ಮೇಷ ರಾಶಿ:
ನಿಮ್ಮ ವಿಶ್ಲೇಷಣಾ ಶಕ್ತಿ ಇಂದಿನ ಪ್ರಮುಖ ಆಸ್ತಿಯಾಗಲಿದೆ. ಹಣದ ವ್ಯವಹಾರಗಳಲ್ಲಿ ನಿಖರತೆ ಅಗತ್ಯ. ವಿಶೇಷವಾಗಿ ಬಾಕಿ ಇರುವ ವಿಚಾರದ ಕಡೆ ಗಮನ. ಉದ್ಯೋಗ ಕ್ಷೇತ್ರದಲ್ಲಿ ನಿಮ್ಮ ಕೆಲಸದ ಗುಣಮಟ್ಟವು ಮೇಲಧಿಕಾರಿಗಳ ಗಮನ ಸೆಳೆಯಲಿದೆ. ಮೋಹದ ಕಾರಣದಿಂದ ನಿಮ್ಮವರ ತಪ್ಪನ್ನು ಹೇಳಲು ನೀವು ತಯಾರಾಗುವುದಿಲ್ಲ. ಮಕ್ಕಳ ಜೊತೆ ಸಂತೋಷದಿಂದ ಕಳೆಯುವುದು ಅವರಿಗೂ ಖುಷಿಯಾಗುವುದು. ಬರಬೇಕಾದ ಹಣದ ಚಿಂತೆ ಬಹಳ ಕಾಡಬಹುದು.
ವೃಷಭ ರಾಶಿ:
ಹಣಕಾಸು ವಿಚಾರಗಳಲ್ಲಿ ಎಚ್ಚರಿಕೆಯಿಂದ ನಡೆದುಕೊಳ್ಳುವುದು ಒಳ್ಳೆಯದು. ಮಕ್ಕಳ ಜೊತೆಗೆ ಸಮಯ ಕಳೆಯುವುದು ನಿಜವಾದ ಸಂತೋಷ. ಉದ್ಯೋಗದಲ್ಲಿ ನಿಮ್ಮ ಶ್ರಮವನ್ನು ಗುರುತಿಸಲಾಗಿದೆ. ಅನಾರೋಗ್ಯದಿಂದ ಅವಕಾಶ ವಂಚಿತರಾಗುವಿರಿ. ಸದುಪಯೋಗ ಆಗುವಂತಹ ಕೆಲಸದ ಕಡೆ ಗಮನವಿರಲಿ. ಸುಲಭದ ಕಾರ್ಯವನ್ನು ಸಂಕೀರ್ಣ ಮಾಡಿಕೊಂಡು ಚಿಂತಿಸಿ. ಖರೀದಿಯ ವಸ್ತುಗಳು ಕಳೆದುಹೋಗುವ ಸಂಭವವಿದೆ.
ಮಿಥುನ ರಾಶಿ:
ನೀವು ಕೆಲವು ನಷ್ಟಗಳನ್ನು ಪೂರ್ಣಗೊಳಿಸಲು ಪ್ರಯತ್ನಿಸಬೇಕು. ಮಾನಸಿಕ ಸ್ಥಿತಿಯನ್ನು ಸುಧಾರಿಸಲು ಆಧ್ಯಾತ್ಮಿಕ ಚಟುವಟಿಕೆಗಳು ಉತ್ತಮ. ಭೂಮಿಯ ವಿಸ್ತರಣೆಯ ಬಗ್ಗೆ ಯೋಚಿಸಿ. ಹಣಕಾಸಿನ ತೊಂದರೆಗಳು ತುರ್ತು ಖರ್ಚುಗಳಿಂದ ಉಂಟಾಗಬಹುದು. ಮನೆಯ ಕೆಲಸಗಳು ತಲೆನೋವಿಗೆ ಕಾರಣ. ನಾಯಕರು ತಮ್ಮ ಬಗ್ಗೆ ಒಳ್ಳೆ ಸುದ್ದಿಯನ್ನು ಕೇಳುತ್ತಾರೆ. ಅಸಾಧ್ಯವಾದ ಕಾರ್ಯವನ್ನು ಮಾಡಿ ವ್ಯರ್ಥ ಮಾಡುವುದು ಬೇಡ.
