ಕೊಲಂಬಿಯಾದಲ್ಲಿ ಯೋಗ ದಿನ: ಶಾಂತಿ ಕಾರ್ಯಕ್ಕೆ ರವಿಶಂಕರ ಗುರೂಜಿಗೆ ಉನ್ನತ ನಾಗರೀತ ಗೌರವ | Sri Sri Ravishankar Leads Grand Yoga Day In Colombia Receives Top Civilian Honour Sat
ಕೊಲಂಬಿಯಾದಲ್ಲಿ ಶಾಂತಿ ಸ್ಥಾಪನೆಯ 10ನೇ ವಾರ್ಷಿಕೋತ್ಸವದಂದು ರವಿಶಂಕರ್ ಗುರೂಜಿ ಯೋಗ ದಿನಾಚರಣೆಯಲ್ಲಿ ಭಾಗವಹಿಸಿದರು. ಶಾಂತಿ ಸಂಧಾನದಲ್ಲಿ ಗುರೂಜಿಗಳ ಪಾತ್ರವನ್ನು ಸ್ಮರಿಸಲಾಯಿತು ಹಾಗೂ ಯೋಗದ ಮಹತ್ವವನ್ನು ಒತ್ತಿ ಹೇಳಲಾಯಿತು. ಕೊಲಂಬಿಯಾದ ಬೊಗೋಟಾದ ಐಕಾನಿಕ್ ಪ್ಲಾಜಾ ಲಾ ಸಂತಾ ಮಾರಿಯಾದಲ್ಲಿ ಸಾವಿರಾರು ಜನರು ಸೇರಿ, ರವಿಶಂಕರ ಗುರೂಜಿಯೊಂದಿಗೆ 11ನೇ ಅಂತರರಾಷ್ಟ್ರೀಯ ಯೋಗ ದಿನ ಆಚರಿಸಿದರು. ಕೊಲಂಬಿಯಾ ದೇಶದಲ್ಲಿ ಶಾಂತಿ ಸ್ಥಾಪನೆಯಾಗಿ 10 ವರ್ಷ ತುಂಬಿದ ಸುಸಂದರ್ಭ. ಸುಮಾರು 50 ವರ್ಷಗಳಿಗೂ ಹೆಚ್ಚು ಕಾಲ ನಡೆದ ರಕ್ತಪಾತದ ನಂತರ ಕೊಲಂಬಿಯಾ ಸರ್ಕಾರ…