೆ ಗಮನ ಕೊಡಲು ಸಾಧ್ಯವಿಲ್ಲ. ನಿಗದಿತ ಸಮಯಕ್ಕೆ ಕೆಲಸ ಮುಗಿಸಲು ಪ್ರಯತ್ನಿಸಿ. ಪ್ರಮುಖ ನಿರ್ಧಾರಗಳನ್ನು ತೆಗೆದುಕೊಳ್ಳುವಾಗ ಹಿರಿಯರ ಸಲಹೆ ಪಡೆಯಿರಿ.

ಕುಂಭ:

ಧೈರ್ಯದಿಂದ ಕೆಲಸಗಳನ್ನು ಪೂರೈಸುವಿರಿ. ಸಣ್ಣ ಪ್ರವಾಸಗಳು ಉದ್ಯೋಗಕ್ಕೆ ಪೂರಕವಾಗಿರುತ್ತವೆ. ಸಹೋದ್ಯೋಗಿಗಳ ನಡುವೆ ಉಂಟಾಗಿದ್ದ ಗೊಂದಲಗಳು ಬಗೆಹರಿಯಲಿವೆ. ವಿಶ್ವಾಸ ಹೆಚ್ಚಲಿದೆ.

ಮೀನ:

ಆರ್ಥಿಕವಾಗಿ ಲಾಭದಾಯಕ ವಾರವಿದು. ಉದ್ಯೋಗದಲ್ಲಿ ಸ್ಥಿರತೆ ಇರಲಿದೆ. ಹೊಸ ಹೂಡಿಕೆಗಳ ಬಗ್ಗೆ ಯೋಚಿಸಿ. ಅಧಿಕಾರಿ ವರ್ಗದವರಿಂದ ಬೆಂಬಲ ಸಿಗಲಿದೆ, ಕೆಲಸದಲ್ಲಿ ನೆಮ್ಮದಿ ಇರಲಿದೆ.

– ಲೋಹಿತ ಹೆಬ್ಬಾರ್ – 8762924271



Source link

Leave a Reply

Your email address will not be published. Required fields are marked *