‘ಅಣ್ಣಯ್ಯ’ ಸೀರಿಯಲ್‌ನಿಂದ ಲೀಲಾ ಪಾತ್ರಧಾರಿ ಶ್ರುತಿ ತಾತ್ಕಾಲಿಕವಾಗಿ ದೂರವಾಗಿದ್ದಾರೆ. ಇದೀಗ ಸಹನಟರಾದ ಮಾದಪ್ಪ, ಸೀನ ಮತ್ತು ಭಾನು ತಮಾಷೆಯ ರೀಲ್ಸ್ ಮಾಡಿ, ಲೀಲಾಳನ್ನು ವಾಪಸ್ ಬರುವಂತೆ ಕರೆದಿದ್ದು, ಈ ವಿಡಿಯೋ ವೈರಲ್ ಆಗಿದೆ.
15

Image Credit : Zee Kannada
ಅಣ್ಣಯ್ಯ ಸೀರಿಯಲ್‌ನ ಮಾದಪ್ಪನ ಪಾತ್ರ
ಮಾವ ಅಂದ್ರೆ ಹೇಗಿರಬೇಕೆಂದು ಅಣ್ಣಯ್ಯ ಸೀರಿಯಲ್‌ನ ಮಾದಪ್ಪನ ಪಾತ್ರ ತೋರಿಸುತ್ತಿದೆ. ಮಗನಿಗೆ ತೆಳ್ಳಗೆ ಬೆಳ್ಳಗಿರುವ ಮತ್ತು ಅವನಿಷ್ಟದ ಹುಡುಗಿ ಜೊತೆ ಮದುವೆ ಮಾಡಿಸಬೇಕು ಅನ್ನೋದು ಲೀಲಾಳ ಗುರಿಯಾಗಿದೆ. ಮಾದಪ್ಪ ಸೊಸೆ ಪರವಾಗಿ ನಿಂತಿದ್ರೆ, ಪಿಂಕಿ ಜೊತೆಯಲ್ಲಿ ಸೀನನಿಗೆ ಮದುವೆ ಮಾಡಿಸಬೇಕೆಂದು ಲೀಲಾ ಪಣ ತೊಟ್ಟಿದ್ದಾಳೆ.
25
Image Credit : Zee Kannada
ಮಾದಪ್ಪನ ತುಂಬು ಕುಟುಂಬ
ಸದ್ಯ ಲೀಲಾ ಪಾತ್ರ ಸೀರಿಯಲ್‌ನಿಂದ ದೂರವಾಗಿದೆ. ತಂದೆಗೆ ಅನಾರೋಗ್ಯ ವಿಷಯ ತಿಳಿದ ಲೀಲಾ ತವರಿಗೆ ಹೋಗಿದ್ದಾಳೆ. ಇತ್ತ ಶಾರದಮ್ಮಳ ಎಂಟ್ರಿಯಾಗಿದೆ. ಶಾರದಮ್ಮ ಎಂಟ್ರಿಗಾಗಿಯೇ ಲೀಲಾ ಪಾತ್ರಕ್ಕೆ ಸಣ್ಣದಾದ ಬ್ರೇಕ್ ನೀಡಿದಂತೆ ಕಾಣಿಸುತ್ತಿದೆ. ಆದ್ರೆ ವೀಕ್ಷಕರು ಸಹ ಮಾದಪ್ಪನ ತುಂಬು ಕುಟುಂಬವನ್ನು ಮಿಸ್ ಮಾಡಿಕೊಳ್ಳುತ್ತಿದ್ದಾರೆ.
35
Image Credit : Zee Kannada
ನಟಿ ಶ್ರುತಿ
ಲೀಲಾ ಪಾತ್ರದಲ್ಲಿ ನಟಿ ಶ್ರುತಿ ಅವರು ನಟಿಸಿದ್ದು, ಉತ್ತಮ ನೃತ್ಯಗಾರ್ತಿಯೂ ಆಗಿದ್ದಾರೆ. ವಯಸ್ಸಿಗೆ ಮೀರಿದ ಪಾತ್ರವಾದ್ರೂ ಖುಷಿ ನೀಡಿದೆ ಎಂದು ಹೇಳಿಕೊಂಡಿದ್ದಾರೆ. ಸದ್ಯ ಸೀರಿಯಲ್‌ನಿಂದ ಬಿಡುವು ಮಾಡಿಕೊಂಡಿರುವ ಶ್ರುತಿ, ಸೋಶಿಯಲ್ ಮೀಡಿಯಾದಲ್ಲಿ ಆಕ್ಟಿವ್ ಆಗಿದ್ದಾರೆ. ಡ್ಯಾನ್ಸ್ ಮಾಡುತ್ತಿರುವ ರೀಲ್ಸ್‌ಗಳನ್ನು ಶ್ರುತಿ ಅವರು ಶೇರ್ ಮಾಡಿಕೊಳ್ಳುತ್ತಿದ್ದಾರೆ.
45
Image Credit : Zee Kannada
ಲೀಲಾ ಬಂದು ಬಿಡು
55
Image Credit : Zee Kannada
ತಮಾಷೆಯ ರೀಲ್ಸ್
ಸದ್ಯ ಈ ನಾಲ್ಕು ಜನರ ತಮಾಷೆಯ ರೀಲ್ಸ್ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ. ಲೀಲಾ ಅವರನ್ನು ಮತ್ತೆ ಸೀರಿಯಲ್‌ಗೆ ಕರೆದುಕೊಂಡು ಬನ್ನಿ ಎಂದು ವೀಕ್ಷಕರು ಕಮೆಂಟ್ ಮಾಡಿದ್ದಾರೆ. ಸದ್ಯ ಶಾರದಮ್ಮಾ ಮನೆಯಲ್ಲಿರುವ ವಿಷಯ ಲೀಲಾಗೆ ತಿಳಿದಿಲ್ಲ. ಲೀಲಾ ಬಂದ್ಮೇಲೆ ಏನಾಗಬಹುದು ಎಂದು ವೀಕ್ಷಕರು ಲೆಕ್ಕ ಹಾಕ್ತಿದ್ದಾರೆ.
ಇದನ್ನೂ ಓದಿ: ಗೊಂದಲದಲ್ಲಿ Annayya Serial ವೀಕ್ಷಕರು… ಶಿವುಗೆ ಮೊದಲೇ ಮದ್ವೆಯಾಗಿ ಮಗುವಾಗಿತ್ತಾ?