ರಾಯಲ್ ಎನ್‌ಫೀಲ್ಡ್ ಕ್ಲಾಸಿಕ್ 650: ಶೈಲಿಯಷ್ಟೇ ಶಕ್ತಿ ಹೊಂದಿದ ಹೊಸ ಕ್ರೂಸರ್ ಬೈಕ್ | New Royal Enfield Classic 650 Specs Review Gvd
ಒಂದು ಕ್ಲಾಸಿಕ್ ಲುಕ್ಕಿನ, ಹೈವೇಯಲ್ಲಿಯೂ ಅದ್ಭುತವಾಗಿ ಓಡಬಹುದಾದ ಸೊಗಸಾದ ಬೈಕ್ ಅನ್ನು ಯಾರು ಬಯಸುತ್ತಿರುತ್ತಾರೋ ಇದು ಅವರಿಗೆಂದೇ ಇರುವ ಬೈಕ್. ವರ್ಷದಿಂದ ವರ್ಷಕ್ಕೆ ರಾಯಲ್ ಎನ್‌ಫೀಲ್ಡ್ ತನ್ನ ಬೈಕ್‌ಗಳಲ್ಲಿ ಸಾಕಷ್ಟು ಬದಲಾವಣೆಗಳನ್ನು ಮಾಡಿಕೊಳ್ಳುತ್ತಲೇ ಬಂದಿದೆ. ಇಂಜಿನ್‌ಗಳು ಅಪ್‌ಗ್ರೇಡ್ ಆಗಿವೆ. ಲುಕ್ಕು ಸ್ಟೈಲಿಶ್ ಆಗಿವೆ. ಆಧುನಿಕ ಕಾಲಕ್ಕೆ ತಕ್ಕಂತೆ ರೂಪ ಬದಲಾಗಿವೆ. ಆ ಪ್ರಕಾರ ಹೊಸ ಕಾಲಕ್ಕೆ ತಕ್ಕಂತೆ ರೂಪಿಸಿರುವ ಕಾಲಾತೀತ ರೂಪದ ಬೈಕ್ ರಾಯಲ್ ಎನ್‌ಫೀಲ್ಡ್ ಕ್ಲಾಸಿಕ್ 650. ಕಪ್ಪು ಬಣ್ಣದ ಕ್ಲಾಸಿಕ್ 650 ಅನ್ನು ಎಲ್ಲೋ…