Headlines

‘ನನ್ನ ಸಿನಿಮಾ ಯಾಕೆ ಕೊಲ್ತೀರ?’ ದುನಿಯಾ ವಿಜಿಯ ಪ್ರಶ್ನಿಸಿದ ಝೈದ್ ಖಾನ್, ಉತ್ತರ ಏನಿತ್ತು?

‘ನನ್ನ ಸಿನಿಮಾ ಯಾಕೆ ಕೊಲ್ತೀರ?’ ದುನಿಯಾ ವಿಜಿಯ ಪ್ರಶ್ನಿಸಿದ ಝೈದ್ ಖಾನ್, ಉತ್ತರ ಏನಿತ್ತು?


ಸ್ಯಾಂಡಲ್ ವುಡ್ ನಲ್ಲಿ (ಸ್ಯಾಂಡಲ್ ವುಡ್) ಮತ್ತೆ ಎರಡು ಸಿನಿಮಾಗಳು ಪೈಪೋಟಿಗೆ ಬಿದ್ದಿವೆ. ಡಿಸೆಂಬರ್ ತಿಂಗಳಿನಲ್ಲಿ ದರ್ಶನ್ ನಟನೆಯ ‘ಡೆವಿಲ್’ ಬಿಡುಗಡೆ ಆಗುತ್ತಿದೆ, ಅದರ ನಂತರ ಡಿಸೆಂಬರ್ 25 ರಂದು ಒಂದೇ ದಿನ ಸುದೀಪ್ ನಟನೆಯ ‘ಮಾರ್ಕ್’ ಮತ್ತು ಶಿವಣ್ಣ, ಉಪೇಂದ್ರ, ರಾಜ್ ಬಿ ಶೆಟ್ಟಿ ನಟನೆಯ ’45’ ಸಿನಿಮಾ ಬಿಡುಗಡೆ ಆಗುತ್ತಿದೆ. ಒಂದೇ ದಿನ ಎರಡು ದೊಡ್ಡ ಸಿನಿಮಾಗಳು ಬಿಡುಗಡೆ ಆಗಿ ಸ್ಪರ್ಧೆಗೆ ಬಿದ್ದಿದ್ದವು. ಈಗ ಇದೇ ಶುಕ್ರವಾರ ಮತ್ತೊಮ್ಮೆ ಎರಡು ಕನ್ನಡ ಸಿನಿಮಾಗಳು ಬಿಡುಗಡೆ ಆಗಲಿವೆ ಅದುವೇ ದುನಿಯಾ ವಿಜಯ್ ನಟನೆಯ ‘ಲ್ಯಾಂಡ್ ಲಾಾರ್ಡ್’ ಮತ್ತು ಜೈದ್ ಖಾನ್ ನಟನೆಯ ‘ಕಲ್ಟ್’ ಸಿನಿಮಾ.

ಝೈದ್ ಖಾನ್ ನಟನೆಯ ‘ಕಲ್ಟ್’ ಸಿನಿಮಾ ಪ್ರೇಮಕಥಾ ಸಿನಿಮಾ ಆಗಿದ್ದು, ಸಿನಿಮಾದಲ್ಲಿ ಮಲೈಕಾ ವಸುಪಾಲ್ ಮತ್ತು ರಚಿತಾ ರಾಮ್ ನಾಯಕಿ. ಇನ್ನು ‘ಲ್ಯಾಂಡ್‌ಲಾಾರ್ಡ್’ ಸಿನಿಮಾದಲ್ಲಿ ದುನಿಯಾ ವಿಜಯ್, ರಚಿತಾ ರಾಮ್ ನಟಿಸಿದ್ದಾರೆ. ಇದೀಗ ಝೈದ್ ಖಾನ್ ಅವರು ಟಿವಿ9ಗೆ ನೀಡಿರುವ ಸಂದರ್ಶನದಲ್ಲಿ ಎರಡು ಸಿನಿಮಾಗಳು ಒಂದೇ ದಿನ ಬಿಡುಗಡೆಯಾಗುತ್ತಿರುವ ಬಗ್ಗೆ ಮಾತನಾಡಿದ್ದು, ‘ಈ ವಿಷಯವಾಗಿ ನಾನು ಖುದ್ದಾಗಿ ದುಂಡು ವಿಜಯ್ ಜೊತೆಗೆ ಮಾತನಾಡಿದ್ದು, ನನ್ನ ಸಿನಿಮಾವನ್ನು ಏಕೆ ಕೊಲೆ ಮಾಡುತ್ತಿದೆ’ ಎಂದು ಪ್ರಶ್ನಿಸಿದ್ದಾರೆ.

