ಎಐ ಬಂದ್ರೂ ಈ ಜಾಬ್‌ಗಿಲ್ಲ ಆತಂಕ, ಜೋಹೋ ಸಂಸ್ಥಾಪಕ ಮಾಡಿದ ಲಿಸ್ಟ್‌ನಲ್ಲಿ ನಿಮ್ಮ ಕೆಲಸ ಇದೆಯಾ?

ಎಐ ಬಂದ್ರೂ ಈ ಜಾಬ್‌ಗಿಲ್ಲ ಆತಂಕ, ಜೋಹೋ ಸಂಸ್ಥಾಪಕ ಮಾಡಿದ ಲಿಸ್ಟ್‌ನಲ್ಲಿ ನಿಮ್ಮ ಕೆಲಸ ಇದೆಯಾ?

ಎಐ ಬಂದ್ರೂ ಈ ಜಾಬ್‌ಗಿಲ್ಲ ಆತಂಕ, ಜೋಹೋ ಸಂಸ್ಥಾಪಕ ಮಾಡಿದ ಲಿಸ್ಟ್‌ನಲ್ಲಿ ನಿಮ್ಮ ಕೆಲಸ ಇದೆಯಾ?

ಎಐ ಬಂದ್ರೂ ಈ ಜಾಬ್‌ಗಿಲ್ಲ ಆತಂಕ, ಜೋಹೋ ಸಂಸ್ಥಾಪಕ ಮಾಡಿದ ಲಿಸ್ಟ್‌ನಲ್ಲಿ ನಿಮ್ಮ ಕೆಲಸ ಇದೆಯಾ?, ಈಗಾಗಲೇ ಜಾಗತಿಕ ಮಟ್ಟದ ಸರ್ವೆಗಳು ಶೇಕಡಾ 40ರಷ್ಟು ಉದ್ಯೋಗಕ್ಕೆ ಎಐನಿಂದ ಆಪತ್ತು ಎದುರಾಗಿದೆ ಎಂದಿದೆ.ಎಐ ಸೇರಿ ಏನೇ ಬಂದರೂ ಈ ಕೆಲಸ ಹೋಗಲ್ಲ ಎಂದಿದ್ದಾರೆ.

ಆರ್ಟಿಫೀಶಿಯಲ್ ಇಂಟಲಿಜೆನ್ಸ್ (ಎಐ) ಎಲ್ಲಾ ಕ್ಷೇತ್ರಗಳನ್ನು ಆವರಿಸಿಕೊಳ್ಳುತ್ತಿದೆ. ಇದರ ಬೆನ್ನಲ್ಲೇ ಉದ್ಯೋಗ ಕಡಿತಗಳು ನಡೆಯುತ್ತಿದೆ. ಇತ್ತೀಚೆಗೆ ಬಿಡುಗಡೆಯಾಗ ಜಾಗತಿಕ ವರದಿ ಪ್ರಕಾರ ಎಐನಿಂದ ಶೇಕಡಾ 40 ರಷ್ಟು ಎಂಟ್ರಿ ಲೆವೆಲ್ ಕೆಲಸಕ್ಕೆ ಕುತ್ತು ಎದುರಾಗಲಿದೆ ಎಂದಿದೆ. ಇದೇ ವೇಳೆ ಎಐ ಇಂಪ್ಲಿಮೆಂಟ್ ಕಾರಣ ಪ್ರತಿಷ್ಠಿತ ಕಂಪನಿಗಳು ಈಗಾಗಲೇ ಉದ್ಯೋಗ ಕಡಿತ ಮಾಡಿದೆ. ಇದೀಗ ಜೋಹೋ ಸಂಸ್ಥಾಪಕ, ಭಾರತದ ಉದ್ಯಮಿ ಶ್ರೀಧರ್ ವೆಂಬು ಕೆಲ ಉದ್ಯೋಗಳ ಲಿಸ್ಟ್ ಮಾಡಿದ್ದಾರೆ. ಈ ಉದ್ಯೋಗಳು ಎಐ ಅಥವಾ ಇನ್ನೇನೆ ಬಂದರೂ ಸಮಸ್ಯೆ ಎದುರಾಗಲ್ಲ ಎಂದಿದ್ದಾರೆ.

ಎಐ ನಿಂದ ಎದುರಾಗುತ್ತಿರುವ ಉದ್ಯೋಗ ಆತಂಕದ ಬೆನ್ನಲ್ಲೇ ಶ್ರೀಧರ್ ವೆಂಬು ಕಲೆ ಉದ್ಯೋಗಳನ್ನು ಪಟ್ಟಿ ಮಾಡಿದ್ದಾರೆ. ಈ ಉದ್ಯೋಗಳು ಎಐ ಸಂಪೂರ್ಣ ಆವರಿಸಿಕೊಂಡರೂ ಸಮಸ್ಯೆಯಾಗುವುದಿಲ್ಲ ಎಂದಿದ್ದಾರೆ. ಈ ಪ್ರೊಫೆಶನ್ ಅತೀ ಹೆಚ್ಚು ಬೇಡಿಕೆಯ ಕ್ಷೇತ್ರವಾಗುವುದು ಮಾತ್ರವಲ್ಲ, ಉತ್ತಮ ವೇತನ ಕ್ಷೇತ್ರಗಳಾಗಿ ಮಾರ್ಪಡಲಿದೆ ಎಂದಿದ್ದಾರೆ.

