ಟೆಂಪಲ್ ಸ್ಟಾರ್ಟ್ಅಪ್ ನೇಮಕಾತಿ ಆರಂಭ, ಒಂದೇ ಕಂಡೀಷನ್ ದೇಹದ ಫ್ಯಾಟ್ ಶೇ.16ರ ಒಳಗಿರಬೇಕು, ಜೊಮ್ಯಾಟೋ ಸಂಸ್ಥಾಪಕ ದೀಪಿಂದರ್ ಗೋಯಲ್ ಆರಂಭಿಸಿರುವ ಈ ಕಂಪನಿಯ ನೇಮಕಾತಿ ಹಾಗೂ ಅರ್ಹತೆ ಇದೀಗ ಭಾರಿ ಸದ್ದು ಮಾಡುತ್ತಿದೆ.

ಸ್ಟಾರ್ಟ್ಅಪ್ ಕಂಪನಿಗಳ ನೇಮಕಾತಿಗಳು ಹಲವು ಬಾರಿ ಗಮನಸೆಳೆಯುತ್ತದೆ. ನಿಮ್ಮ ಸರ್ಟಿಫಿಕೇಟ್ ಬೇಕಿಲ್ಲ, ಆದರೆ ಪ್ರತಿಭೆ ಇರಬೇಕು, ಸ್ಕಿಲ್ ಗೊತ್ತಿರಬೇಕು ಅಷ್ಟೆ ಎಂದು ಹಲವು ಕಂಪನಿಗಳು ನೇಮಕಾತಿ ಮಾಡಿಕೊಂಡ ಉದಾಹರಣೆಗಳಿವೆ. ಪ್ರತಿಭೆ ಆಧಾರದಲ್ಲಿ ಹಲವರು ಉತ್ತಮ ವೇತನದ ಉದ್ಯೋಗ ಗಿಟ್ಟಿಸಿಕೊಂಡಿದ್ದಾರೆ. ಇದೀಗ ಟೆಂಪಲ್ ಸ್ಟಾರ್ಟ್ಅಪ್ ಕಂಪನಿ ನೇಮಕಾತಿ ಆರಂಭಿಸಿದೆ. ಈ ಗುರಿತು ಸಂಸ್ಥಾಪಕ ದೀಪೀಂದರ್ ಗೋಯಲ್ ಘೋಷಣೆ ಮಾಡಿದ್ದಾರೆ. ಜೊಮ್ಯಾಟೋ ಸಂಸ್ಥೆ ಹುಟ್ಟುಹಾಕಿ ಯಶಸ್ವಿಯಾಗಿ ದೀಪಿಂದರ್ ಗೋಯಲ್ ಇದೀಗ ಟೆಂಪಲ್ ಕಂಪನಿ ನೇಮಕಾತಿಗೆ ಹಾಕಿದ ಒಂದು ಕಂಡೀಷನ್ ಇದೀಗ ಚರ್ಚೆಯಾಗುತ್ತಿದೆ.

ನೇಮಕಾತಿ ವೇಳೆ ಪದವಿಧರರಾಗಿರಬೇಕು, ಎಂಜಿನೀಯರ್, ಕನಿಷ್ಠ ವರ್ಷಗಳ ಅನುಭವ ಸೇರಿದಂತೆ ಹಲವು ಸ್ಕಿಲ್ ಗೊತ್ತಿರಬೇಕು ಅನ್ನೋ ಕಂಡೀಷನ್ ಹಾಕುವುದು ಹೊಸದೇನಲ್ಲ. ಆದರೆ ದೀಪಿಂದರ್ ಗೋಯಲ್ ಅವರ ಟೆಂಪಲ್ ಸ್ಟಾರ್ಟ್ಅಪ್ ಕಂಪನಿ ನೇಮಕಾತಿಗೆ ಹಾಕಿದ ಕಂಡೀಷನ್ ನಿಮ್ಮ ದೇಹದ ಫ್ಯಾಟ್ ಶೇಕಡಾ 16ಕ್ಕಿಂತ ಕೆಳಗಿರಬೇಕು.

ಟೆಂಪಲ್ ಸ್ಟಾರ್ಟ್ಅಪ್ ಕಂಪನಿಯಲ್ಲಿ ಕೆಲಸ ಗಿಟ್ಟಿಸಿಕೊಳ್ಳಲು ಪುರುಷರಾದರೆ ದೇಹದ ಕೊಬ್ಬು(ಫ್ಯಾಟ್ ) ಶೇಕಡಾ 16ರ ಒಳಗಿರಬೇಕು. ಇನ್ನು ಮಹಿಳೆಯರಾದರೆ ಫ್ಯಾಟ್ ಶೇಕಡಾ 26ರ ಒಳಗಿರಬೇಕು. ಇದು ಪ್ರಮುಖ ಕಂಡೀಷನ್. ಈ ಅರ್ಹತೆ ನಿಮ್ಮಲ್ಲಿದ್ದರೆ ನೀವೂ ಉತ್ತಮ ವೇತನದ ಉದ್ಯೋಗ ಗಿಟ್ಟಸಿಕೊಳ್ಳಬಹುದು.

