ರಸ್ತೆ ಮಧ್ಯೆಯೇ ಕೆಟ್ಟು ನಿಲ್ತಿವೆ ಕೋಟಿ ಕೋಟಿ ಕೊಟ್ಟು ತಂದ ಬಸ್​​ಗಳು: ಚಿಗರಿ ನಿರ್ವಹಣೆಯೇ ಈಗ ಸವಾಲು!

ರಸ್ತೆ ಮಧ್ಯೆಯೇ ಕೆಟ್ಟು ನಿಲ್ತಿವೆ ಕೋಟಿ ಕೋಟಿ ಕೊಟ್ಟು ತಂದ ಬಸ್​​ಗಳು: ಚಿಗರಿ ನಿರ್ವಹಣೆಯೇ ಈಗ ಸವಾಲು!


ಹುಬ್ಬಳ್ಳಿ, ಜನವರಿ 14: ಹುಬ್ಬಳ್ಳಿ-ಧಾರವಾಡದ ನಡುವೆ ತ್ವರಿತ ಸಂಪರ್ಕ ಒದಗಿಸುವ ಉದ್ದೇಶದಿಂದ ಪ್ರಾರಂಭವಾಗಿರುವ ಐಷಾರಾಮಿ ಚಿಗರಿ ಬಸ್ಗಳ ನಿರ್ವಹಣೆಯೇ ಈಗ ದೊಡ್ಡ ಸವಾಲಾಗಿ ಮಾರ್ಪಟ್ಟಿದೆ. ಮಾರ್ಗ ಮಧ್ಯೆಯೇ ಬಸ್ಸುಗಳು ಕೆಟ್ಟು ನಿಲ್ಲುತ್ತಿರುವುದು ಪ್ರಯಾಣಿಕರನ್ನು ಸಂಕಷ್ಟಕ್ಕೆ ಸಿಲುಕಿಸುವುದರ ಜೊತೆಗೆ ಇದರ ನಿರ್ವಹಣೆಯ ಜವಾಬ್ದಾರಿ ಹೊತ್ತಿರುವ ವಾಯುವ್ಯ ಕರ್ನಾಟಕ ಸಾರಿಗೆ ಸಂಸ್ಥೆಗೆ ತಲೆನೋವು ತಂದಿಡುತ್ತಿದೆ. ಕೋಟಿ ಕೋಟಿ ಹಣ ಕೊಟ್ಟು ಖರೀದಿಸಿದ ಐಷಾರಾಮಿ ಬಸ್ಸುಗಳು ಡಕೋಟಾ ಬಸ್ಸುಗಳು ಸರ್ಕಾರಕ್ಕೆ ಮತ್ತು ಈ ಬಗ್ಗೆ ಅನೇಕ ಬಾರಿ BRTS ಸಂಸ್ಥೆಗೆ NWKRTC ಪತ್ರ ಬರೆದಿದೆ.