‘ನಾವು ಅಕ್ಟೋಬರ್ 2ನೇ ತಾರೀಖಿನಂದೇ ನಮ್ಮ ಸಿನಿಮಾದ ಬಿಡುಗಡೆ ದಿನಾಂಕ ಜನವರಿ 23 ಎಂದು ಘೋಷಣೆ ಮಾಡಿದೆ. ಅಂದು ರಚಿತಾ ರಾಮ್ ಅವರ ಹುಟ್ಟುಹಬ್ಬ ಇತ್ತು, ವಿಶೇಷ ದಿನದಂದೇ ನಮ್ಮ ಸಿನಿಮಾದ ರಿಲೀಸ್ ಡೇಟ್ ಅನೌನ್ಸ್ ಮಾಡಿದೆ. ಆದರೆ ಅವರು ತುಸು ತಡವಾಗಿ ಘೋಷಿಸಿದರು. ಎಷ್ಟು ಆಗಲಿ ಅವರು ಸೂಪರ್ ಸ್ಟಾರ್ ನಾನು ಅವರಿಗೆ ಕರೆ ಮಾಡಿ ನೋಡಿ ಸರ್ ಮುಂದೆ ಹಾಕಿಕೊಳ್ಳಲು ಆಗುತ್ತಾ? ನನ್ನ ಸಿನಿಮಾವನ್ನೇ ಕೊಲೆ ಮಾಡ್ತಿದ್ದೀರಲ್ಲ, ಅಷ್ಟೇ ಆಗಲಿ, ನಾನು ನಿಮ್ಮ ಹುಡುಗನೇ ಕೇಳಿಕೊಂಡೆ’ ಎಂದು ಝೀದ್ ಖಾನ್.

ಇದನ್ನೂ ಓದಿ:ದುನಿಯಾ ವಿಜಯ್ ನಟನೆಯನ್ನು ಮೆಚ್ಚಿ ಕೊಂಡಾಡಿದ ತೆಲುಗಿನ ಸ್ಟಾರ್ ನಿರ್ದೇಶಕ

‘ಅದಕ್ಕೆ ಉತ್ತರಿಸಿದ ದುನಿಯಾ ವಿಜಯ್, ಜನವರಿ 20 ರಂದು ನನ್ನ ಹುಟ್ಟುಹಬ್ಬದಂದು ಆ ಸಮಯಕ್ಕೆ ಸಿನಿಮಾ ರಿಲೀಸ್ ಮಾಡುವಾಗ ನಾನು ಪಾಲಿಸಿಕೊಂಡು ಬಂದಿದ್ದೇನೆ. ಎರಡು ಸಿನಿಮಾಗಳು ಒಟ್ಟಿಗೆ ಬರ್ತಿವೆ ಅಂತ ನೀನೇನು ತಲೆ ಕೆಡಿಸಿಕೊಳ್ಳೋಕೆ ಹೋಗಬೇಡ. ಅದೇನು ದೊಡ್ಡ ಸಮಸ್ಯೆ ಆಗಲ್ಲ. ನಮ್ಮಲ್ಲಿ ಸಾಕಷ್ಟು ಚಿತ್ರಮಂದಿರಗಳು ಇವೆ, ಒಳ್ಳೆಯ ಆಡಿಯೆನ್ಸ್ ಸಹ ಇದ್ದಾರೆ. ನನಗಿರುವ ಪ್ರೇಕ್ಷರೇ ಬೇರೆ, ನಿನಗಿರುವ ನಟರೇ ಬೇರೆ ಯಾರೂ ಬಂದರೂ ಸಮಸ್ಯೆ ಆಗಲ್ಲ’ ಎಂದು ಝೈದ್ ಖಾನ್ ಹೇಳಿದ್ದಾರೆ.

‘ಆಗ ನಾನು, ಸರಿ ಸರ್, ಹಾಗಿದ್ದರೆ ನಾನು ‘ಕಲ್ಟ್’ ಪ್ರಚಾರಕ್ಕೆ ಹೋದಾಗೆಲ್ಲ ‘ಲ್ಯಾಂಡ್‌ಲಾರ್ಡ್’ ಸಿನಿಮಾದ ಪ್ರಚಾರವನ್ನೂ ಮಾಡುತ್ತೀನಿ, ನೀವು ‘ಲ್ಯಾಂಡ್‌ಲಾರ್ಡ್’ ಸಿನಿಮಾ ಪ್ರಚಾರಕ್ಕೆ ಹೋದಾಗೆಲ್ಲ ‘ಕಲ್ಟ್’ ಸಿನಿಮಾದ ಬಗ್ಗೆಯೂ ಮಾತನಾಡಿ, ಎರಡು ಕನ್ನಡ ಸಿನಿಮಾನೇ, ಜೊತೆಯಾಗಿ ಕೈಹಿಡಿದುಕೊಂಡು ಕೆಲಸ ಮಾಡೋಣ, ಜೋಡೆತ್ತಿನ ರೀತಿ ಕೆಲಸ ಮಾಡೋಣ ಎಂದ, ದುನಿಯಾ ವಿಜಯ್ ಅವರು ಸಹ ಒಪ್ಪಿಕೊಂಡರು. ಈಗ ಇಬ್ಬರ ಸಿನಿಮಾಗಳು ಸಹ ಒಂದೇ ದಿನ ಬಿಡುಗಡೆಯಾಗುತ್ತಿವೆ’

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ



Source link

Leave a Reply

Your email address will not be published. Required fields are marked *