Headlines

ಟೀಕೆ ತಾಳಲಾರದೆ ಇನ್​​ಸ್ಟಾ ಡಿಲೀಟ್ ಮಾಡಿದ ‘ಟಾಕ್ಸಿಕ್’ ಟೀಸರ್ ನಟಿ?

ಟೀಕೆ ತಾಳಲಾರದೆ ಇನ್​​ಸ್ಟಾ ಡಿಲೀಟ್ ಮಾಡಿದ ‘ಟಾಕ್ಸಿಕ್’ ಟೀಸರ್ ನಟಿ?


‘ಟಾಕ್ಸಿಕ್’ ಸಿನಿಮಾದ ಟೀಸರ್ ಬಗ್ಗೆ ಪರ-ವಿರೋಧ ಚರ್ಚೆಗಳು ನಡೆಯುತ್ತಿವೆ. ಟೀಸರ್ ನಲ್ಲಿ ನಟಿ ಬರುತ್ತಾರೆ. ಅವರು ಕಾರಿನಲ್ಲಿ ಬೋಲ್ಡ್ ದೃಶ್ಯಗಳಲ್ಲಿ ಕಾಣಿಸಿಕೊಳ್ಳುತ್ತಾರೆ. ಆ ನಟಿಯ ಹೆಸರು ನಟೇಲಿ ಬರ್ನ್ ಎನ್ನಲಾಯಿತು. ಈ ಬಗ್ಗೆ ಸ್ಪಷ್ಟನೆ ನೀಡಿದ್ದ ನಿರ್ದೇಶಕಿ ಗೀತು ಮೋಹನ್ ದಾಸ್ ಅವರು, ಕಾರಿನಲ್ಲಿದ್ದ ನಟಿ ಬಿಯಾತ್ರೀಜ್ ಟಾಫೆಬಾಕ್ ಎಂದು ಸ್ಪಷ್ಟನೆ ನೀಡಿದ್ದರು. ಆ ಬಳಿಕ ಬಿಯಾತ್ರೀಜ್ ಟಾಬಾಕ್‌ಗೆ ಹೇಟ್ ಮೆಸೇಜ್‌ಗಳು ತಲುಪಿದ್ದವು. ಇದರಿಂದ ಬೇಸರಗೊಂಡಿರೋ ಬಿಯಾತ್ರೀಜ್ ಟಾಫೆಬಾಕ್ ಇನ್ ಸ್ಟಾ ಖಾತೆಯನ್ನು ತಾತ್ಕಾಲಿಕವಾಗಿ ಡಿಲೀಟ್ ಮಾಡಿದ್ದಾರೆ.

ನಟೇಲಿ ಬರ್ನ್ ಮೂಲತಃ ಉಕ್ರೇನ್‌ನವರು. ಆದರೆ, ಅವರು ಹಾಲಿವುಡ್ನ ಸಾಕಷ್ಟು ಸಿನಿಮಾಗಳಲ್ಲಿ ನಟಿಸಿದ್ದಾರೆ. ಅವರು ನಿರ್ಮಾಪಕಿ ಕೂಡ ಹೌದು. ‘ಟಾಕ್ಸಿಕ್’ ಸಿನಿಮಾದಲ್ಲಿ ಇವರು ನಟಿಸಿದ್ದಾರೆ ಎನ್ನಲಾಗುತ್ತಿದೆ. ಆದರೆ, ಕಾರಿನ ದೃಶ್ಯದಲ್ಲಿ ಇದ್ದವರು ಇವರೆಲ್ಲ ಎಂಬ ಸ್ಪಷ್ಟನೆ ಸಿಕ್ಕಿತು. ಆ ಬಳಿಕ ಬಿಯಾತ್ರೀಜ್ ಟಾಫೆಬಾಕ್ ಅವರಿಗೆ ಸಾಕಷ್ಟು ಸಂದೇಶಗಳು ಹೋಗಿವೆ. ರಿಕ್ವೆಸ್ಟ್ಗಳು ಕೂಡ ದೊಡ್ಡ ಮಟ್ಟದಲ್ಲಿ ತಲುಪಿದೆ.

