Headlines

ಉಂಡ ಮನೆಗೇ ದಂಪತಿಯಿಂದ ದ್ರೋಹ: ಉದ್ಯಮಿ ಮನೆಯಲ್ಲಿ ಕದ್ದಿದ್ದು 979 ಗ್ರಾಂ ಬಂಗಾರ!

ಉಂಡ ಮನೆಗೇ ದಂಪತಿಯಿಂದ ದ್ರೋಹ: ಉದ್ಯಮಿ ಮನೆಯಲ್ಲಿ ಕದ್ದಿದ್ದು 979 ಗ್ರಾಂ ಬಂಗಾರ!


ಬೆಂಗಳೂರು, ಜನವರಿ 02: ಉದ್ಯಮಿಯೊಬ್ಬರ ಮನೆಯಲ್ಲಿ ಮನೆ ಕೆಲಸಗಾರರೇ ಕೋಟ್ಯಾಂತರ ರೂಪಾಯಿ ಮೌಲ್ಯದ ಚಿನ್ನಾ ಕದ್ದಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ. ಹೊಸ ವರ್ಷಾಚರಣೆಗೆಂದು ಕುಟುಂಬ ಬೇರೆ ರಾಜ್ಯಕ್ಕೆ ತೆರಳುವ ವೇಳೆ ಕೆಲಸಗಾರರ ಬಳಿ ಕೀ ಕೊಟ್ಟು ತೆರಳಿತ್ತು. ಇದನ್ನೇ ಬಂಡವಾಳ ಮಾಡಿಸಿಕೊಂಡು ಮನೆಯಲ್ಲಿ ಆರೋಪಿಗಳು ಕಳ್ಳತನ ಸ್ಟಾಲ್.

ಡಿ.30ರಂದು ಸದಾಶಿವ ನಗರದ ಉದ್ಯಮಿ ಅಭಿಷೇಕ್ ಎಂಬುವರ ಮನೆಯಲ್ಲಿ ಕಳ್ಳತನ ನಡೆದಿದ್ದು, ಬರೋಬ್ಬರಿ 1.37 ಕೋಟಿ ರೂ. ಮೌಲ್ಯದ ಚಿನ್ನ, ವಾಚ್‌ಗಳನ್ನು ಕಳವು ಮಾಡಲಾಗಿದೆ. ಆ ಮೇಲಿನ ಚಿನ್ನ 1.27 ಕೋಟಿ ರೂ. ಮೌಲ್ಯದ ವೇಳೆ, ವಾಚ್‌ಗಳು 10 ಬೆಲೆಬಾಳುವಂತದ್ದು ಎಂದು ಲಕ್ಷ. ಆರೋಪಿಗಳಾದ ಹಾಜಿರ ಬೇಗಂ ಮತ್ತು ಆಕೆಯಪತಿ ಶಾಹೀರ್ ಗೆ ಖಾಕಿ ಬಲೆ ಬೀಸಿದ್ದು, ಈ ಬಗ್ಗೆ ತನಿಖೆ ನಡೆಸಲಾಗುತ್ತಿದೆ.

ಇದನ್ನೂ ಓದಿ: ಮಗಳಿಗೆ ಟಾರ್ಚರ್ ಕೊಡ್ತಿದ್ದ ಅಳಿಯನಿಗೆ ಚಟ್ಟ ಕಟ್ಟಿದ ಮಾವ; ರಾಡ್ನಿಂದ ಹೊಡೆದು ಕೊಲೆ

ಪಶ್ಚಿಮ ಬಂಗಾಳ ಮೂಲದ ಹಾಜಿರ ಬೇಗಂ ಮತ್ತು ಶಾಹೀರ್ ದಂಪತಿ ಈ ಹಿಂದೆ 2022 ರಿಂದ 2024 ರ ವರೆಗೆ ಅಭಿಷೇಕ್ ಮನೆಯಲ್ಲೇ ಕೆಲಸ ಮಾಡಿದ್ದರು. ಆ ಬಳಿಕ ಕೆಲಸ ಬಿಟ್ಟಿದ್ದ ಇವರು ಮತ್ತೆ 2025 ಡಿ.27ರಂದು ಕೆಲಸಕ್ಕೆ ಸೇರಿದ್ದರು. ಡಿ. 30 ರಂದು ಹೊಸ ವರ್ಷಾಚರಣೆ ಸಲುವಾಗಿ ಕೋಯಮತ್ತೂರಿಗೆ ಅಭಿಷೇಕ್ ಕುಟುಂಬ ತೆರಳಿದ್ದು, ತಮ್ಮ ಅತ್ತೆಗೆ ಕೊಡು ಎಂದು ಹಾಜಿರ ಬಳಿ ಒಂದು ಕೀಯನ್ನು ಕೊಟ್ಟು ಹೋಗಿದ್ದರು. ಆದರೆ ಸಂಜೆಯಾದರೂ ಮನೆಯ ಕೀಯನ್ನ ಅತ್ತೆಗೆ ಹಾಜಿರಾ ಕೊಟ್ಟಿಲ್ಲ. ಹೀಗಾಗಿ ವಿಚಾರಿಸಲು ದೂರವಾಣಿ ಕರೆ ಮಾಡಿದ್ದರೆ, ಆ ವೇಳೆ ಹಾಜಿರಾ ದಂಪತಿ ಮೊಬೈಲ್ ಸ್ವಿಚ್ ಆಫ್ ಆಗಿದ್ದಾರೆ. ಬಳಿಕ ತಮ್ಮ ಕಾರಿನ ಡ್ರೈವರ್ ಮೂಲಕ ಮನೆ ಪರಿಶೀಲನೆ ನಡೆಸಿದಾಗ, ಮನೆಯ ಕಬೋರ್ಡ್‌ಗಳು ಓಪನ್ ಆಗಿರೋದು ಬೆಳಕಿಗೆ ಬಂದಿದೆ. 979 ಗ್ರಾಂ ಚಿನ್ನಾಭರಣ ಮತ್ತು ವಾಚ್‌ಗಳನ್ನು ಕೆಲಸ ಮಾಡಿದವರು ಕದ್ದು ಎಸ್ಕೇಪ್ ಆಗಿರೋದು ಕುಟುಂಬಕ್ಕೆ ಗೊತ್ತಾಗಿದೆ.

ವರದಿ: ಪ್ರದೀಪ್ ಚಿಕ್ಕಾಟಿ, ಟಿವಿ9 ಬೆಂಗಳೂರು

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ.

ರಂದು ಪ್ರಕಟಿಸಲಾಗಿದೆ – 12:20 pm, ಶುಕ್ರ, 2 ಜನವರಿ 26



Source link

Leave a Reply

Your email address will not be published. Required fields are marked *