
ರೆಡ್ಡಿಟ್ ನಲ್ಲಿ ಪೋಸ್ಟ್ ಒಂದು ವೈರಲ್ ಆಗಿದೆ. ಇದ್ರಲ್ಲಿ ವಿದ್ಯಾರ್ಥಿ, ಶಿಕ್ಷಕಿ ಜೊತೆ ನಡೆದ ಚಾಟ್ ಸ್ಕ್ರೀನ್ ಶಾಟ್ ಹಂಚಿಕೊಂಡಿದ್ದಾನೆ. ಪೋಸ್ಟ್ ನೋಡಿದ ನೆಟ್ಟಿಗರು ಕಮೆಂಟ್ ಮೇಲೆ ಕಮೆಂಟ್ ಮಾಡ್ತಿದ್ದಾರೆ.
ಶಿಕ್ಷಕರನ್ನು ದೇವರಿಗೆ ಹೋಲಿಕೆ ಮಾಡ್ತಾರೆ. ಮಕ್ಕಳಿಗೆ ಸರಿಯಾದ ದಾರಿ ತೋರಿಸ್ಬೇಕಾದ ಶಿಕ್ಷಕರೇ ಈಗ ಮಕ್ಕಳ ದಾರಿ ತಪ್ಪಿಸ್ತಿದ್ದಾರೆ. ಅದಕ್ಕೆ ರೆಡ್ಡಿಟ್ ನಲ್ಲಿ ವಿದ್ಯಾರ್ಥಿ ಹಾಗೂ ಶಿಕ್ಷಕಿ ನಡುವೆ ನಡೆದ ವಾಟ್ಸ್ ಅಪ್ ಚಾಟ್ ಉತ್ತಮ ನಿದರ್ಶನ. ಶಿಕ್ಷಕಿಯೊಬ್ಬರು, ವಿದ್ಯಾರ್ಥಿಗೆ ಸಿನಿಮಾ ಆಫರ್ ನೀಡಿದ್ದಾರೆ. ಶಿಕ್ಷಕಿ ಜೊತೆ ನಡೆದ ಸಂಭಾಷಣೆಯನ್ನು ವಿದ್ಯಾರ್ಥಿ ರೆಡ್ಡಿಟ್ ನಲ್ಲಿ ಹಂಚಿಕೊಂಡಿದ್ದು, ಸೋಶಿಯಲ್ ಮೀಡಿಯಾದಲ್ಲಿ ಈ ಬಗ್ಗೆ ಚರ್ಚೆ ಜೋರಾಗಿದೆ.
ವಿದ್ಯಾರ್ಥಿಯನ್ನು ಸಿನಿಮಾಗೆ ಕಡೆದ ಶಿಕ್ಷಕಿ
18 ವರ್ಷದ ವಿದ್ಯಾರ್ಥಿ ಜೊತೆ ಶಿಕ್ಷಿಕಿ ಚಾಟ್ ಮಾಡಿದ್ದಾರೆ. ನಿಮಗೆ ನಾಳೆ ಒಂದೇ ಕ್ಲಾಸ್ ಇರೋದ್ರಿಂದ ನೀವು ನನ್ನ ಜೊತೆ ಪ್ರಾಜೆಕ್ಟ್ ಹೇಲ್ ಮೇರಿ ನೋಡಲು ಬರ್ತೀರಾ? ನೀವು ಬರ್ತೀರಾ ಅಂದ್ರೆ ನಾನು ಅರ್ಧ ದಿನ ರಜೆ ತೆಗೆದುಕೊಳ್ತೇನೆ ಅಂತ ಮೆಸ್ಸೇಜ್ ಮಾಡಿದ್ದಾರೆ. ಈ ಮೆಸ್ಸೇಜ್ ಗೆ ವಿದ್ಯಾರ್ಥಿ ಬುದ್ಧಿವಂತಿಕೆಯಿಂದ ಉತ್ತರ ನೀಡಿದ್ದಾರೆ. ನೇರವಾಗಿ ಬರೋದಿಲ್ಲ ಎನ್ನುವ ಬದಲು, ನನ್ನ ಸ್ನೇಹಿತರ ಜೊತೆ ಮೊದಲೇ ಪ್ಲಾನ್ ಫಿಕ್ಸ್ ಆಗಿದೆ. ಹಾಗಾಗಿ ನಾಳೆ ಬರೋದಿಕ್ಕೆ ಆಗೋದಿಲ್ಲ. ಇನ್ನೊಮ್ಮೆ ನೋಡೋಣ ಅಂತ ಮೆಸ್ಸೇಜ್ ಮಾಡಿದ್ದಾರೆ. ಆದ್ರೆ ಶಿಕ್ಷಕಿ ತಮ್ಮ ಒತ್ತಾಯ ಬಿಡಲಿಲ್ಲ. ನೋಡಿ, ಇನ್ನೊಮ್ಮೆ ಯೋಚಿಸಿ ಅಂತ ಮತ್ತೆ ಶಿಕ್ಷಕಿ ಮೆಸ್ಸೇಜ್ ಹಾಕಿದ್ದಾರೆ. ಇದಕ್ಕೆ ವಿದ್ಯಾರ್ಥಿ, ಕ್ಷಮೆ ಇರಲಿ, ಆಗ್ಲೇ ಫಿಕ್ಸ್ ಪ್ಲಾನ್ ಫಿಕ್ಸ್ ಆಗಿದೆ ಅಂತ ವಾಪಸ್ ಮೆಸ್ಸೇಜ್ ಮಾಡಿದ್ದಾರೆ.
