Headlines

Chikkamagaluru: ಎಣ್ಣೆ ನಶೆಯಲ್ಲಿ ನಾಯಿ ಜೊತೆ ಯುವಕನ ಡ್ಯಾನ್ಸ್​​; ವಿಡಿಯೋ ವೈರಲ್​

Chikkamagaluru: ಎಣ್ಣೆ ನಶೆಯಲ್ಲಿ ನಾಯಿ ಜೊತೆ ಯುವಕನ ಡ್ಯಾನ್ಸ್​​; ವಿಡಿಯೋ ವೈರಲ್​


ಚಿಕ್ಕಮಗಳೂರು, ಜನವರಿ 01: ಹೊಸ ವರ್ಷದ ಹಿನ್ನೆಲೆ ರಾಜ್ಯಾದ್ಯಂತ ಪಾರ್ಟಿಗಳು ಜೋರಾಗಿಯೇ ನಡೆದಿವೆ. ಅತಿಯಾದ ಮದ್ಯ ಸೇವನೆ ಕಾರಣ ರಸ್ತೆಯಲ್ಲಿಯೇ ತೂರಾಟ ಕೂಡ. ಆದರೆ ಚಿಕ್ಕಮಗಳೂರು ಜಿಲ್ಲೆಯಲ್ಲಿ ಕುಡಿದ ಮತ್ತಲ್ಲಿದ್ದ ಯುವಕನೋರ್ವ ಬೀದಿ ನಾಯಿ ಜೊತೆ ಡ್ಯಾನ್ಸ್ ಮಾಡಿರುವ ವಿಡಿಯೋವೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ನ್ಯೂ ಇಯರ್ ಹಿನ್ನೆಲೆ ಕಣತಿ ಗ್ರಾಮದ ಸಂದೀಪ್ ಮತ್ತು ಸ್ನೇಹಿತರು ಪಾರ್ಟಿ ನಡೆಸಿದರು. ಈ ವೇಳೆ ಬೀದಿ ನಾಯಿಯ ಮುಂಬದಿ ಕಾಲುಗಳನ್ನು ಹಿಡಿದುಕೊಂಡು ಸಂದೀಪ್ ಡ್ಯಾನ್ಸ್ ಮಾಡಿದ್ದಾರೆ. ನೋಡಿದ ಕೆಲವು ನಾಯಿಗಳ ಜೊತೆಗೆ ಯುವಕನ ಡ್ಯಾನ್ಸ್‌ಗೆ ಖುಷಿ ಪಟ್ಟಿದ್ದಾರೆ, ಇನ್ನು ಕೆಲವರು ಕುಡಿದ ಮತ್ತಿನಲ್ಲಿ ಬೀದಿ ನಾಯಿಗೆ ಹಿಂಸೆ ನೀಡಿದ್ದಾರೆ ಎಂದು ದೂರಿದ್ದಾರೆ.

ಮತ್ತಷ್ಟು ವಿಡಿಯೋ ನೋಡಲು ಇಲ್ಲಿ ಕ್ಲಿಕ್ ಮಾಡಿ.



Source link

Leave a Reply

Your email address will not be published. Required fields are marked *