Headlines

Vinay Kulkarni ಶಿಕ್ಷೆ ಹಿಂದಿದೆ ಬಿಜೆಪಿ ‘ಒಳಸಂಚು’: ನನಗೂ ಹೀಗೆಯೇ ಕಿರುಕುಳ ಕೊಟ್ಟಿದ್ದರು! ಡಿಕೆಶಿ ಸ್ಫೋಟಕ ಹೇಳಿಕೆ | Dk Shivakumar Reaction On Vinay Kulkarni Life Imprisonment Bjp Conspiracy Allegation Sat

Vinay Kulkarni ಶಿಕ್ಷೆ ಹಿಂದಿದೆ ಬಿಜೆಪಿ ‘ಒಳಸಂಚು’: ನನಗೂ ಹೀಗೆಯೇ ಕಿರುಕುಳ ಕೊಟ್ಟಿದ್ದರು! ಡಿಕೆಶಿ ಸ್ಫೋಟಕ ಹೇಳಿಕೆ | Dk Shivakumar Reaction On Vinay Kulkarni Life Imprisonment Bjp Conspiracy Allegation Sat



Vinay Kulkarni ಶಿಕ್ಷೆ ಹಿಂದಿದೆ ಬಿಜೆಪಿ ‘ಒಳಸಂಚು’: ನನಗೂ ಹೀಗೆಯೇ ಕಿರುಕುಳ ಕೊಟ್ಟಿದ್ದರು! ಡಿಕೆಶಿ ಸ್ಫೋಟಕ ಹೇಳಿಕೆ | Dk Shivakumar Reaction On Vinay Kulkarni Life Imprisonment Bjp Conspiracy Allegation Sat

ಯೋಗೇಶ್ ಗೌಡ ಹತ್ಯೆ ಪ್ರಕರಣದಲ್ಲಿ ವಿನಯ್ ಕುಲಕರ್ಣಿಗೆ ವಿಧಿಸಲಾದ ಜೀವಾವಧಿ ಶಿಕ್ಷೆಯು ಬಿಜೆಪಿಯ ರಾಜಕೀಯ ಪಿತೂರಿಯಾಗಿದೆ ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ಆರೋಪಿಸಿದ್ದಾರೆ. ಉತ್ತರ ಕರ್ನಾಟಕದಲ್ಲಿ ಕುಲಕರ್ಣಿಯವರ ರಾಜಕೀಯ ಬೆಳವಣಿಗೆಯನ್ನು ಸಹಿಸದೆ ಅವರನ್ನು ಸಿಲುಕಿಸಲಾಗಿದೆ ಎಂದರು.

ನವದೆಹಲಿ (ಏ.17): ಧಾರವಾಡದ ಯೋಗೇಶ್ ಗೌಡ ಹತ್ಯೆ ಪ್ರಕರಣದಲ್ಲಿ ಶಾಸಕ ವಿನಯ್ ಕುಲಕರ್ಣಿ ಅವರಿಗೆ ಜೀವಾವಧಿ ಶಿಕ್ಷೆ ಪ್ರಕಟವಾಗಿರುವುದು ರಾಜ್ಯ ರಾಜಕಾರಣದಲ್ಲಿ ಸಂಚಲನ ಮೂಡಿಸಿದೆ. ಈ ಬೆಳವಣಿಗೆಯ ಬಗ್ಗೆ ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಪ್ರತಿಕ್ರಿಯಿಸಿರುವ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್, ‘ವಿನಯ್ ಕುಲಕರ್ಣಿ ವಿರುದ್ಧದ ಈ ತೀರ್ಪಿನ ಹಿಂದೆ ರಾಜಕೀಯ ಪಿತೂರಿ ಇದೆ’ ಎಂದು ನೇರವಾಗಿ ಬಿಜೆಪಿಯತ್ತ ಬೆರಳು ತೋರಿಸಿದ್ದಾರೆ.