ಚಿನ್ನಸ್ವಾಮಿಯ ದೋಸೆ, ಇಡ್ಲಿ, ಚಟ್ನಿ ಹಾಡು ವಿವಾದ! ಮೊದಲು ಶುರು ಮಾಡಿದ್ದೇ ಸಿಎಸ್‌ಕೆ! ಈ ಬಗ್ಗೆ ಜಿತೇಶ್ ಹೇಳಿದ್ದೇನು?
ನನಗೆ 18 ವರ್ಷ, ಅವರಿಗೆ ಸುಮಾರು 28-29 ವರ್ಷ ವಯಸ್ಸಿರಬಹುದು. ಇದನ್ನು ಗೇಲಿ ಮಾಡುವವರಿಗೆ, ಲಿಂಗಗಳನ್ನು ಬದಲಾಯಿಸಿದರೆ ನೀವು ಅದೇ ರೀತಿ ಪ್ರತಿಕ್ರಿಯಿಸುತ್ತೀರಿ ಎಂದು ನಾನು ಭಾವಿಸುತ್ತೇನೆ ಎಂದು ಪೋಸ್ಟ್ ಶೀರ್ಷಿಕೆ ಹಾಕಲಾಗಿದೆ.
ವೈರಲ್ ಪೋಸ್ಟ್
ಪೋಸ್ಟ್ ತ್ವರಿತವಾಗಿ ವೈರಲ್ ಆಗಿದೆ. ರೆಡ್ಡಿಟ್ ಬಳಕೆದಾರರಿಂದ ಪ್ರತಿಕ್ರಿಯೆಗಳ ಪ್ರವಾಹ ಹರಿದು ಬರ್ತಿದೆ. ಶಿಕ್ಷಕರ ನಡವಳಿಕೆಯ ಬಗ್ಗೆ ಅನೇಕರು ಕಳವಳ ವ್ಯಕ್ತಪಡಿಸಿದ್ದಾರೆ. ಇಂಥ ವರ್ತನೆ ವೃತ್ತಿಯ ಮಿತಿಯನ್ನು ಉಲ್ಲಂಘಿಸುತ್ತದೆ ಅಂತ ಜನರು ಕಮೆಂಟ್ ಮಾಡಿದ್ದಾರೆ. ಇಂಥ ವರ್ತನೆಯಿಂದ ವಿದ್ಯಾರ್ಥಿಗಳು ಅನಾನುಕೂಲ ಅಥವಾ ಅಸುರಕ್ಷಿತ ಪರಿಸ್ಥಿತಿ ಎದುರಿಸ್ತಾರೆ ಅಂತ ಕೆಲವರು ಕಮೆಂಟ್ ಮಾಡಿದ್ದಾರೆ. ಶಿಕ್ಷಕಿ ಬಗ್ಗೆ ಶಾಲೆ ಆಡಳಿತಮಂಡಳಿಗೆ ತಿಳಿಸಬೇಕೆಂದು ಮತ್ತೊಂದಿಷ್ಟು ಮಂದಿ ವಿದ್ಯಾರ್ಥಿಗೆ ಸಲಹೆ ನೀಡಿದ್ದಾರೆ.
ನಮ್ಮ ಮೆಟ್ರೋ ನಿಲ್ದಾಣದಲ್ಲಿ ಸತ್ತ ಮರಿಯ ಅಸ್ಥಿಪಂಜರ ಹೊತ್ತು ಸಾಗಿದ ತಾಯಿ ಕೋತಿ, ವಿಡಿಯೋ ವೈರಲ್!
ಕೆಲ ಬಳಕೆದಾರರು, ವಿದ್ಯಾರ್ಥಿ ಬುದ್ಧಿವಂತಿಕೆ ಹಾಗೂ ಕ್ರಮವನ್ನು ಮೆಚ್ಚಿಕೊಂಡಿದ್ದಾರೆ. ಇನ್ನೊಂದಿಷ್ಟು ಮಂದಿ ವಿದ್ಯಾರ್ಥಿ, ಪರಿಸ್ಥಿತಿಯನ್ನು ತಪ್ಪಾಗಿ ಅರ್ಥೈಸಿಕೊಂಡಿರಬಹುದು ಎಂಬ ಸಂಶಯ ವ್ಯಕ್ತಪಡಿಸಿದ್ದಾರೆ. ಶಿಕ್ಷಕಿ ನಿಮ್ಮಲ್ಲಿ ಸ್ನೇಹ ಬಯಸಿರಬಹುದು. ಕೆಲವರು ಶಿಕ್ಷಕ ವೃತ್ತಿ ಹಾಗೂ ಸಾಮಾನ್ಯ ಜೀವನ ನಿರ್ವಹಿಸಲು ವಿಫಲರಾಗ್ತಾರೆ. ಅವರು ನಿಮ್ಮಲ್ಲಿ ಏನು ಬಯಸ್ತಿದ್ದಾರೆ ಎಂಬುದನ್ನು ಮೊದಲು ತಿಳಿದುಕೊಳ್ಳಿ. ಅವರ ಜೊತೆ ಮಾತನಾಡಿ ನಂತ್ರ ನಮಗೆ ಹೇಳಿ ನಾವು ಟೀ ಕುಡಿಯುತ್ತ ಚರ್ಚೆ ಮಾಡೋಣ ಅಂತ ಮತ್ತೊಬ್ಬರು ಕಮೆಂಟ್ ಮಾಡಿದ್ದಾರೆ. ಅನೇಕರು ಇದು ಸುಳ್ಳು ಎಂಬ ಅನುಮಾನವನ್ನೂ ವ್ಯಕ್ತಪಡಿಸಿದ್ದಾರೆ.