ಶೂ ತೊಳೆಯೋಕೆ ಟೈಂ ಇಲ್ಲ ಅನ್ನೋರು ಮಾತ್ರ ಹೀಗೆ ಮಾಡಿ, ವಾಶ್ ಮಾಡದೆಯೇ ದುರ್ವಾಸನೆ ಹೋಗುತ್ತೆ
<p>Shoe odor removal tips Kannada: ಶೂಗಳನ್ನು ತೊಳೆಯಲು ಸಮಯವಿಲ್ಲದಿದ್ದರೆ ಅಥವಾ ಶೂಗಳು ಹೊರಗಿನಿಂದ ಸ್ವಚ್ಛವಾಗಿದ್ದು, ಕೇವಲ ವಾಸನೆ ಮಾತ್ರ ಬರುತ್ತಿದ್ದರೆ ಈ ಸರಳ ಟ್ರಿಕ್ಸ್ ಸಹಾಯಕ್ಕೆ ಬರುತ್ತೆ. ಶೂ ವಾಶ್ ಮಾಡದೆ ಅವುಗಳನ್ನು ಫ್ರೆಶ್ ಆಗಿಡುವುದು ಹೇಗೆ? ಇಲ್ಲಿದೆ ವಿವರವಾದ ಮಾಹಿತಿ. </p><img><p>ಬೇಸಿಗೆಯ ಬಿಸಿಲಿನಲ್ಲಿ ಪಾದಗಳು ಅತಿಯಾಗಿ ಬೆವರುವುದರಿಂದ ಶೂಗಳ ಒಳಗೆ ತೇವಾಂಶ ಉಳಿದು ಬ್ಯಾಕ್ಟೀರಿಯಾಗಳು ಉತ್ಪತ್ತಿಯಾಗುತ್ತವೆ. ಇದರಿಂದ ಶೂಗಳನ್ನು ಬಿಚ್ಚಿದ ತಕ್ಷಣ ಅಸಹ್ಯಕರ ವಾಸನೆ ಬರಲು ಪ್ರಾರಂಭವಾಗುತ್ತದೆ. ಆಫೀಸ್, ಕಾಲೇಜು ಅಥವಾ ಸ್ನೇಹಿತರ ಮನೆಗೆ…