Headlines

Brahmagantu Serial: ಸೌಂದರ್ಯ ದ್ವೇಷಕ್ಕೆ ಕೊನೆಗೂ ದೀಪಾ ಸತ್ತೇ ಹೋದಳು; ಧಾರಾವಾಹಿಯೇ ಮುಗಿತಿದ್ಯಾ?

Brahmagantu Serial: ಸೌಂದರ್ಯ ದ್ವೇಷಕ್ಕೆ ಕೊನೆಗೂ ದೀಪಾ ಸತ್ತೇ ಹೋದಳು; ಧಾರಾವಾಹಿಯೇ ಮುಗಿತಿದ್ಯಾ?

Brahmagantu Serial: ಸೌಂದರ್ಯ ದ್ವೇಷಕ್ಕೆ ಕೊನೆಗೂ ದೀಪಾ ಸತ್ತೇ ಹೋದಳು; ಧಾರಾವಾಹಿಯೇ ಮುಗಿತಿದ್ಯಾ?

Brahmagantu Serial Kannada: ಬ್ರಹ್ಮಗಂಟು ಧಾರಾವಾಹಿಯಲ್ಲಿ ಸೌಂದರ್ಯ ದ್ವೇಷ ಮಿತಿ ಮೀರಿದೆ. ಈಗಾಗಲೇ ಚಿರು ತಂದೆಯನ್ನು ವೀಲ್‌ಚೇರ್‌ ಮೇಲೆ ಕೂರೋ ಹಾಗೆ ಮಾಡಿರೋ ಸೌಂದರ್ಯ ಈಗ ದೀಪಾಳನ್ನು ಅವಳ ಪತಿಯಿಂದ ದೂರ ಮಾಡುವ ಆಲೋಚನೆ ಮಾಡಿದ್ದಾಳೆ. ಈ ಬಗ್ಗೆ ಇನ್ನಷ್ಟು ಮಾಹಿತಿ ಇಲ್ಲಿದೆ.

ಸೀರಿಯಲ್‌ಗಳಲ್ಲಿ ಒಂದಲ್ಲ ಒಂದು ಟ್ವಿಸ್ಟ್‌ ಬರುತ್ತಲೇ ಇರುತ್ತದೆ. ಈಗ ಬ್ರಹ್ಮಗಂಟು ಧಾರಾವಾಹಿಯಲ್ಲಿ ಕೂಡ ಹೊಸ ಟ್ವಿಸ್ಟ್‌ ಬಂದಿದೆ. ಇದು ವೀಕ್ಷಕರಿಗೆ ಆತಂಕ ಕೂಡ ತಂದಿದೆ.

ಹಳೆಯ ದ್ವೇಷದ ಕಾರಣಕ್ಕೆ ಚಿರು ಮನೆಯಲ್ಲಿ ತೊಟ್ಟಿಲು ತೂಗೋದು ಅವಳಿಗೆ ಇಷ್ಟವೇ ಇಲ್ಲ. ಹೀಗಾಗಿ ರೂಪಾಗೆ ಮಗು ಆಗೋದಿಲ್ಲ ಎಂದು ತಿಳಿದು, ಅವಳನ್ನು ಚಿರಾಗ್‌ಗೆ ಮದುವೆ ಮಾಡಿಸುವ ಆಲೋಚನೆ ಮಾಡಿದ್ದಳು, ಆದರೆ ದೀಪಾ ಹಾಗೂ ಚಿರು ಮದುವೆ ಆಗುವ ಹಾಗೆ ಆಯ್ತು.

ಕುರೂಪಿ ಎಂದು ಚಿರಾಗ್‌, ರೂಪಾಳನ್ನು ದೂರ ಇಟ್ಟಿದ್ದನು. ಅವನಿಗೆ ಅವಳನ್ನು ಕಂಡರೆ ಇಷ್ಟವೇ ಇರಲಿಲ್ಲ. ಕೊನೆಗೂ ಅವನು ರೂಪಾಳ ಗುಣಕ್ಕೆ ಮಾರು ಹೋದನು. ಹೀಗಾಗಿ ಇವರಿಬ್ಬರು ಒಂದಾಗಿದ್ದಾರೆ. ಇದನ್ನು ಸೌಂದರ್ಯಾಗೆ ಸಹಿಸೋಕೆ ಆಗ್ತಿಲ್ಲ.

ಎಲ್ಲರಿಗೂ ತೊಂದರೆ ಕೊಡ್ತೀನಿ ಎಂದು ದೀಪಾಗೆ ಸೌಂದರ್ಯ ಟಾರ್ಚರ್‌ ಮಾಡುತ್ತಿದ್ದಳು. ಹೀಗಾಗಿ ದೀಪಾ ಸದಾ ಗಾಬರಿಯಲ್ಲಿ ವರ್ತಿಸುತ್ತಿದ್ದಳು. ದೀಪಾಗೆ ತಲೆ ಕೆಟ್ಟಿದೆ ಎಂದು ಮನೆಯವರೆಲ್ಲ ನಂಬುವ ಹಾಗೆ ಸೌಂದರ್ಯ ಮಾಡಿದ್ದಳು.

ಈಗ ದೀಪಾ ಬೆಟ್ಟದ ಮೇಲಿನ ತಪ್ಪಲಿನಲ್ಲಿ ನಿಂತಿದ್ದಾಳೆ. ದೀಪಾಳನ್ನು ಸೌಂದರ್ಯ ಗನ್‌ ಇಟ್ಟು ಶೂಟ್‌ ಮಾಡಿದ್ದಾಳೆ. ದೀಪಾಗೆ ಅಪಾಯ ಇದೆ ಎಂದು ಚಿರಾಗ್‌ ಅಲ್ಲಿಗೆ ಬಂದಿದ್ದಾನೆ, ಅಲ್ಲಿ ನೋಡಿದರೆ ದೀಪಾ ಸಾವಾಗಿದೆ. ಇಷ್ಟು ಪ್ರೋಮೋದಲ್ಲಿ ಕಾಣಿಸಿದೆ. ದೀಪಾ ಸಾವಿನಿಂದಲೇ ಸೀರಿಯಲ್‌ ಅಂತ್ಯವಾಗಲಿದ್ಯಾ ಎಂಬ ಅನುಮಾನ ಕಾಡುತ್ತಿದೆ. ಮುಂದಿನ ಸಂಚಿಕೆಗಳಲ್ಲಿ ಮತ್ತೆ ದೀಪಾ ಬದುಕಿ ಬಂದರೂ ಬರಬಹುದು

Source link

Leave a Reply

Your email address will not be published. Required fields are marked *