ಅಪ್ಪ-ಅಮ್ಮನ ಕನಸಿನ ಹಾರಾಟ, ಸಿಬ್ಬಂದಿಯಾಗಿ ವಿಮಾನದಲ್ಲಿ ಸೇವೆ ಮಾಡುವ ಸೌಭಾಗ್ಯ ನನ್ನದು
ಒಬ್ಬ ಮಗಳಿಗೆ ತನ್ನ ಹೆತ್ತವರಿಗೆ ತಾನು ಮಾಡುವ ವೃತ್ತಿ ಬಗ್ಗೆ ಅಥವಾ ಸಾಧನೆಯನ್ನು ಕಣ್ಣಾರೆ ತೋರಿಸಬೇಕು ಎಂಬ ಆಸೆಯಿರುತ್ತದೆ. ಇಂತಹದ್ದೇ ವಿಡಿಯೋವೊಂದು ಇನ್ಸ್ಟಾದಲ್ಲಿ ಸಖತ್ ವೈರಲ್ ಆಗಿದೆ. ಇಂಡಿಗೋ ವಿಮಾನದ (IndiGo) ಸಿಬ್ಬಂದಿ ಪರ್ಮಿತಾ ರಾಯ್ ಎಂಬವವರು, ತನ್ನ ತಂದೆ -ತಾಯಿಯನ್ನು ವಿಮಾನದಲ್ಲಿ ಕಂಡು ಭಾವುಕಾರಾಗಿದ್ದಾರೆ. ಈ ಬಗ್ಗೆ ಒಂದು ವಿಡಿಯೋವನ್ನು ಕೂಡ ಹಂಚಿಕೊಂಡಿದ್ದಾರೆ. ಕ್ಯಾಬಿನ್ ಸಿಬ್ಬಂದಿ ಪರ್ಮಿತಾ ರಾಯ್ ಇದು ನನ್ನ ಹೃದಯಸ್ಪರ್ಶಿ ಕ್ಷಣ ಎಂದು ಹೇಳಿದ್ದಾರೆ. ವಿಮಾನದಲ್ಲಿ ತಮ್ಮ ಪೋಷಕರನ್ನು ಸ್ವಾಗತಿಸುವ ಅವಕಾಶ ಸಿಕ್ಕ…