ಕರ್ಕಾಟಕ ರಾಶಿ:
ಬಹಳ ದಿನಗಳ ಅನಂತರ ಪುಣ್ಯ ಸ್ಥಳಗಳಿಗೆ ಹೋಗುವ ಅವಕಾಶ. ಪ್ರತಿಫಲದ ಅಪೇಕ್ಷೆ ಇಲ್ಲದೇ ಮಾಡಿದ ತೃಪ್ತಿ. ಅನವಶ್ಯಕ ವ್ಯವಹಾರಗಳಲ್ಲಿ ಪಾಲ್ಗೊಳ್ಳದಿರುವುದು ಉತ್ತಮ. ಕೆಲಸದಲ್ಲಿ ಹೊಸ ಯೋಜನೆಗಳನ್ನು ರೂಪಿಸಲು ಇಂದು ಒಳ್ಳೆಯ ಸಮಯ. ನಿಮ್ಮ ವ್ಯವಹಾರದಲ್ಲಿ ಲೆಕ್ಕವು ತಪ್ಪಾಗಿ ನೀವು ಹಣವನ್ನು ಕಳೆದುಕೊಳ್ಳಬಹುದು. ಸ್ನೇಹಿತರ ಜೊತೆ ಎಲ್ಲಾದರೂ ಹೋಗಬೇಕು ಎನಿಸುತ್ತದೆ. ವಿದ್ಯಾರ್ಥಿಗಳು ಕೆಲವುದರಲ್ಲಿ ಸೋಲಬಹುದು.
ಸಿಂಹ ರಾಶಿ:
ಹಂತಹಂತವಾದ ಬೆಳವಣಿಗೆಯಿಂದ ಮಾತ್ರ ನಿರಂತರ ಸಂತಸ. ಸೃಜನಾತ್ಮಕ ಕೆಲಸಗಳಲ್ಲಿ ತೊಡಗಿದರೆ ಮನಸ್ಸಿಗೆ ನೆಮ್ಮದಿ ದೊರೆಯುತ್ತದೆ. ಇತರರ ಮಾತಿಗೆ ಒಳಗಾಗಬೇಡಿ, ಹಣಕಾಸಿನಲ್ಲಿ ನಷ್ಟವಾಗುವ ಸಂಭವವಿದೆ. ದೂರದ ಸಂಬಂಧಿಗಳು ಸಂಭ್ರಮ ತರಬಹುದು. ವ್ಯಾಪಾರದ ಗುತ್ತಿಗೆಗಳಲ್ಲಿ ನಿಖತೆ ಅಗತ್ಯ. ಆಪ್ತರ ಬಗ್ಗೆ ನಿಮಗೆ ಹಲವು ಅನುಮಾನಗಳು ಇರಬಹುದು. ಕಚೇರಿಯ ಕಿರಿಕಿರಿಯಿಂದ ಮನೆಯಲ್ಲಿಯೂ ನಿಮಗೆ ನೆಮ್ಮದಿ ಸಿಗದು.
ಕನ್ಯಾ ರಾಶಿ:
ವ್ಯವಹಾರವನ್ನು ಗೌಪ್ಯವಾಗಿ ನಿಮಗೆ ಮಾತ್ರ ಗೊತ್ತಾಗುವ ಹಾಗೆ ಮಾಡುವುದು ಬೇಡ. ಅನಂತರ ಪಶ್ಚಾತ್ತಾಪ ಪಡಬೇಕಾಗುವುದು. ಇಂದು ನಿಮ್ಮ ಆಂತರಿಕ ಶಕ್ತಿ ಹೆಚ್ಚು ಸ್ಪಷ್ಟವಾಗಿ ತೋರಬಹುದು. ಆರ್ಥಿಕ ವಿಷಯಗಳಲ್ಲಿ ಬುದ್ಧಿವಂತಿಕೆಯನ್ನು ಬಳಸಿ ನಿರ್ಧಾರ ತೆಗೆದುಕೊಳ್ಳಲಾಗಿದೆ. ಸ್ತ್ರೀಯರಿಗೆ ತಾಳ್ಮೆಯ ಪರೀಕ್ಷೆ ಆಗಬಹುದು. ಮನೆಯ ಕೆಲಸದಲ್ಲಿ ಹೆಚ್ಚು ತೊಡಗಿಸಿಕೊಳ್ಳಿ. ಸಹೋದರಿಯರ ನಡುವೆ ಕಲಹವಾಗಬಹುದು.