ಎಐ ಆವರಿಸಿದರೂ ಕೆಲಸ ಕಳೆದುಕೊಳ್ಳದೇ ಮತ್ತಷ್ಟು ಬೇಡಿಕೆ ಪಡೆಯುವ ಕ್ಷೇತ್ರಗಳು, ಉದ್ಯೋಗ ಕುರಿತು ಶ್ರೀಧರ್ ವೆಂಬು ಲಿಸ್ಟ್ ಮಾಡಿದ್ದಾರೆ. ಮಕ್ಕಳ ಹಾಗೂ ಹಿರಿಯ ಆರೈಕೆ ಅಥವಾ ನೋಡಿಕೊಳ್ಳುವುದು, ದುಬಾರಿ ಸಂಬಳ ಬಿಟ್ಟು ಕೃಷಿಯತ್ತ ಮುಖಮಾಡುವುದು, ಪ್ಯಾಶನ್ ಅಥವಾ ಪ್ರೀತಿಯಿಂದ ಫಾರೆಸ್ಟ್ ರೇಂಜರ್ ಕೆಲಸ ಮಾಡುವುದು ಸೇರಿದಂತೆ ಇನ್ನು ಕೆಲ ಕೆಲಸಗಳಿಗೆ ಎಐನಿಂದ ಯಾವುದೇ ಆಪತ್ತಿಲ್ಲ ಎಂದಿದ್ದಾರೆ.

ಸ್ಥಳೀಯ ದೇವಸ್ಥಾನಗಳಲ್ಲಿ ಅರ್ಚಕ ವೃತ್ತಿ, ಅಂದರೆ ಹೆಚ್ಚಿನ ಮಂದಿ ಆ ದೇವಸ್ಥಾನಕ್ಕೆ ಭೇಟಿ ನೀಡದೆ ಇದ್ದರೂ ಪ್ರತಿ ದಿನ ಅಷ್ಟೇ ಭಕ್ತಿ, ಗೌರವದಿಂದ ಪೂಜೆ ಸಲ್ಲಿಸುವ ಅರ್ಚಕ ವೃತ್ತಿ, ಶಾಸ್ತ್ರೀಯ ಸಂಗೀತ, ಭಾರತೀಯ ಸಂಗೀತ ಹಾಗೂ ಹಾಡುಗಾರಿಕೆ, ಅದರಲ್ಲೂ ಹೆಚ್ಚಿನ ಪ್ರೇಕ್ಷಕರಿಲ್ಲದಿದ್ದರೂ ಅದೇ ಉತ್ಸಾಹ, ಅದೇ ತಾಳಬದ್ಧವಾಗಿ ಹಾಡುವ ಅಥವಾ ಕಾರ್ಯಕ್ರಮ ನಡೆಸಿಕೊಡುವ ಮ್ಯೂಸಿಶಿಯನ್ ಕೆಲಸಗಳಿಗೆ ಯಾವುದೇ ಎಐ ಕುತ್ತು ಎದುರಾಗುವುದಿಲ್ಲ ಎಂದು ವೆಂಬು ಹೇಳಿದ್ದಾರೆ.

ಈ ಕೆಲಸಗಳಿಗೆ ಎಐ ಯಾವುದೇ ರೀತಿಯ ಸಮಸ್ಯೆ ನೀಡುವುದಿಲ್ಲ. ಇಷ್ಟೇ ಅಲ್ಲ ಈ ಕ್ಷೇತ್ರಗಳು ಅತೀ ಹೆಚ್ಚು ಬೇಡಿಕೆ ಹಾಗೂ ವೇತನ ಗಿಟ್ಟಿಸಿಕೊಳ್ಳಲಿದೆ ಎಂದು ಶ್ರೀಧರ್ ವೆಂಬು ಹೇಳಿದ್ದಾರೆ. ವೆಂಬು ಮಾಡಿದ ಈ ಲಿಸ್ಟ್ ಇದೀಗ ಭಾರಿ ಚರ್ಚೆಯಾಗುತ್ತಿದೆ. ವೆಂಬು ತಮಾಷೆಯಾಗಿ ಹೇಳಿದ್ದಾರಾ? ಅಥವಾ ನಿಜಕ್ಕೂ ವಾಸ್ತವವನ್ನು ವಿವರಿಸಿದ್ದಾರಾ ಅನ್ನೋ ಪ್ರಶ್ನೆಗಳನ್ನು ಹಲವರು ಕೇಳಿದ್ದಾರೆ.

ಎಐ ನಿಂದ ಒಂದು ಹಂತದಲ್ಲಿ ಉದ್ಯೋಗದ ಮೇಲೆ ಪರಿಣಾಮ ಬೀರಲಿದೆ ಅನ್ನೋದು ಸ್ಪಷ್ಟ. ಇದೇ ವೇಳೆ ಹೊಸ ಉದ್ಯೋಗಳು, ಕ್ಷೇತ್ರಗಳು ಸೃಷ್ಟಿಯಾಗಲಿದೆ. ಈ ಕ್ಷೇತ್ರಗಳು ದಶಕಗಳ ಕಾಲ ನೆಲೆ ನಿಲ್ಲಲಿದೆ ಎಂದು ತಜ್ಞರು ಹೇಳಿದ್ದಾರೆ. ಮಹತ್ತರ ಬದಲಾವಣೆಯಲ್ಲಿ ಕೆಲ ಉದ್ಯೋಗಗಳು ಇಲ್ಲದಾಗುವುದು, ಹೊಸ ಉದ್ಯೋಗ ಸೃಷ್ಟಿಯಾಗುವುದು ಸಾಮಾನ್ಯ ಪ್ರಕ್ರಿಯೆ ಎಂದಿದ್ದಾರೆ.

ಎಐನಿಂದ ಹೊಸ ಉದ್ಯೋಗ ಸೃಷ್ಟಿ

Source link

Leave a Reply

Your email address will not be published. Required fields are marked *