ರಾಮನ ಪಾತ್ರ ಮಾಡೋದು ಎಂದರೆ ಅದು ಸಣ್ಣ ಮಾತಲ್ಲ. ಪಾತ್ರ ಮಾಡುವುದು ಚಾಲೆಂಜ್ ಅಲ್ಲ, ಆದರೆ, ಅದರ ಸುತ್ತಲೂ ಹುಟ್ಟಿಕೊಳ್ಳುವ ವಿವಾದ ತಣ್ಣಗಾಗಿಸುವುದು ದೊಡ್ಡ ಚಾಲೆಂಜ್. ಈಗ ರಣಬೀರ್ ಕಪೂರ್ (ರಣಬೀರ್ ಕಪೂರ್) ಅದೇ ರೀತಿಯ ಚಾಲೆಂಜ್ ಎದುರಿಸುತ್ತಿದೆ. ಅವರು ಅನೇಕ ನಟಿಯರ ಜೊತೆ ಸುತ್ತಾಡಿದ್ದಾರೆ. ಎಣ್ಣೆ ಪಾರ್ಟಿ ಮಾಡಿದ್ದಾರೆ. ಈಗ ಇದೆಲ್ಲವನ್ನೂ ತಂದು ಟೀಕೆ ಮಾಡಲಾಗುತ್ತಿದೆ. ಅದೇ ರೀತಿ ಅವರು ಈ ಮೊದಲು ನೀಡಿದ್ದರು, ‘ಮತ್ತೊಂದು ಮದುವೆ ಆಗ್ತೀನಿ’ ಎಂಬ ಹೇಳಿಕೆಯನ್ನು ಮುನ್ನೆಲೆಗೆ ತರಲಾಗಿದೆ. ‘ಇವರಿಗೆಲ್ಲ ರಾಮನ ಪಾತ್ರವಲ್ಲ’ ಎಂದು ಕೆಲವರು ಟೀಕೆ ಮಾಡಿದ್ದಾರೆ.
ರಣಬೀರ್ ಕಪೂರ್ ಅವರು ಹಿಂದಿಯ ‘ರಾಮಾಯಣ’ ಸಿನಿಮಾದಲ್ಲಿ ರಾಮನ ಪಾತ್ರ ಮಾಡುತ್ತಿದ್ದಾರೆ. ಅದರ ಲುಕ್ ರಿಲೀಸ್ ಆಗಿ ಗಮನ ಸೆಳೆದಿದೆ. ಅವರು ರಾಮನ ಪಾತ್ರಕ್ಕೆ ಆಯ್ಕೆ ಆದ ನಂತರ ಟೀಕೆಗಳನ್ನು ಎದುರಿಸುತ್ತಿದ್ದಾರೆ. ರಣ ಚಿತ್ರಕ್ಕಾಗಿ ಮದ್ಯ ಹಾಗೂ ನಾ ವೆಜ್ ಸೇವನೆ ಬಿಟ್ಟಿದ್ದಾಗಿ ಈ ರೀತಿ ಹೇಳಿದ್ದಾರೆ. ಆದರೆ, ಇದನ್ನು ಒಪ್ಪಲು ಅನೇಕರು ರೆಡಿ ಇದ್ದಾರೆ. ಜನ ಸಾಮಾನ್ಯರಿಂದ ಹಿಡಿದು ಕಂಗನಾ ರಣಾವತ್ ರೀತಿಯ ಸೆಲೆಬ್ರಿಟಿಗಳು ರಣಬೀರ್ ಆಯ್ಕೆಯನ್ನು ಟೀಕಿಸಿದ್ದಾರೆ. ಅವರು ಸ್ತ್ರೀ ಲೋಲ ಎಂದು ಕರೆದಿದ್ದಾರೆ ಅನೇಕರು, ರಾಮನ ಪಾತ್ರದ ಪಾವಿತ್ರ್ಯತೆ ಹಾಳು ಎಂದು ಟೀಕಿಸಿದ್ದಾರೆ.
