Headlines

ಅಂಬರೀಷ್ ಬೈದರೂ ಜನರಿಗೆ ಏಕೆ ಇಷ್ಟ ಆಗುತ್ತಿತ್ತು? ವಿವರಿಸಿದ್ದ ರೆಬೆಲ್ ಸ್ಟಾರ್

ಅಂಬರೀಷ್ ಬೈದರೂ ಜನರಿಗೆ ಏಕೆ ಇಷ್ಟ ಆಗುತ್ತಿತ್ತು? ವಿವರಿಸಿದ್ದ ರೆಬೆಲ್ ಸ್ಟಾರ್


ನಟ ಅಂಬರೀಷ್ ಅವರು ಇಂದು ನಮ್ಮ ಜೊತೆ ಇಲ್ಲ ಎಂಬುದು ಗೊತ್ತಿರುವ ವಿಷಯ. ಅವರು ನಟನಾಗಿ, ರಾಜಕಾರಣಿ ಆಗಿ ಇಷ್ಟ ಆಗಿದ್ದರು. ಅವರು ನಮ್ಮನ್ನು ಅಗಲಿ ಹಲವು ವರ್ಷಗಳೇ ಕಳೆದಿವೆ. ಅಂಬರೀಶ್ ಅವರದ್ದು ಭಿನ್ನ ವ್ಯಕ್ತಿತ್ವ. ಅವರು ಬೈದರೂ ಜನರಿಗೆ ಇಷ್ಟವಾಗುತ್ತಿತ್ತು. ಅಂಬರೀಷ್ ಅವರೇ ವಿವರಿಸಿದ್ದರು. ಆ ಬಗ್ಗೆ ಇಲ್ಲಿದೆ ವಿವರ.

ಎಲ್ಲ ಹೀರೋಗಳು ಪ್ರೀತಿ ತೋರಿಸುತ್ತಾ ಇದ್ದಿದ್ದು ತಮ್ಮ ಪ್ರೀತಿಯ ಮಾತುಗಳಿಂದ. ಆದರೆ, ಅಂಬರೀಷ್ ಅವರು ಯಾವಾಗಲೂ ಪ್ರೀತಿಯಿಂದ ಮಾತನಾಡುತ್ತಾರೆ. ಹಾಗಂತ ಅಭಿಮಾನಿಗಳ ಮೇಲೆ ಅವರಿಗೆ ಪ್ರೀತಿ ಇಲ್ಲ ಎಂದಲ್ಲ. ಅವರು ಬೈದರು ಎಂದರೆ ಅವರು ಸಾಕಷ್ಟು ಕೇಳುತ್ತಾರೆ ಹಾಗೂ ಪ್ರೀತಿ ಮಾಡುತ್ತಾರೆ ಎಂಬ ಅರ್ಥವನ್ನು ನೀಡುತ್ತಿದ್ದರು. ಅಂಬರೀಷ್ ಅತ್ಯಾಪ್ತರು ಎನಿಸಿಕೊಂಡವರು ಇದನ್ನು ಬಲ್ಲವರು ಮತ್ತು ಅಂಬರೀಷ್ ಅವರಿಂದ ಆ ರೀತಿಯ ಮಾತುಗಳನ್ನೇ ನಿರೀಕ್ಷೆ ಮಾಡುತ್ತಿದ್ದರು.

ಅತ್ಯಾಪ್ತರಿಗೆ ಅಂಬರೀಷ್ ಬಯ್ಯುತ್ತಿರುವ ಸಾಕಷ್ಟು ವಿಡಿಯೋಗಳು ವೈರಲ್ ಆಗಿರುವುದನ್ನು ನೀವು ನೋಡಬಹುದೇ? ಆದರೆ, ಯಾರೊಬ್ಬರೂ ಅವರು ಬೈದರು ಎಂದು ಬೇಸರ ಮಾಡಿಕೊಳ್ಳುತ್ತಾ ಇರಲಿಲ್ಲ. ಆಪ್ತ ವರ್ಗದಲ್ಲಿ, ಮಾಧ್ಯಮದವರ ಜೊತೆ ಎಲ್ಲರ ಬಳಿಕಯೂ ಅಂಬರೀಷ್ ನಡೆದುಕೊಳ್ಳುತ್ತಿದ್ದ ಹಾಗೆ. ಈ ಅಂಬರೀಷ್ ಅವರ ಈ ಡೈಲಾಗ್ ಮೀಮ್‌ಗಳಲ್ಲಿ ಸಾಕಷ್ಟು ಬಳಕೆಯಾಗುತ್ತದೆ. ಇದಕ್ಕೆ ಫ್ಯಾನ್ಸ್ ನಾನಾ ರೀತಿಯಲ್ಲಿ ಕಮೆಂಟ್ ಮಾಡುವ ಕೆಲಸವನ್ನು ಮಾಡುತ್ತಾರೆ.

ಇದನ್ನೂ ಓದಿ: ಕನ್ನಡದಲ್ಲಿ ಅಂಬರೀಶ್, ತೆಲುಗಿನಲ್ಲಿ ಪ್ರಭಾಸ್; ಇಬ್ಬರೂ ರೆಬೆಲ್ ಸ್ಟಾರ್ ಮಧ್ಯೆ ಇದೆ ಸಾಮ್ಯತೇ

ಈ ಬಗ್ಗೆ ಅಂಬರೀಶ್ ಅವರು ಈ ಮೊದಲು ಮಾತನಾಡಿದ್ದರು. ‘ಏನೇ ಮಾಡಿದರೂ ಜನರು ನನ್ನನ್ನು ಇಷ್ಟಪಡುತ್ತಾರೆ. ಮಂಡ್ಯ ಜನರಿಗೆ ಬೇರೆ ಯಾರೇ ಬೈದರೂ ಹೋಗಯ್ಯೋ ಅಂತಾರೆ. ಅದು ನಾನು ಬೈದರೆ ಅಣ್ಣ ಬೈದ, ಆಶೀರ್ವಾದ ಸಿಕ್ಕಿತು’ ಎಂದು ಅಂಬರೀಶ್ ಅವರು ಈ ಮೊದಲು ಹೇಳಿದ್ದು ನಿಮಗೆ ಕಾಣಿಸುತ್ತದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.

ರಂದು ಪ್ರಕಟಿಸಲಾಗಿದೆ – 7:37 am, ಶನಿ, 18 ಏಪ್ರಿಲ್ 26



Source link

Leave a Reply

Your email address will not be published. Required fields are marked *