Viral Video: ಪೊಲೀಸರಿಂದ ತಪ್ಪಿಸಿಕೊಳ್ಳುವ ಭರದಲ್ಲಿ ಸಾಕು ನಾಯಿಯನ್ನು ಕಾರಿನಿಂದ ಹೊರಗೆಸೆದ ಚಾಲಕ

Viral Video: ಪೊಲೀಸರಿಂದ ತಪ್ಪಿಸಿಕೊಳ್ಳುವ ಭರದಲ್ಲಿ ಸಾಕು ನಾಯಿಯನ್ನು ಕಾರಿನಿಂದ ಹೊರಗೆಸೆದ ಚಾಲಕ


ವಾಷಿಂಗ್ಟನ್, ಜನವರಿ 14: ಪೊಲೀಸರಿಂದ ತಪ್ಪಿಸಿಕೊಳ್ಳುವ ಭರದಲ್ಲಿ ಕಾರು ಚಾಲಕ(ಚಾಲಕ)ಒಬ್ಬನು ವೇಗವಾಗಿ ಚಲಿಸುತ್ತಿದ್ದ ಕಾರಿನಿಂದ ಸಾಕು ನಾಯಿಯನ್ನು ಹೊರಗೆಸೆದಿರುವ ವಿಡಿಯೋ ವೈರಲ್ ಆಗಿದೆ. ಈ ಘಟನೆ ವಾಷಿಂಗ್ಟನ್ನ ಪಿಯರ್ಸ್ ಕೌಂಟಿಯಲ್ಲಿ ನಡೆದಿದೆ. ಈ ಘಟನೆ ಜನವರಿ 6 ರಂದು ನಡೆದಿದೆ. ರಾತ್ರಿಹೊತ್ತು ಎಂದಿನಂತೆ ಸಾಮಾನ್ಯವಾಗಿ ಸಂಚಾರ ವಾಹನ ತಪಾಸಣೆ ನಡೆಸುತ್ತಿದ್ದರು.

ಆಗ ವೇಗವಾಗಿ ಕಾರೊಂದು ಬಂದಿತ್ತು, ಪೊಲೀಸರು ಕೈ ಅಡ್ಡ ಮಾಡಿದರೂ ಕಾರು ನಿಲ್ಲಲೇ ಇಲ್ಲ, ಪೊಲೀಸರಿಗೆ ಅನುಮಾನ ಮೂಡಿ ಆತನನ್ನು ಚೇಸ್ ಮಾಡಿದ್ದಾರೆ. ಆಗ ವೇಗವಾಗಿ ಚಲಿಸುತ್ತಿದ್ದ ಕಾರಿನಿಂದ ಸಾಕು ನಾಯಿಯನ್ನು ಚಾಲಕ ಕೆಳಗೆ ಎಸೆದಿದ್ದಾನೆ. ಆತ ಮದ್ಯಪಾನ ಮಾಡಿದ್ದ. ಪಿಯರ್ಸ್ ಕೌಂಟಿ ಶೆರಿಫ್ ಕಚೇರಿ (PCSO) ಪ್ರಕಾರ, ನೋಂದಣಿ ಅವಧಿ ಮುಗಿದ ಕಾರಣ ರಾತ್ರಿ 12.45 ರ ಸುಮಾರಿಗೆ ವಾಹನವನ್ನು ನಿಲ್ಲಿಸಲು ಪ್ರಯತ್ನಿಸಿದರು, ಆದರೆ ಚಾಲಕ ನಿಲ್ಲಲು ಸಿದ್ಧನಿರಲಿಲ್ಲ.

ಮತ್ತಷ್ಟು ಓದಿ: ವಿಡಿಯೋ: ಅಪಹರಣಕಾರರಿಗೆ ಸಿಗುವ ಮುನ್ನವೇ ಸಮಯದಿಂದ ಮಗಳು ಕಾಪಾಡಿದ ತಾಯಿ

ಚಾಲಕ ವೇಗವನ್ನು ಹೆಚ್ಚಿಸಿ ಪರಾರಿಯಾಗಿದ್ದಾನೆ ಎಂದು ಆರೋಪಿಸಲಾಗಿದೆ. ಅಧಿಕಾರಿಗಳು ಆತನನ್ನು ಬೆನ್ನಟ್ಟಲು ಮುಂದಾದರು. ವಾಹನವು ವೇಗವನ್ನು ಕಡಿಮೆ ಮಾಡಲು ವಿಫಲವಾಗಿ, ಡಿವೈಡರ್‌ಗೆ ಗುದ್ದಿದೆ, ಕಾರಿನ ಗಾಜು ಪುಡಿ ಪುಡಿಯಾಗುವಷ್ಟು ತೀವ್ರವಾಗಿತ್ತು ಈ ಅಪಘಾತ.ನಾಯಿ ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರಾಗಿದೆ.

ವಿಡಿಯೋ

ಕಾರಿನೊಳಗೆ ನಾಯಿಯು ಕೂಡ ಇತ್ತು, ಆದರೆ ಮತ್ತೊಂದು ಅಪಘಾತದಲ್ಲಿ ಅದಕ್ಕೇನು ತೊಂದರೆಯಾಗಿಲ್ಲ.ದೊಡ್ಡ ನಾಯಿಯನ್ನು ಅಂತಿಮವಾಗಿ ಅದರ ಮಾಲೀಕರೊಟ್ಟಿಗೆ ಸೇರಿಸಲಾಯಿತು. 39 ವರ್ಷದ ವ್ಯಕ್ತಿಯೊಬ್ಬರು ಚಾಲನೆ ಮಾಡುತ್ತಿದ್ದರು ಮತ್ತು 28 ವರ್ಷದ ಮಹಿಳೆಯೊಬ್ಬರು ಪ್ರಯಾಣಿಕರ ಸೀಟಿನಲ್ಲಿ ಇದ್ದಾರೆ. ಪರವಾನಗಿ ಇಲ್ಲದೆ ವಾಹನ ಚಾಲನಾ, ಡ್ರಂಕ್ ಆಯಂಡ್ ಡ್ರೈವ್, ಅಪಾಯಕಾರಿ ಚಾಲನೆ ಸೇರಿದಂತೆ ಹಲವು ಪ್ರಕರಣಗಳನ್ನು ದಾಖಲಿಸಲಾಗಿದೆ. ಪ್ರಾಣಿ ಹಿಂಸೆಯನ್ನು ಎದುರಿಸುತ್ತಿದೆ.

ವೈರಲ್ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ





Source link

Leave a Reply

Your email address will not be published. Required fields are marked *