ಈ ವಿಷಯಗಳಿಂದ ಬಿಯಾತ್ರೀಜ್ ಟಾಫೆಬಾಕ್ ಬೇಸರಗೊಂಡರೇ ಎಂಬ ಪ್ರಶ್ನೆ ಮೂಡಿದೆ. ಹಾಲಿವುಡ್ ಸಿನಿಮಾಗಳಲ್ಲಿ ಬೋಲ್ಡ್ ದೃಶ್ಯ ಮಾಡಿದರೆ ಯಾರೂ ಅದನ್ನು ಟೀಕಿಸೋದಿಲ್ಲ. ಆದರೆ, ಕನ್ನಡ ಸಿನಿಮಾಗಳಲ್ಲಿ ಈ ರೀತಿಯ ದೃಶ್ಯ ಕಂಡಾಗ ಕೆಲವರಿಗೆ ಅದನ್ನು ಅರಗಿಸಿಕೊಳ್ಳೋಕೆ ಸಾಧ್ಯವಾಗಿಲ್ಲ. ಹೀಗಾಗಿ, ಟೀಸರ್ನ ಹಾಗೂ ಟೀಸರ್ ನಲ್ಲಿ ನಟಿಸಿದ ಕಲಾವಿದರನ್ನು ಟೀಕಿಸುತ್ತಿದ್ದಾರೆ. ಬಿಯಾತ್ರೀಜ್ ಟಾಬಾಕ್ ಅವರನ್ನು ಕೂಡ ಟೀಕಿಸಲಾಯಿತು. ಈ ಬೆಳವಣಿಗೆ ಬಿಯಾತ್ರೀಜ್ ಟಾಫೆಬಾಕ್ ಬೇಸರವಾಗಬಹುದು. ಇದರಿಂದ ಅವರು ತಾತ್ಕಾಲಿಕವಾಗಿ ಖಾತೆಯನ್ನು ಡಿಆಕ್ಟೀವೇಟ್ ಮಾಡಿಕೊಂಡಿರಬಹುದು ಎಂದು ಹೇಳಲಾಗುತ್ತಿದೆ.

ಇದನ್ನೂ ಓದಿ: ‘ಅದಕ್ಕೂ ನಮಗೂ ಸಂಬಂಧವಿಲ್ಲ’; ‘ಟಾಕ್ಸಿಕ್’ ಟೀಸರ್ ದೂರಿಗೆ ಸೆನ್ಸಾರ್ ಮಂಡಳಿಯ ಪ್ರತಿಕ್ರಿಯೆ

‘ಟಾಕ್ಸಿಕ್’ ಸಿನಿಮಾದ ನಿರ್ದೇಶಕಿ ಗೀತು ಮೋಹನ್‌ದಾಸ್, ‘ಟಾಕ್ಸಿಕ್’ ಸಿನಿಮಾ ಟೀಸರ್‌ನಲ್ಲಿ ಇದ್ದ ನಟಿಯನ್ನು ಸಾಮಾಜಿಕ ಜಾಲತಾಣದಲ್ಲಿ ಪರಿಚಯಿಸಿದ್ದರು. ಟೀಸರ್ ನಲ್ಲಿರುವುದು ನಟೇಲಿ ಬರ್ನ್ ಅಲ್ಲ ಬದಲಾಗಿ ನಟಿ ಬಿಯಾತ್ರೀಜ್ ಟಾಫೆಬಾಕ್ ಎಂದು ಹೇಳಿದ್ದಾರೆ. ನಟಿಯ ಚಿತ್ರ ಹಂಚಿಕೊಂಡಿರುವ ಗೀತು ಮೋಹನ್ ದಾಸ್, ‘ಈಕೆಯೇ ನನ್ನ ಸಿಮೆಟ್ರಿ (ಸ್ಮಶಾನದ) ಹುಡುಗಿ’ ಎಂದಿದ್ದರು. ಬಿಯಾತ್ರೀಜ್‌ಫೆಬಾಕ್ ಇನ್ ಸ್ಟಾಗ್ರಾಂ ಖಾತೆಯನ್ನು ಖಾಸಗಿಯಾಗಿ ಇರಿಸಲಾಗಿದೆ. ಈಗ ಅದು ಡಿಲೀಟ್ ಆಗಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.

ರಂದು ಪ್ರಕಟಿಸಲಾಗಿದೆ – 8:14 am, ಬುಧ, 14 ಜನವರಿ 26





Source link

Leave a Reply

Your email address will not be published. Required fields are marked *