ಗಿಲ್ಲಿ ಏಕೆ ಇಷ್ಟ ಆಗಲ್ಲ? ಕಾರಣ ಕೊಟ್ಟ ರಾಶಿಕಾ ಶೆಟ್ಟಿ

ಗಿಲ್ಲಿ ಏಕೆ ಇಷ್ಟ ಆಗಲ್ಲ? ಕಾರಣ ಕೊಟ್ಟ ರಾಶಿಕಾ ಶೆಟ್ಟಿ


ಬಿಗ್ ಬಾಸ್ (ಬಿಗ್ ಬಾಸ್) ಕನ್ನಡ ಸೀಸನ್ 12ರಲ್ಲಿ ಗಿಲ್ಲಿ ನಟ ಅವರು ಎಲ್ಲರ ಫೇವರಿಟ್ ಹೀರೋ ಎನಿಸಿಕೊಂಡಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ಅವರಿಗೆ ದೊಡ್ಡ ಅಭಿಮಾನಿ ಬಳಗ ಸೃಷ್ಟಿಯಾಗಿದೆ. ಗಿಲ್ಲಿ ಮಾಡುವ ಹಾಸ್ಯಕ್ಕೆ ದೊಡ್ಡ ಅಭಿಮಾನಿ ವರ್ಗ ಇದೆ. ಆದರೆ, ಕೆಲವರು ಗಿಲ್ಲಿಯನ್ನು ಇಷ್ಟಪಡುತ್ತಿಲ್ಲ. ಇದರಲ್ಲಿ ಬಿಗ್ ಬಾಸ್ ಸ್ಪರ್ಧಿ ರಾಶಿಕಾ ಕೂಡ ಒಬ್ಬರು. ಅವರು ಏಕೆ ಆಗಲ್ಲ ಎಂಬುದಕ್ಕೆ ಕಾರಣ.

ಮೂರು ತಂಡಗಳಾಗಿ ಟಾಸ್ಕ್ ಆಡುವಂತೆ ಬಿಗ್ ಬಾಸ್ ಸೂಚಿಸಿದ್ದರು. ಈ ವೇಳೆ ರಾಶಿಕಾ ಹಾಗೂ ರಘು ಒಂದು ತಂಡವಾಗುವ ಆಲೋಚನೆಯಲ್ಲಿದ್ದರು. ಮತ್ತೊಂದು ಸ್ಥಾನಕ್ಕೆ ರಕ್ಷಿತಾನ ಆಯ್ಕೆ ಮಾಡಿಕೊಳ್ಳೋಣ ಎಂದು ರಘು ವಾದಿಸುತ್ತಿದ್ದರು. ಇದು ರಾಶಿಕಾ ಶೆಟ್ಟಿಗೆ ಇಷ್ಟ ಆಗಿಲ್ಲ. ಅವರು ಇದನ್ನು ವಿರೋಧಿಸಿದರು. ಈ ವೇಳೆ ಇಬ್ಬರ ಮಧ್ಯೆ ಕಿರಿಕ್ ಆಗಿದೆ. ಆಗ ಮಧ್ಯ ಪ್ರವೇಶಿಸಿದ ಗಿಲ್ಲಿ ಅವರು ರಾಶಿಕಾ ಜೊತೆ ಜಗಳ ಆಡಿದ್ದಾರೆ. ಇದು ರಾಶಿಗೆ ಇಷ್ಟ ಆಗಿಲ್ಲ. ಅವರು ಗಿಲ್ಲಿ ಜೊತೆ ಜಗಳವಾಡಿದ್ದಾರೆ.

ಆ ಬಳಿಕ ರಾಶಿಕಾ ಅವರು ಈ ವಿಷಯವನ್ನು ಕಾವ್ಯಾ ಜೊತೆ ಚರ್ಚೆ ನಡೆಸಿದ್ದಾರೆ. ‘ಗಿಲ್ಲಿ ವ್ಯಕ್ತಿತ್ವ ಹಾಗೂ ಬುದ್ಧಿ ಬಿಟ್ಟು ಯಾವತ್ತು ಬಾಳಲ್ಲ. ಇದಕ್ಕೆ ಗಿಲ್ಲಿ ಇಷ್ಟ ಆಗೋದಿಲ್ಲ’ ಎಂದು ನೇರವಾಗಿ ರಾಶಿಕಾ ಹೇಳಿದ್ದಾರೆ. ಈ ವಿಷಯ ಚರ್ಚೆ ಆಗುತ್ತಿದೆ. ರಾಶಿಕಾ ಮಾತನ್ನು ಅನೇಕರು ಖಂಡಿಸಿದ್ದಾರೆ.

ಇದನ್ನೂ ಓದಿ: ಬಿಗ್ ಬಾಸ್ ಕನ್ನಡ: ಟಾಪ್ 6 ಆಟದಿಂದ ಗಿಲ್ಲಿ ನಟ; ಎಲ್ಲರಿಗೂ ಶಾಕ್

ಬಿಗ್ ಬಾಸ್ ಮನೆಯಲ್ಲಿ ಗಿಲ್ಲಿ ಭರ್ಜರಿ ಮನರಂಜನೆ ನೀಡುತ್ತಿದ್ದಾರೆ. ಅವರು ಎಲ್ಲರ ಫೇವರಿಟ್ ಸ್ಪರ್ಧಿಯಾಗಿದ್ದಾರೆ. ಜನವರಿ 17 ಹಾಗೂ 18ರಂದು ಫಿನಾಲೆ. ಯಾರು ಕಪ್ ಎತ್ತುತ್ತಾರೆ ಎಂಬ ವಿಷಯ ಅಂದು ರಿವೀಲ್ ಆಗಲಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.



Source link

Leave a Reply

Your email address will not be published. Required fields are marked *