IPL 2026: ಕ್ರಿಕೆಟ್ ಅಂಗಗಳಲ್ಲಿ ‘ಕ್ಯಾಚಸ್ ವಿನ್ ಮ್ಯಾಚಸ್’ ಎಂಬ ಮಾತಿದೆ. ಆದರೆ ಈ ಬಾರಿಯ ಐಪಿಎಲ್‌ನಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡದ ಪಾಲಿಗೆ ಈ ಮಾತು ಮರೀಚಿಕೆಯಾದಂತಿದೆ. ಚುರುಕಾದ ಫೀಲ್ಡಿಂಗ್‌ಗೆ ಹೆಸರಾಗಿದ್ದ ಧೋನಿ ಪಡೆಯ ಉತ್ತರಾಧಿಕಾರಿಗಳು, ಈ ಬಾರಿ ಮೈದಾನದಲ್ಲಿ ಕ್ಯಾಚ್‌ಗಳನ್ನು ಕೈಬಿಡುವುದರಲ್ಲೇ ದಾಖಲೆ ಬರೆಯುವ ಆತಂಕ ಅಭಿಮಾನಿಗಳಲ್ಲಿ ಮೂಡಿದೆ.
ಅಂಕಿ-ಅಂಶಗಳ ಸೂಚನೆ:
ಪ್ರಸಕ್ತ ಸೀಸನ್‌ನಲ್ಲಿ ಇದುವರೆಗೆ ಸಿಎಸ್‌ಕೆ ಆಟಗಾರರು ಬರೋಬ್ಬರಿ 8 ಕ್ಯಾಚ್‌ಗಳನ್ನು ಕೈಬಿಟ್ಟಿದ್ದಾರೆ. ಮೂಲಕ ಅತಿ ಹೆಚ್ಚು ಕ್ಯಾಚ್‌ಗಳನ್ನು ಬಿಟ್ಟ ತಂಡಗಳಲ್ಲಿ ಸನ್ ರೈಸರ್ಸ್ ಹೈದರಾಬಾದ್ (SRH) ಜೊತೆಗೆ ಸಿಎಸ್‌ಕೆ ಈ ಜಂಟಿಯಾಗಿ ಅಗ್ರಸ್ಥಾನದಲ್ಲಿದೆ.
ಅಷ್ಟೇ ಅಲ್ಲದೆ ಕೇವಲ 68% ರಷ್ಟು ಕ್ಯಾಚಿಂಗ್ ದಕ್ಷತೆಯನ್ನು ಹೊಂದಿರುವ ಚೆನ್ನೈ ಸೂಪರ್ ಕಿಂಗ್ಸ್ ತಂಡವು ಈ ಬಾರಿಯ ಐಪಿಎಲ್‌ನಲ್ಲಿ ಅತ್ಯಂತ ಕಳಪೆ ಫೀಲ್ಡಿಂಗ್ ಪ್ರದರ್ಶನ ನೀಡುತ್ತಿರುವ ತಂಡವಾಗಿ ಗುರುತಿಸಲ್ಪಟ್ಟಿದೆ.
ಪ್ರಮುಖ ಆಟಗಾರರಿಂದಲೇ ತಪ್ಪು:
ಮಂಗಳವಾರ ನಡೆದ ಕೋಲ್ಕತ್ತಾ ನೈಟ್ ರೈಡರ್ಸ್ (ಕೆಕೆಆರ್) ವಿರುದ್ಧ ನಡೆದ ತಂಡದ ತಂಡದ ನಾಯಕ ರುತುರಾಜ್ ಗಾಯಕ್ವಾಡ್ ಅವರೇ ಸುನಿಲ್ ನರೈನ್ ನೀಡಿದ ಸುಲಭ ಕ್ಯಾಚ್ ಕೈಬಿಟ್ಟಿದ್ದರು. ಇವರ ಜೊತೆಗೆ ಡೆವಾಲ್ಡ್ ಬ್ರೆವಿಸ್ ಮತ್ತು ಸರ್ಫರಾಝ್ ಖಾನ್ ಅವರಂತಹ ಯುವ ಆಟಗಾರರು ಕೂಡ ಫೀಲ್ಡಿಂಗ್‌ನಲ್ಲಿ ಎಡವುತ್ತಿದ್ದಾರೆ.