ಮತ್ತೊಂದು ಅವಕಾಶ ನೀಡಲಾಗಿದೆ. ಅಭ್ಯರ್ಥಿ ಅತ್ಯಂತ ಪ್ರತಿಭವನಂತನಾಗಿದ್ದರೆ ಒಂದು ಅವಕಾಶ ಸಿಗಲಿದೆ. ಪ್ರತಿಭೆ, ಕೋಡಿಂಗ್, ಡೆವಲಪ್ಪಿಂಗ್, ಅನುಭವ ಸೇರಿದಂತೆ ಎಲ್ಲಾ ವಿಚಾರಲ್ಲಿ ಅಭ್ಯರ್ಥಿಯ ಉತ್ತಮವಾಗಿದ್ದರೆ, ಮೂರು ತಿಂಗಳ ಕಾಲಾವಕಾಶ ನೀಡಲಾಗುತ್ತದೆ. ಈ ಮೂರ ತಿಂಗಳ ಅವಧಿಯಲ್ಲಿ ಕೊಬ್ಬಿನಾಂಶ ಕಡಿಮೆ ಮಾಡಬೇಕು. ಇಲ್ಲಿದ್ದರೆ ಕಂಪನಿಯಿಂದ ಔಟ್.

ದೀಪೀಂದರ್ ಗೋಯಲ್ ಅವರ ಟೆಂಪಲ್ ಸ್ಟಾರ್ಟ್ಅಪ್ ಹೆಲ್ತ್ ಟೆಕ್ ಕಂಪನಿಯಾಗಿದೆ. ಇದು ವಿಶೇಷವಾಗಿ ಕ್ರೀಡಾಪಟುಗಳ ಆಧರಿಸಿದ ಹೆಲ್ತ್ ಟೆಕ್ ಸಾಧನ. ಕ್ರೀಡಾಪಟುಗಳು ಧರಿಸಬಹುದಾದ ಟೆಕ್ ಸಾಧನ ಇದಾಗಿದೆ. ಈ ಸ್ಟಾರ್ಟ್ಅಪ್ ಕಂಪನಿಯಲ್ಲಿ ನೇಮಕಾತಿಗೆ ಎಂಜಿನೀಯರ್ ಆಗಿದ್ದರೆ ಸಾಲದು ಜೊತೆಗೆ ಫ್ಯಾಟ್ ನಿಗದಿತ ಪ್ರಮಾಣದಲ್ಲಿರ ಇರಬೇಕು ಎಂದು ಗೋಯಲ್ ಸ್ಪಷ್ಟವಾಗಿ ಕಂಡೀಷನ್ ಹಾಕಿದ್ದಾರೆ.

ಹೆಲ್ತ್ ಟೆಕ್ ಆಗಿರುವ ಕಾರಣ ನಾವು ಏನು ತಯಾರಿಸುತ್ತೇವೋ, ಅದನ್ನು ಮೊದಲು ನಾವು ಧರಿಸಬೇಕು. ಹೀಗಾಗಿ ನಾವು ಕೂಡ ಕ್ರೀಡಾಪಟುಗಳಂತೆ ಫಿಟ್ ಆಗಿರಬೇಕು ಎಂದು ದೀಪಿಂದರ್ ಗೋಯಲ್ ಕಂಡೀಷನ್ ಹಾಕಿದ್ದಾರೆ. ಹೀಗಾಗಿಯ ಟೆಂಪಲ್ ಕಂಪನಿಯಲ್ಲಿ ಸೇರಬಯಸುವ ಎಂಜಿನೀಯರ್ಸ್ ಫಿಟ್ ಕೂಡ ಆಗರಬೇಕು. ಹೀಗಿದ್ದರೆ ಮಾತ್ರ ನಿಮ್ಮ ರೆಸ್ಯೂಮ್ ಪರಿಗಣಿಸಲಾಗುತ್ತದೆ.

ಕ್ರೀಡಾಪಟುಗಳಂತೆ ಫಿಟ್

Source link
ಟೆಂಪಲ್ ಸ್ಟಾರ್ಟ್ಅಪ್ ನೇಮಕಾತಿ ಆರಂಭ, ಒಂದೇ ಕಂಡೀಷನ್ ದೇಹದ ಫ್ಯಾಟ್ ಶೇ.16ರ ಒಳಗಿರಬೇಕು