ತುಲಾ ರಾಶಿ:
ಇತ್ತೀಚಿನ ನಿರಾಶೆಯಿಂದ ಹೊರಬರಲು ನೀವು ಸಕಾರಾತ್ಮಕ ಚಟುವಟಿಕೆಗಳಲ್ಲಿ ತೊಡಗಬೇಕು. ಇಂದು ಸಂಗಾತಿಯ ಹಣಕಾಸಿನ ವಿಚಾರದಲ್ಲಿ ಚರ್ಚೆ ಆಗಬಹುದು, ಸಹೋದರರ ಸಹಕಾರವು ನಿಮಗೆ ಬಲವನ್ನು ಕೊಡುತ್ತದೆ. ಹೊಸ ಮಾರ್ಗಗಳು ನಿಮಗಾಗಿ ತೆರೆದುಕೊಳ್ಳಬಹುದು. ದಾಂಪತ್ಯದಲ್ಲಿ ಶಾಂತಿಯು ಬೇಕಾದರೆ ಸುಮ್ಮನಿರುವುದು ಉತ್ತಮ. ಕೋಪವನ್ನು ನಿರಂತರವಾಗಿ ಮುಂದುವರಿಸುವುದು ಬೇಡ. ಸ್ವಾಭಿಮಾನ ಬಂಧುಗಳ ಎದುರು ಕಾಣಿಸಬಹುದು.
ವೃಶ್ಚಿಕ ರಾಶಿ:
ಇಂದು ಹಣದ ನಷ್ಟವನ್ನು ತಪ್ಪಿಸುವುದನ್ನು ಮಿತಿಗೊಳಿಸಿ. ಜೀವನದಲ್ಲಿ ಹೊಸತನ್ನು ಸ್ವೀಕರಿಸುವ ಸ್ಥಿತಿಯಲ್ಲಿರಲಿ. ಹಳೆಯ ಮನೆಯನ್ನು ದುರಸ್ತಿ ಮಾಡುವ ಚಿಂತನೆಯಿರುವುದು. ಕೊಟ್ಟ ಮಾತನ್ನು ಉಳಿಸಿಕೊಳ್ಳಲು ಕಷ್ಟ. ಅವಶ್ಯಕತೆ ಇದ್ದರಷ್ಟೇ ನಿಮ್ಮನ್ನು ಬಳಸುತ್ತಾರೆ. ಸಹೋದರ ಸಹೋದರಿಯರ ಜೊತೆ ಆಸ್ತಿಯ ವಿಷಯಕ್ಕೆ ಜಗಳಗಳು ಆಗಬಹುದು.
ಧನು ರಾಶಿ:
ಹೊಸ ಆರ್ಥಿಕ ಒಪ್ಪಂದಗಳಿಂದ ಲಾಭ ಸಾಧ್ಯ. ಸಣ್ಣ ವಿಚಾರಗಳಿಂದ ಸಂಗಾತಿಯೊಂದಿಗೆ ಮನಸ್ತಾಪ ಸಂಭವಿಸಬಹುದು. ಎಂದೂ ನಂಬದವರ ಮಾತನ್ನು ನೀವು ಇಂದು ನಂಬುವಿರಿ. ಹೂಡಿಕೆಯ ವಿಚಾರದಲ್ಲಿ ನಿಮಗೆ ಪೂರ್ಣ ಆಸಕ್ತಿ ಇರದು. ಅಪರಿಚಿತರ ಮಾತುಗಳಿಂದ ದೂರವಿರಬೇಕು. ಕೆಲವು ಕೆಲಸಗಳಿಗಾಗಿ ನೀವು ಸ್ವಲ್ಪ ದೂರ ಪ್ರಯಾಣಿಸಬೇಕಾಗಬಹುದು. ಏನು ಮಾಡಿದರೂ ಆಗುತ್ತದೆ ಎಂದು ಏನನ್ನಾದರೂ ಮಾಡಲು ಹೋಗುವುದು ಬೇಡ.
ಮಕರ ರಾಶಿ:
ಹಣಕಾಸಿನ ಚಟುವಟಿಕೆಗಳಲ್ಲಿ ಸುಧಾರಣೆಯಿಂದ ಬಾಕಿ ಬಿಲ್ ತೀರಿಸಲು ಅನುಕೂಲ. ಆಗಮನದಿಂದ ಸಂಜೆಯ ವಿಶೇಷವಾಗಿದೆ. ಸಾಲ ಬಾಧೆಯ ಕಾರಣ ಕಣ್ತಪ್ಪಿಸಿ ಗುರುತಿಸಿ. ಇಂದು ಹಳೆಯ ತಪ್ಪುಗಳನ್ನು ಮರೆತು ಸಂತೋಷವಾಗಿರಿ. ತಾಯಿಗೆ ಯಾವುದಾದರೂ ಹಳೆಯ ಕಾಯಿಲೆ ಮರುಕಳಿಸಬಹುದು. ಬಹಳ ದಿನಗಳ ಅನಂತರ ಹಳೆಯ ಗೆಳೆಯರನ್ನು ಭೇಟಿಯಾಗುವ ಸಂತಸ ಇರಲಿದೆ.