ಸಂದರ್ಶಕ: ನಾನು ನಿಮ್ಮ ಮದುವೆಗೆ ಹೋಗಿದ್ದೆ ಆದರೆ ಸಮೋಸಾ ಚಟ್ನಿ ಅಲ್ಲಿ ತುಂಬಾ ಗಲೀಜು ಆಗಿತ್ತು.
ರಣಬೀರ್ ಕಪೂರ್: ನಾನು ಇನ್ನೊಂದು ಮದುವೆ ಮಾಡುತ್ತೇನೆ ಚಿಂತಿಸಬೇಡಿ. ಮುಂದಿನ ಮದುವೆ ಮೇ ಬೆಟರ್ ಪಾರ್ಟಿ ಡುಂಗಾ.
ಇತ್ತೀಚಿನ ವರದಿಗಳು ಸೂಚಿಸುವಂತೆ ಅವರ ವಿಚ್ಛೇದನವು ಮೂಲೆಯಲ್ಲಿದೆ ಎಂದು ತೋರುತ್ತಿದೆ. ಸಹೋದರ ಸಮಯಕ್ಕಿಂತ ಮುಂದಿದ್ದರು. ನೀವು… pic.twitter.com/57Vvy61Yh9
– ದಕ್ಷ. (@mythicbxrn) ಏಪ್ರಿಲ್ 17, 2026
ಹೀಗಿರುವಾಗಲೇ ಒಂದು ವಿಡಿಯೋ ವೈರಲ್ ಆಗಿದೆ. ಇದು 2022ರ ಸಂದರ್ಶನದಲ್ಲಿ ನೀಡಿದ ವಿಡಿಯೋ. ‘ಶಂಶೇರ’ ಹೆಸರಿನ ಸಿನಿಮಾನ ರಣಬೀರ್ ಕಪೂರ್ ಮಾಡಿದ್ದರು. ಈ ಸಂದರ್ಶನದಲ್ಲಿ ಆ್ಯಂಕರ್ ಅವರು, ನಿಮ್ಮ ಮದುವೆಯಲ್ಲಿ ಸಮೋಸಾ-ಚಟ್ನಿ ಪ್ರಶಸ್ತಿಯನ್ನು ಸ್ವೀಕರಿಸಲಿಲ್ಲ. ಆಗ ರಣಬೀರ್ ಕಪೂರ್ ಅವರು, ‘ನಾನು ಇನ್ನೊಂದು ಮದುವೆ ಆಗುತ್ತೇನೆ. ಆಗ ಒಳ್ಳೆಯ ಪಾರ್ಟಿ ಕೊಡುತ್ತೇನೆ’ ಎಂದು ಅವರು ಹೇಳಿದ್ದಾರೆ.
ಇದನ್ನೂ ಓದಿ: ಶ್ರೀರಾಮನ ಪಾತ್ರಕ್ಕೆ ರಣಬೀರ್ ಕಪೂರ್ಗಿಂತ ಉತ್ತಮ ನಟ ಯಾರೂ ಇಲ್ಲ: ನಮಿತ್ ಮಲ್ಹೋತ್ರಾ
ನಾಲ್ಕು ವರ್ಷಗಳ ಬಳಿಕ ಈ ವಿಡಿಯೋ ಮತ್ತೆ ವೈರಲ್ ಆಗಿದೆ. ಅನೇಕರು ರಾಮನ ಪಾತ್ರಕ್ಕೆ ರಣಬೀರ್ ಆಯ್ಕೆಯನ್ನು ಟೀಕಿಸುವ ಕೆಲಸ ಮಾಡಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
ರಂದು ಪ್ರಕಟಿಸಲಾಗಿದೆ – 7:27 am, ಶನಿ, 18 ಏಪ್ರಿಲ್ 26