ಪಂದ್ಯದ ಮೇಲೆ ಪರಿಣಾಮ:
ಕಳೆದ ಐದು ಮ್ಯಾಚ್‌ಗಳ ಮೂಲಕ ಸಿಎಸ್‌ಕೆ ಆಟಗಾರರು 8 ಕ್ಯಾಚ್‌ಗಳನ್ನು ಕೈ ಬಿಟ್ಟಿರುವುದು ಇದೀಗ ಚಿಂತೆಗೆ ಕಾರಣವಾಗಿದೆ. ಅದರಲ್ಲೂ ಪ್ರತಿ ಪಂದ್ಯದಲ್ಲೂ ಕ್ಯಾಚ್‌ಗಳನ್ನು ಬಿಡುವ ಮೂಲಕ ಎದುರಾಳಿಗಳಿಗೆ ಜೀವದಾನ ನೀಡುತ್ತಿದೆ ತಂಡದ ಬೌಲರ್‌ಗಳ ಆತ್ಮವಿಶ್ವಾಸದ ಮೇಲೂ ಪರಿಣಾಮ ಬೀರಿದೆ.
ಇದೇ ವೇಳೆ ರಾಜಸ್ಥಾನ್ ರಾಯಲ್ಸ್ (RR) ಮತ್ತು ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ತಂಡಗಳು ಫೀಲ್ಡಿಂಗ್‌ನಲ್ಲಿ ಅತ್ಯುತ್ತಮ ಪ್ರದರ್ಶನ ನೀಡುತ್ತಿದೆ. ವಿಶೇಷ ಎಂದರೆ ಈ ಎರಡು ತಂಡಗಳೇ ಇದೀಗ ಅಂಕಪಟ್ಟಿಯಲ್ಲಿ ಮೊದಲೆರಡು ಸ್ಥಾನಗಳನ್ನು ಅಲಂಕರಿಸಲಾಗಿದೆ.
8ನೇ ಸ್ಥಾನದಲ್ಲಿ ಸಿಎಸ್ಕೆ:
ಚೆನ್ನೈ ಸೂಪರ್ ಕಿಂಗ್ಸ್ ತಂಡದ ಆಟಗಾರರು ಕ್ಯಾಚ್ ಚೆಲ್ಲುತ್ತಿರುವುದು ಕೂಡ ಪಂದ್ಯದ ಸೋಲಿಗೆ ಕಾರಣ. ಇದರ ಪರಿಣಾಮ ಕಳೆದ ಐದು ಮ್ಯಾಚ್‌ಗಳಲ್ಲಿ ಮೂರರಲ್ಲಿ ಸೋತಿದೆ. ಈ ಸೋಲು-ಗೆಲುವು ಸಿಎಸ್‌ಕೆ ತಂಡವು ಅಂಕಪಟ್ಟಿ 8ನೇ ಸ್ಥಾನದಲ್ಲಿದೆ.
ಇದನ್ನೂ ಓದಿ: RCB vs LSG ಪಂದ್ಯಕ್ಕೆ 4 ಆಟಗಾರರು ಅಲಭ್ಯ..!
ಇದೀಗ ಮೊದಲಾರ್ಧದ ಮುಕ್ತಾಯದ ಹಂತಕ್ಕೆ ಬಂದು ನಿಂತಿದೆ. ದ್ವಿತೀಯಾರ್ಧವು ಪಂದ್ಯಗಳು ನಿರ್ಣಾಯಕವಾಗಿರುವುದರಿಂದ ಸಿಎಸ್‌ಕೆ ತನ್ನ ಫೀಲ್ಡಿಂಗ್ ವಿಭಾಗದಲ್ಲಿ ದೊಡ್ಡ ಸುಧಾರಣೆ ಮಾಡಿಕೊಳ್ಳಬೇಕಾಗಿದೆ. ಅನುಭವಿ ಆಟಗಾರರಿಂದ ಕೂಡಿದ ತಂಡವು ಈ ಸಣ್ಣ ತಪ್ಪುಗಳನ್ನು ಸರಿಪಡಿಸಿಕೊಳ್ಳದಿದ್ದರೆ, ಮುಂದಿನ ಪಂದ್ಯಗಳಲ್ಲಿ ಭಾರೀ ಬೆಲೆ ಬರಬೇಕು.
ರಂದು ಪ್ರಕಟಿಸಲಾಗಿದೆ – 10:03 am, ಬುಧವಾರ, 15 ಏಪ್ರಿಲ್ 26