ಕುಂಭ ರಾಶಿ:
ಆರ್ಥಿಕ ವ್ಯವಹಾರಗಳಲ್ಲಿ ಎಚ್ಚರಿಕೆಯಿಂದಿರುವುದು ಉತ್ತಮ. ತಪ್ಪಾದ ನಿರ್ಧಾರಗಳು ನಷ್ಟಕ್ಕೆ ಕಾರಣ. ಕುಟುಂಬದಲ್ಲಿ ಹಿರಿಯರ ಸಲಹೆಗಳನ್ನು ಗೌರವದಿಂದ ಸ್ವೀಕರಿಸಿ. ಮೇಲಿನ ಚರ್ಚೆಗಳಲ್ಲಿ ಧೈರ್ಯವಂತಿಕೆಯಿಂದ ನಿರ್ವಹಿಸಿ. ಇಂದು ಹೆಚ್ಚಿನ ಸಮಯ ತಂದೆ, ತಾಯಿಯ ಸೇವೆಯಲ್ಲಿ ಹೆಚ್ಚಿನ ಸಮಯವನ್ನು ಕಳೆಯಿರಿ. ಬಹಳ ದಿನಗಳಿಂದ ಒಂದೇ ತರದ ಕೆಲಸಗಳಿಂದ ಬೇಸರವಾಗುವುದು.
ಮೀನ ರಾಶಿ:
ಪ್ರೀತಿಯ ಸಂಗಾತಿಯ ಜೊತೆ ವಿಶೇಷ ಸಮಯ ಕಳೆಯಬಹುದು. ನಿಮ್ಮ ಕೆಲಸದಲ್ಲಿ ಉತ್ತಮ ಸಾಧನೆ ಮಾಡಲು ಸಮಯ ಸೂಕ್ತವಾಗಿದೆ. ನಿರೀಕ್ಷಿಸಿದ ಅತಿಥಿಗಳ ಆಗಮನದಿಂದ ಕಾರ್ಯಗಳಲ್ಲಿ ವ್ಯತ್ಯಯ ಉಂಟಾಗಬಹುದು. ನಿಮ್ಮ ವ್ಯವಹಾರವನ್ನು ಕಾನೂನಾತ್ಮಕವಾಗಿ ನಡೆಸಿದರೆ ಉತ್ತಮ. ಆಕಸ್ಮಿಕವಾಗಿ ಬರುವ ಅಲ್ಪ ಸಂಪತ್ತು ಕೈಯಲ್ಲಿ ನಿಲ್ಲದು. ಕೋಪವನ್ನು ಮಾಡುವ ಸಂದರ್ಭವು ಎಡರಾಗಲಿದೆ, ನಿಮ್ಮ ನಿಯಂತ್ರಣದಲ್ಲಿ ಇರಲಿ.
ಇಂದಿನ ಪಂಚಾಂಗ:
ಶಾಲಿವಾಹನ ಶಕೆ ೧೯೪೯ರ ಪರಾಭವ ಸಂವತ್ಸರದ ಉತ್ತರಾಯಣ, ವಾರ್ಷಿಕ : ವಸಂತ, ಚಂದ್ರಮಾಸ : ವೈಶಾಖ, ಸೌರ ಮಾಸ : ಮೇಷ, ಮಹಾನಕ್ಷತ್ರ : ಅಶ್ವಿನೀ, ವಾರ : ಶನಿ, ಪಕ್ಷ : ಶುಕ್ಲ, ತಿಥಿ : ಪ್ರತಿಪತ್, ನಿತ್ಯನಕ್ಷತ್ರ : ಕೃತ್ತಿಕಾ, ಯೋಗ : ವೈಧೃತಿ, ಸೂರ್ಯೋದಯ – ಕರಣ, ಕಿಂಸ್ತು10 06 – 37 pm, ಇಂದಿನ ಶುಭಾಶುಭ ಕಾಲ : ರಾಹು ಕಾಲ 09:17 – 10:50, ಯಮಗಂಡ ಕಾಲ 13:57 – 15:31, ಗುಳಿಕ ಕಾಲ 06:10 – 07:44
-ಲೋಹಿತ ಹೆಬ್ಬಾರ್ – 8762924271 (What’s app ಮಾತ್ರ)