Headlines

Zomato: ಹಳೆ ಉದ್ಯೋಗಿಗಳಿಗೆ ಬಂಪರ್ ಆಫರ್ ಕೊಟ್ಟ CEO! ಒಂದೇ ಒಂದು ಘೋಷಣೆಗೆ ಬರೋಬ್ಬರಿ 8000 ಇಮೇಲ್‌ಗಳು ಬಂದಿವೆ

Zomato: ಹಳೆ ಉದ್ಯೋಗಿಗಳಿಗೆ ಬಂಪರ್ ಆಫರ್ ಕೊಟ್ಟ CEO! ಒಂದೇ ಒಂದು ಘೋಷಣೆಗೆ ಬರೋಬ್ಬರಿ 8000 ಇಮೇಲ್‌ಗಳು ಬಂದಿವೆ



Zomato: ಹಳೆ ಉದ್ಯೋಗಿಗಳಿಗೆ ಬಂಪರ್ ಆಫರ್ ಕೊಟ್ಟ CEO! ಒಂದೇ ಒಂದು ಘೋಷಣೆಗೆ ಬರೋಬ್ಬರಿ 8000 ಇಮೇಲ್‌ಗಳು ಬಂದಿವೆ
ಝೊಮ್ಯಾಟೋ ಸಿಇಒ ದೀಪಿಂದರ್ ಗೋಯಲ್ ಮಾಡಿದ ಒಂದೇ ಒಂದು ಘೋಷಣೆಗೆ ಬರೋಬ್ಬರಿ 8000 ಇಮೇಲ್‌ಗಳು ಬಂದಿವೆ. ಹಿಂದೆ ತಮ್ಮ ಕಂಪನಿಯಲ್ಲಿ ಕೆಲಸ ಮಾಡಿದ್ದವರಿಗೆ ಮತ್ತೆ ಉದ್ಯೋಗಾವಕಾಶ ನೀಡುವುದಾಗಿ ಅವರು ಹೇಳಿದ್ದರು. ಇದಕ್ಕೆ ಸಾವಿರಾರು ಮಂದಿ ಸ್ಪಂದಿಸಿದ್ದಾರೆ.<img><p>ಝೊಮ್ಯಾಟೋ ಮಾಲೀಕ ದೀಪಿಂದರ್ ಗೋಯಲ್ ಮಾಡಿದ ಒಂದು ಕೆಲಸಕ್ಕೆ ಅವರಿಗೆ ಅನಿರೀಕ್ಷಿತ ಪ್ರತಿಕ್ರಿಯೆ ಸಿಕ್ಕಿದೆ. ಈ ಘೋಷಣೆ ಉದ್ಯಮ ಜಗತ್ತಿನಲ್ಲಿ, ವಿಶೇಷವಾಗಿ ಸ್ಟಾರ್ಟ್‌ಅಪ್ ವಲಯದಲ್ಲಿ ಹೊಸ ಚರ್ಚೆಗೆ ಕಾರಣವಾಗಿದೆ.&nbsp;</p><img><p>ಹಿಂದೆ ತಮ್ಮ ಕಂಪನಿಯಲ್ಲಿ ಕೆಲಸ ಮಾಡಿದ ಪ್ರತಿಭಾವಂತ ಉದ್ಯೋಗಿಗಳು ಹಿಂತಿರುಗಬೇಕೆಂದು ಅವರು ಸೋಶಿಯಲ್ ಮೀಡಿಯಾದಲ್ಲಿ ಕರೆ ನೀಡಿದ್ದರು. ಇದಕ್ಕಾಗಿ ವಿಶೇಷ ಇಮೇಲ್ ಐಡಿಯನ್ನೂ ಹಂಚಿಕೊಂಡಿದ್ದರು. ಕೆಲವೇ ದಿನಗಳಲ್ಲಿ, ಸುಮಾರು 8,000 ಇಮೇಲ್‌ಗಳು ಬಂದಿವೆ. ಇದನ್ನು ನೋಡಿ ತಾವೇ ಆಶ್ಚರ್ಯಚಕಿತರಾಗಿದ್ದಾಗಿ ದೀಪಿಂದರ್ ಗೋಯಲ್ ಹೇಳಿದ್ದಾರೆ.</p><img><p>ಬಂದ ಇಮೇಲ್‌ಗಳಲ್ಲಿ ಸುಮಾರು 4,000 ಮಾಜಿ ಉದ್ಯೋಗಿಗಳಿಂದ ಬಂದಿದ್ದವು. ಉಳಿದ 4,000 ಇಮೇಲ್‌ಗಳು ಹೊಸದಾಗಿ ಕಂಪನಿ ಸೇರಲು ಆಸಕ್ತಿ ತೋರಿದವರಿಂದ ಬಂದಿವೆ ಎಂದು ದೀಪಿಂದರ್ ಗೋಯಲ್ ತಿಳಿಸಿದ್ದಾರೆ.