ಇದು ಬಿಜೆಪಿಯ ರಾಜಕೀಯ ಒಳಸಂಚು:

‘ನಮಗೆ ನ್ಯಾಯಾಲಯದ ಮೇಲೆ ನಂಬಿಕೆ ಇದೆ. ಆದರೆ ಈ ಇಡೀ ಪ್ರಕರಣದ ತನಿಖೆ ನಡೆದ ಹಾದಿಯಲ್ಲಿ ದೊಡ್ಡ ಒಳಸಂಚು ಅಡಗಿದೆ. ಬಿ-ರಿಪೋರ್ಟ್ ಸಲ್ಲಿಕೆಯಾಗುವ ಹಂತದಲ್ಲಿದ್ದ ಪ್ರಕರಣವನ್ನು ಮತ್ತೆ ಕೆದಕಿ ಅವರನ್ನು ಸಿಲುಕಿಸಲಾಯಿತು. ಉತ್ತರ ಕರ್ನಾಟಕ ಭಾಗದಲ್ಲಿ ವಿನಯ್ ಕುಲಕರ್ಣಿ ಅವರು ದೊಡ್ಡ ಶಕ್ತಿಯಾಗಿ ಬೆಳೆಯುತ್ತಿದ್ದರು. ಲಿಂಗಾಯತ ಸಮುದಾಯದ ಪ್ರಬಲ ನಾಯಕರಾಗಿ ಅವರ ಬೆಳವಣಿಗೆಯನ್ನು ಸಹಿಸದ ಬಿಜೆಪಿ ನಾಯಕರು, ಅವರನ್ನು ರಾಜಕೀಯವಾಗಿ ಮುಗಿಸಲು ಈ ಸಂಚು ರೂಪಿಸಿದ್ದಾರೆ’ ಎಂದು ಡಿ.ಕೆ. ಶಿವಕುಮಾರ್ ಗಂಭೀರ ಆರೋಪ ಮಾಡಿದರು.

ನನಗೂ ಕಿರುಕುಳ ನೀಡಿದ್ದರು:

ತಮ್ಮ ಹಳೆಯ ದಿನಗಳನ್ನು ನೆನಪಿಸಿಕೊಂಡ ಡಿಕೆಶಿ, ‘ನನಗೂ ಇದೇ ರೀತಿ ಕಿರುಕುಳ ನೀಡಲಾಗಿತ್ತು. ನಾನು ಜೈಲಿಗೆ ಹೋಗಿ ಬಂದೆ, ಆದರೆ ಅಂತಿಮವಾಗಿ ಸುಪ್ರೀಂಕೋರ್ಟ್‌ನಲ್ಲಿ ನನಗೆ ನ್ಯಾಯ ಸಿಕ್ಕಿತು. ವಿನಯ್ ಕುಲಕರ್ಣಿ ಅವರ ಕುಟುಂಬದ ಜೊತೆ ನಾನು ಮಾತನಾಡಿದ್ದೇನೆ. ಅವರು ತಪ್ಪು ಮಾಡಿಲ್ಲ ಎಂಬ ವಿಶ್ವಾಸ ನನಗಿದೆ. ಕಾನೂನಿನಲ್ಲಿ ಇನ್ನು ಮೇಲ್ಮನವಿ ಸಲ್ಲಿಸಲು ಅವಕಾಶವಿದೆ. ಕಾರ್ಯಕರ್ತರು ಆತಂಕಪಡುವ ಅಗತ್ಯವಿಲ್ಲ, ಅವರನ್ನು ನಂಬಿದ ದೇವರು ಕೈಬಿಡುವುದಿಲ್ಲ’ ಎಂದು ಧೈರ್ಯ ತುಂಬಿದರು.