ಪ್ರಯಾಣಿಕರ ಸಮಸ್ಯೆ ಮನಗಂಡ ಸರ್ಕಾರ ಹುಬ್ಬಳ್ಳಿ ಬಸ್ ನಿಲ್ದಾಣದಿಂದ ಧಾರವಾಡ ಹೊಸ ಬಸ್ ನಿಲ್ದಾಣದವರಗೆ ಬರೋಬ್ಬರಿ 22.5 ಕಿಲೋ ಮೀಟರ್ ಪ್ರತ್ಯೇಕ ರಸ್ತೆ ನಿರ್ಮಾಣ ಮಾಡಿ, ಚಿಗರಿ ಹೆಸರಿನಲ್ಲಿ ಬಸ್ ಸೇವೆಯನ್ನು ಆರಂಭಿಸಿತ್ತು. 2018ರಲ್ಲಿ ಸಾವಿರ ಕೋಟಿ ರೂಪಾಯಿ ವೆಚ್ಚದಲ್ಲಿ ಈ ಯೋಜನೆ ಜಾರಿಯಲ್ಲಿದೆ, ಪ್ರತಿನಿತ್ಯ ಹುಬ್ಬಳ್ಳಿ-ಧಾರವಾಡ ನಡುವೆ ನೂರು ಚಿಗರಿ ಬಸ್ ಸಂಚಾರ ಆರಂಭವಾಗಿದೆ. ದಕ್ಷಿಣ ಭಾರತದಲ್ಲಿಯೇ ಮೊದಲ ಖ್ಯಾತಿಯನ್ನು ಹೊಂದಿರುವ BRTS ಯೋಜನೆಯಾಗಿತ್ತು. ಆದರೆ ಈಗ ನಿರ್ವಹಣೆಯ ಸಮಸ್ಯೆಯಿಂದ ಎಲ್ಲೆಂದರಲ್ಲಿ ಬಸ್ಸುಗಳು ಕೆಟ್ಟು ನಿಲ್ಲುತ್ತಿವೆ. ಕ್ಲಚ್ ಪ್ಲೇಟ್, ಗೇರ್ ಬಾಕ್ಸ್ ಸಮಸ್ಯೆ, ಇಂಜಿನ್ ಹೀಟ್ ಮತ್ತು ಸೆನ್ಸಾರ್ ಸಮಸ್ಯೆಗಳು ಮಾಮೂಲು ಎಂಬಂತಾಗಿವೆ. ಬಸ್ ರಿಪೇರಿಗೆ ಬಿಡಿಭಾಗಗಳು ಕೂಡ ಸರಿಯಾಗಿ ಲಭ್ಯವಿಲ್ಲದ ಹಿನ್ನೆಲೆ, ಈಗ ಪ್ರತಿನಿತ್ಯ 60 ರಿಂದ 70 ಬಸ್‌ಗಳು ಮಾತ್ರ ಓಡಾಟ ನಡೆಸುತ್ತಿವೆ.

ಇದನ್ನೂ ಓದಿ: ಹುಬ್ಬಳ್ಳಿ-ಧಾರವಾಡದಲ್ಲಿ ಹೊಸ ಯೋಜನೆ; ಬಂದ್ ಆಗುತ್ತಾ ಚಿಗರಿ ಬಸ್ ಓಡಾಟ?

ಇನ್ನು ಈ ಬಸ್ಸುಗಳಿಗೆ ಪೂರೈಕೆ ಮಾಡಲಾಗಿರುವ ವೋಲ್ವೋ ಸಂಸ್ಥೆಗೆ ಮನವಿ ಮಾಡಿ, ಅಗತ್ಯ ಬಿಡಿ ಭಾಗಗಳನ್ನು ಕಳಿಸಿಕೊಡುವಂತೆ ಮನವಿ ಮಾಡಲಾಗಿದ್ದರೂ ಸರಿಯಾದ ಸ್ಪಂದನೆ ಸಿಕ್ಕಿಲ್ಲ. ಇದೇ ಕಾರಣಕ್ಕೆ ಬಸ್‌ಗಳ ದುರಸ್ತಿಯೇ ಸವಾಲಾಗಿದೆ ಅಂತ ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ಅಧಿಕಾರಿಗಳು ನಿರ್ವಹಣೆಯ ಜವಾಬ್ದಾರಿ ಹೊತ್ತಿದ್ದಾರೆ. ಒಟ್ಟಿನಲ್ಲಿ ಹುಬ್ಬಳ್ಳಿ-ಧಾರವಾಡ ನಡುವೆ ಸಂಚರಿಸುವ ಪ್ರಯಾಣಿಕರ ಅನುಕೂಲಕ್ಕೆ ಈ ಬಸ್ಸುಗಳು ಜನರೇ ಹಿಡಿ ಶಾಪ ಹಾಕುವ ಸ್ಥಿತಿ ಎದುರಾಗಿದೆ. ಕೋಟಿ ಕೋಟಿ ಹಣ ನೀಡಿದ ಬಸ್ಸುಗಳ ದುರಸ್ತಿಗೆ ಅಗತ್ಯ ಕ್ರಮ ಕೈಗೊಳ್ಳಬೇಕಿದೆ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ.



Source link

Leave a Reply

Your email address will not be published. Required fields are marked *