ಹಾವೇರಿ, (ಮಾರ್ಚ್ 01): ಈಜುಕೊಳದಲ್ಲಿ ಈಜಲು ಹೋದ ಯುವಕ ದುರಂತ ಸಾವು ಕಂಡಿರುವ ಘಟನೆ ಹಾವೇರಿ ಜಿಲ್ಲೆ ಬ್ಯಾಡಗಿ ಪಟ್ಟಣದ ಕಾಕೋಳದಲ್ಲಿ ನಡೆದಿದೆ. ಡಕಣಾಚಾರಿ ನಾಗರಾಜ್ ಬಡಿಗೇರ್ (23) ಮೃತ ಯುವಕ. ನಾಗರಾಜ್ ಗೆಳೆಯರೊಂದಿಗೆ ಕಾಕೋಳ ರಸ್ತೆಯಲ್ಲಿರೋ ಮಹಾಕೋಟೇಶ್ವರ ಈಜುಕೊಳದಲ್ಲಿ ಈಜು ನೋಡಲು ಹೋಗಿದ್ದು, ಈ ವೇಳೆ ದುರಂತ ಸಾವು ಕಂಡಿದೆ. ಮೊದಲು ಈಜಾಡಿದ್ದಾನೆ. ಬಳಿಕ ತಲೆ ಕೆಳಗೆ ಮಾಡಿ ಡೈವ್ ಹೊಡೆದಿದ್ದಾನೆ. ಆದರೆ, ಡೈವ್ ಹೊಡೆದವ ಮೇಲೇಳಲೇ ಇಲ್ಲ. ಹಾಗೇ ಮುಳುಗಿದ್ದಾನೆ. ಪಕದಲ್ಲಿ ಗೆಳೆಯರು ಆಟವಾಡುತ್ತಿದ್ದರೂ ಸಹ ಗಮನಿಸಿಲ್ಲ. ಬಳಿಕ ದಡದಲ್ಲಿದ್ದ ಮತ್ತೋರ್ವ ಗಮನಿಸಿ ಬಂದು ನಾಗರಾಜ್ ಅವರನ್ನು ಮೇಲೆತ್ತೆ ದಡಕ್ಕೆ ತಂದಿದ್ದಾರೆ. ಆದರೆ, ದುರದೃಷ್ಟವಶಾತ್ ಅಷ್ಟೊತ್ತಿಗಾಗಲೇ ನಾಗರಾಜ್ ಕುಡಿದು ಸಾವನ್ನಪ್ಪಿದ್ದ. ನಾಗರಾಜ್ ಮುಳುಗಿ ಸಾವನ್ನಪ್ಪಿದ ವಿಡಿಯೋ ನೋಡಿದ್ರೆ ಅಯ್ಯೋ ಅನ್ನಿಸುತ್ತೆ.