ಸಚಿವ ಸ್ಥಾನ ಮತ್ತು ಜಮೀರ್ ರಾಜೀನಾಮೆ:

ರಾಜ್ಯ ಕಾಂಗ್ರೆಸ್‌ನಲ್ಲಿ ಸಚಿವ ಸ್ಥಾನಕ್ಕಾಗಿ ಹಿರಿಯ ಶಾಸಕರು ಒತ್ತಡ ಹೇರುತ್ತಿರುವ ಬಗ್ಗೆ ಕೇಳಲಾದ ಪ್ರಶ್ನೆಗೆ ಉತ್ತರಿಸಿದ ಅವರು, ‘ಅದೆಲ್ಲವೂ ಹಿರಿಯ ಶಾಸಕರಿಗೆ ಬಿಟ್ಟಿದ್ದು. ನಮ್ಮಲ್ಲಿ ಸಿದ್ದರಾಮಯ್ಯ ತಂಡ ಅಥವಾ ಡಿ.ಕೆ. ಶಿವಕುಮಾರ್ ತಂಡ ಎಂಬ ಭೇದವಿಲ್ಲ. ದೆಹಲಿಗೆ ಬರುವ ವಿಚಾರದ ಬಗ್ಗೆ ಮುಖ್ಯಮಂತ್ರಿಗಳೇ ಉತ್ತರಿಸುತ್ತಾರೆ’ ಎಂದರು. ಇನ್ನು ಸಚಿವ ಜಮೀರ್ ಅಹ್ಮದ್ ರಾಜೀನಾಮೆ ನೀಡಲಿದ್ದಾರೆ ಎಂಬ ಸುದ್ದಿಯನ್ನು ಅಲ್ಲಗಳೆದ ಡಿಕೆಶಿ, ‘ಈ ಬಗ್ಗೆ ಸಂಪುಟ ಸಭೆಯಲ್ಲಿ ಯಾವುದೇ ಚರ್ಚೆ ನಡೆದಿಲ್ಲ, ಪತ್ರಿಕೆಗಳಲ್ಲಿ ಬಂದ ಸುದ್ದಿ ಬಗ್ಗೆ ನನಗೆ ಗೊತ್ತಿಲ್ಲ’ ಎಂದು ಸ್ಪಷ್ಟಪಡಿಸಿದರು.

ಮುಸ್ಲಿಂ ನಾಯಕರು ಟಾರ್ಗೆಟ್ ಆಗಿಲ್ಲ:

ಅಲ್ಪಸಂಖ್ಯಾತ ನಾಯಕರನ್ನು ಕಾಂಗ್ರೆಸ್ ಕಡೆಗಣಿಸುತ್ತಿದೆ ಎಂಬ ಆರೋಪಕ್ಕೆ ಪ್ರತಿಕ್ರಿಯಿಸಿದ ಡಿಸಿಎಂ, ‘ಕಾಂಗ್ರೆಸ್ ಪಕ್ಷ ಮುಸ್ಲಿಂ ಸಮುದಾಯಕ್ಕೆ ನೀಡಿದಷ್ಟು ಬೆಂಬಲವನ್ನು ಬೇರೆ ಯಾರೂ ನೀಡಿಲ್ಲ. ದಾವಣಗೆರೆ ದಕ್ಷಿಣ ಕ್ಷೇತ್ರವು ಕೇವಲ ಅಲ್ಪಸಂಖ್ಯಾತರ ಸೀಟು ಅಲ್ಲ, ಅಲ್ಲಿ ಶಾಮನೂರು ಶಿವಶಂಕರಪ್ಪ ಅವರು ದಶಕಗಳಿಂದ ಕ್ಷೇತ್ರವನ್ನು ಉಳಿಸಿಕೊಂಡು ಬಂದಿದ್ದಾರೆ. ಟಿಕೆಟ್ ಹಂಚಿಕೆ ಕೆಲವು ವರದಿಗಳ ಆಧಾರದ ಮೇಲೆ ನಡೆದಿದೆ. ಯಾರನ್ನೂ ನಾವು ಟಾರ್ಗೆಟ್ ಮಾಡುತ್ತಿಲ್ಲ’ ಎಂದು ಸಮರ್ಥಿಸಿಕೊಂಡರು.



Source link

Leave a Reply

Your email address will not be published. Required fields are marked *