ಬೆಂಗಳೂರು, (ಏಪ್ರಿಲ್ 17): ನಿವೇಶನದ ಖಾತೆ ಮಾಡಿಕೊಡಲು ಲಂಚ (ಲಂಚ) ಸ್ವೀಕರಿಸುತ್ತಿದ್ದಾಗ ಬೆಂಗಳೂರು ಗ್ರಾಮಾಂತರ ಜಿಲ್ಲೆ ನೆಲಮಂಗಲ ತಾಲೂಕಿನ ಕಳಲುಘಟ್ಟ ಗ್ರಾಮ ಪಂಚಾಯಿತಿ ಪಿಡಿಓ ಹಾಗೂ ಯುಟ್ಯೂಬರ್ ಲೋಕಾಯುಕ್ತ (ಲೋಕಾಯುಕ್ತ) ಬಲೆಗೆ ಬಿದ್ದಿದ್ದಾರೆ. ಕಳಲುಘಟ್ಟ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಗೀತಾಮಣಿ, ಹಾಗೂ ಸ್ಥಳೀಯ ಖಾಸಗಿ ವಾಹಿನಿ ಪ್ರತಿನಿಧಿ ಗಂಗಾಧರ್ ಒಂದು ಲಕ್ಷ ರೂ. ಲಂಚದ ಹಣದ ಸಮೇತ ರೆಡ್ ಹ್ಯಾಂಡ್ ಆಗಿ ಲೋಕಾಯುಕ್ತ ಬಲೆಗೆ ಬಿದ್ದಿದ್ದಾರೆ. ಲೋಕಾಯುಕ್ತ ಡಿವೈಎಸ್ ಪಿ ಗೌತಮ್ ನೇತೃತ್ವದಲ್ಲಿ ದಾಳಿ ನಡೆದಿದ್ದು, ಸದ್ಯ ಗೀತಾಮಣಿ ಹಾಗೂ ಗಂಗಾಧರ್ ನನ್ನನ್ನು ವಶಕ್ಕೆ ತೆಗೆದುಕೊಳ್ಳಲಾಗಿದೆ.
ಪಿಡಿಓಗೀತಾಮಣಿ ಅವರು 1,50,000 ರೂಪಾಯಿಗೆ ಬೇಡಿಕೆ ಇಟ್ಟಿದ್ದಾರೆ, ಈ ಹಣವನ್ನು ಯುಟ್ಯೂಬರ್ ಗಂಗಾಧರ್ ಗೆ ನೀಡುವಂತೆ ಸೂಚಿಸಿದ್ದರು. ಈ ವಿಚಾರವನ್ನು ಗೀತಾಮಣಿ, ಗಂಗಾಧರ್ ಗೆ ಹೇಳಿದ್ದರು. ಡೀಲ್ ನಂತೆ ಫೈಜಲ್ ನಿಂದ ಗಂಗಾಧರ್ 1,20,000 ಪಡೆಯುತ್ತಿದ್ದಾಗ ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಬೆಂಗಳೂರು ಗ್ರಾಮಾಂತರ ಲೋಕಾಯುಕ್ತ ಅಧಿಕಾರಿಗಳು ಪಿಐ ಉಮಾ ಮಹೇಶ್, ಹಾಗೂ ಎಸ್ ಪಿ ಮಹಾಂತೇಶ್ವರ ಜಿದ್ದಿ ತಂಡ ದಾಳಿ ಮಾಡಿದ್ದು, ರೆಡ್ ಹ್ಯಾಂಡ್ ಆಗಿ ಹಿಡಿದಿದ್ದಾರೆ.
ವಿಜಯಪುರ: ಇನ್ನೊಂದೆಡೆ ಪೆಟ್ರೋಲ್ ಬಂಕ್ ಜಾಗದ ನಕಾಶೆ ಆನ್ಲೈನ್ನಲ್ಲಿ ಅಪ್ಲೋಡ್ ಮಾಡಲು ಲಂಚ ಸ್ವೀಕರಿಸುತ್ತಿದ್ದಾಗ ಎಸ್ಡಿಎ ಮತ್ತು ಕಂಪ್ಯೂಟರ್ ಆಪರೇಟರ್ ಸಿಕ್ಕಿಬಿದ್ದಿದ್ದಾರೆ. ನಗರದ ಕಚೇರಿಯ ಎಸ್ ಡಿ ಅರವ ಪವಾರ್ ಹಾಗೂ ಕಂಪ್ಯೂಟರ ಆಪರೇಟರ್ ಅಯ್ಯಬ್ ತೊಣಸ್ಯಾಳ ಲೋಕಾಯುಕ್ತ ಬಲೆಗೆ ಬಿದ್ದವರು. 15,000 ನಗದು ಸ್ವೀಕಾರ ಮಾಡುವ ವೇಳೆ ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದಿದ್ದು, ಸದ್ಯ ಇಬ್ಬರನ್ನು ವಶಕ್ಕೆ ಪಡೆಯಲು ಉದ್ದೇಶಿಸಲಾಗಿದೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.