&nbsp;</p><img><p>ಹಳೆಯ ಉದ್ಯೋಗಿಗಳು ಕಳುಹಿಸಿದ ಇಮೇಲ್‌ಗಳನ್ನು ಓದುವಾಗ ತುಂಬಾ ಭಾವುಕನಾದೆ ಎಂದಿದ್ದಾರೆ. ಕಂಪನಿಯ ಆರಂಭದ ದಿನಗಳಲ್ಲಿ ಎದುರಿಸಿದ ಕಷ್ಟಗಳು, ಒಟ್ಟಿಗೆ ಕೆಲಸ ಮಾಡಿದ ಅನುಭವಗಳು ಮತ್ತು ಆ ದಿನಗಳ ನೆನಪುಗಳನ್ನು ಅವರು ವಿವರಿಸಿದ್ದಾರೆ. ಇವುಗಳನ್ನು ಓದುವಾಗ ಹೆಮ್ಮೆಯೆನಿಸಿತು ಎಂದು ಗೋಯಲ್ ಹೇಳಿದ್ದಾರೆ.</p><img>ಇಷ್ಟೊಂದು ಇಮೇಲ್‌ಗಳು ಬಂದಿರುವುದರಿಂದ ಎಲ್ಲವನ್ನೂ ಓದುವುದು ಕಷ್ಟವಾಗಿದೆ ಎಂದು ದೀಪಿಂದರ್ ಗೋಯಲ್ ಹೇಳಿದ್ದಾರೆ. ಕೆಲವು ಇಮೇಲ್‌ಗಳಲ್ಲಿನ ವಿಷಯಗಳನ್ನು ತಮ್ಮ ಎಚ್‌ಆರ್ ತಂಡಕ್ಕೆ ಸಂಪೂರ್ಣವಾಗಿ ಅರ್ಥಮಾಡಿಕೊಳ್ಳಲು ಸಾಧ್ಯವಾಗುತ್ತಿಲ್ಲ, ಹಾಗಾಗಿ ತಾವೇ ಖುದ್ದಾಗಿ ಹಲವು ಇಮೇಲ್‌ಗಳನ್ನು ಓದುತ್ತಿರುವುದಾಗಿ ತಿಳಿಸಿದ್ದಾರೆ. ಅಷ್ಟೇ ಅಲ್ಲ, ಹಿಂದೆ ನೇರವಾಗಿ ತನ್ನೊಂದಿಗೆ ಕೆಲಸ ಮಾಡಿದವರು ಇಮೇಲ್ ರಿಪ್ಲೈಗಾಗಿ ಕಾಯಬೇಡಿ, ನನ್ನ ಫೋನ್ ನಂಬರ್ ಹುಡುಕಿ ನೇರವಾಗಿ ವಾಟ್ಸಾಪ್ ಮಾಡಿ ಎಂದು ಅವರು ಸಲಹೆ ನೀಡಿದ್ದಾರೆ. ದೊಡ್ಡ ಕಂಪನಿಯ ಸಂಸ್ಥಾಪಕರೊಬ್ಬರು ಹೀಗೆ ಹೇಳಿರುವುದು ಸೋಶಿಯಲ್ ಮೀಡಿಯಾದಲ್ಲಿ ಚರ್ಚೆಗೆ ಗ್ರಾಸವಾಗಿದೆ.<img>ದೀಪಿಂದರ್ ಗೋಯಲ್ ಅವರ ಈ ಘೋಷಣೆ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಕೆಲ ನೆಟ್ಟಿಗರು ತಮಾಷೆಯಾಗಿ ಕಾಮೆಂಟ್ ಮಾಡಿದರೆ, ಇನ್ನು ಕೆಲವರು ಗೋಯಲ್ ನಿರ್ಧಾರವನ್ನು ಶ್ಲಾಘಿಸಿದ್ದಾರೆ. ಸ್ಟಾರ್ಟ್‌ಅಪ್ ವಲಯದಲ್ಲಿ ಲೇ-ಆಫ್‌ಗಳು ನಡೆಯುತ್ತಿರುವ ಈ ಸಮಯದಲ್ಲಿ, ಹಳೆಯ ಉದ್ಯೋಗಿಗಳನ್ನು ಮರಳಿ ಆಹ್ವಾನಿಸುವುದು ಉತ್ತಮ ಬೆಳವಣಿಗೆ ಎಂದು ಹೇಳುತ್ತಿದ್ದಾರೆ. ಕಂಪನಿಯೊಂದಿಗೆ ಸಂಬಂಧ ಹೊಂದಿದ್ದವರನ್ನು ಗೌರವಿಸುವುದು ಮತ್ತು ಅವರ ಅನುಭವವನ್ನು ಮರುಬಳಕೆ ಮಾಡಿಕೊಳ್ಳುವುದು ಒಳ್ಳೆಯ ನಿರ್ಧಾರ ಎಂದು ಉದ್ಯಮ ತಜ್ಞರು ಅಭಿಪ್ರಾಯಪಟ್ಟಿದ್ದಾರೆ. ಆದರೆ, ಇಮೇಲ್ ಕಳುಹಿಸಿದವರಲ್ಲಿ ಎಷ್ಟು ಜನರಿಗೆ ಉದ್ಯೋಗ ಸಿಗಲಿದೆ ಎಂಬುದನ್ನು ಕಾದು ನೋಡಬೇಕಿದೆ.



Source link

Leave a Reply

Your email address will not be published. Required fields are marked *