ಆರೋಪಿಗಳಾದ ಅರುಣ್, ಕವಿತೇಶ್ವರನ್ ಹಾಗೂ ಕೇಶವನ್
ತುಮಕೂರು, ಜನವರಿ 16: ಅದೊಂದು ಕೊಲೆಗೆ ಇಡೀ ತುಮಕೂರು (ತುಮಕೂರು) ಜಿಲ್ಲೆ ಬೆಚ್ಚಿ ಬಿದ್ದಿತ್ತು. ಮಕ್ಕಳ ಜೊತೆ ಮನೆ ಮುಂದೆ ಕುಳಿತಿದ್ದ ಮಂಜುನಾಥ್ ಎಂಬ ವ್ಯಕ್ತಿ ಅರಿಚಿತ ಮುಸುಕುಧಾರಿಗಳ ದಾಳಿಗೆ ಹಾಜರಾಗಿದ್ದರು. ಸಮಾಜದಲ್ಲಿ ಒಳ್ಳೆಯ ಹೆಸರು ಹೊಂದಿದ್ದ ಮಂಜುನಾಥನ ಕೊಲೆ ತುಮಕೂರು ಪೊಲೀಸರಿಗೆ ಸವಾಲಾಗಿತ್ತು. ಆದರೆ ಸಿಕ್ಕ ಸಿಕ್ಕ ಅದೊಂದು ಸುಳಿವು ಶಿವಮೊಗ್ಗ ಪೊಲೀಸರ ಜೊತೆ ಜಂಟಿ ಕಾರ್ಯಾಚರಣೆ ನಡೆಸಿದ ತುಮಕೂರು ಪೊಲೀಸರು 48 ಗಂಟೆಗಳ ಕಾಲ ಆರೋಪಿಗಳನ್ನು ಖೆಡ್ಡಾಕ್ಕೆ ಕೆಡವಿದ್ದಾರೆ.
ಆರೋಪಿಗಳು ಮೂಲತಃ ತಮಿಳುನಾಡಿನವರಾದ ಸತೀಶ, ಕೇಶವನ್, ಕವಿತೇಶ್ವರನ್ ಹಾಗೂ ಅರುಣ್ ಎಂಬುದು ಗೊತ್ತಾಗಿದೆ. ಇವರು ಬೆಂಗಳೂರಿನ ಆನೆಕಲ್ ಭಾಗದ ಅತ್ತಿಬೆಲೆಯ ನಿವಾಸಿಯಾಗಿದ್ದಾರೆ. ವೃತ್ತಿಪರ ಕಳ್ಳರಾಗಿದ್ದರೆ, ರಾಜ್ಯದ ವಿವಿಧೆಡೆ ಕಳ್ಳತನ ಕೃತ್ಯ ಎಸಗಿರುವ ಈ ಆರೋಪಿಗಳು ತುಮಕೂರಿಗೂ ಎಂಟ್ರಿ ಕೊಟ್ಟಿದ್ದರು. ಅದರಂತೆ ಚಿಕ್ಕನಾಯಕನಹಳ್ಳಿಯ ಕೆಂಕೆರೆಗೆ ಬಂದಿದ್ದ ಆರೋಪಿಗಳು, ಇದೇ ಮಂಜುನಾಥ್ ಮನೆಯ ಕಳ್ಳತನಕ್ಕೆ ಹೊಂಚು ಹಾಕಿದ್ದರು. ಹಿಂದಿನ ದಿನವೇ ಸಿದ್ಧತೆ ಮಾಡಿ ಜನವರಿ 11 ರಂದು ರಾತ್ರಿ 9ಗಂಟೆಗೆ ಕಳ್ಳತನಕ್ಕೆ ಬಂದಿದ್ದರು. ಕೈಗೆ ಗ್ಲೌಸ್ ಮುಖಕ್ಕೆ ಮಾಸ್ಕ್ ಧರಿಸಿ ಬಂಧವರೆ ಗೇಟ್ ಬಳಿಯೇ ಮಕ್ಕಳ ಜೊತೆ ನಿಂತಿದ್ದ ಮಂಜುನಾಥ್ ಅಂಗಡಿ ಬಾಗಿಲು ತೆರೆಯಲು ಹೇಳಿದ್ದರು. ನಿರಾಕರಿಸಿದ ಮಂಜುನಾಥ್‌ಗೆ ಚಾಕುವಿನಿಂದ ಇರಿದು ಪರಾರಿಯಾಗಿದ್ದರು. ಇನ್ನು ಈ ವೇಳೆ ಮಂಜುನಾಥ್ ಅವರ 12 ವರ್ಷದ ಮಕ್ಕಳು ಈ ಘಟನೆಯನ್ನು ಕಂಡು ಬೆಚ್ಚಿ ಬಿದ್ದಿದ್ದಳು.
ಆರೋಪಿಗಳ ಸುಳಿವು ಸಿಕ್ಕಿದ್ಹೇಗೆ?
ಘಟನೆ ಬಳಿಕ ಪ್ರಕರಣ ದಾಖಲಿಸಿದ್ದ ಹುಳಿಯಾರು ಆರೋಪಿಗಳ ಪತ್ತೆಗೆ ಬಲೆ ಬೀಸಿದ್ದರು. ಈ ನಡುವೆ ಶಿವಮೊಗ್ಗದ ವಿನೋಭನಗರ ಪೊಲೀಸರಿಗೆ ಬೇಕಾದ ಕಳ್ಳರ ಗ್ಯಾಂಗ್‌ನ ಕಾರು ಕೊಲೆ ನಡೆದಿರುವುದು ಖಚಿತ ಮಾಹಿತಿ ಲಭ್ಯವಾಗಿತ್ತು. ಜೊತೆಗೆ ಅದೇ ಕಾರು ತುಮಕೂರಿನ ಶಿರಾ ತಾಲ್ಲೂಕಿನ ಮನೆಗಳ್ಳತನಕ್ಕೂ ಬಳಕೆಯಾಗಿತ್ತು. ಇದೇ ಅನುಮಾನದ ಮೇರೆಗೆ ಕಾರಿನ ಬೆನ್ನು ಬಿದ್ದ ಪೊಲೀಸರಿಗೆ ಬೆಂಗಳೂರಿನ ಅತ್ತಿಬೆಲೆಯಲ್ಲಿ ಆರೋಪಿಗಳು ಪತ್ತೆಯಾಗಿದ್ದು, ನಾಲ್ವರು ಹಂತಕರನ್ನು ಬಂಧಿಸಿ ವಿಚಾರಣೆ ನಡೆಸುತ್ತಿದ್ದಾರೆ.
ಇದನ್ನೂ ಓದಿ: ತುಮಕೂರು: ಮಗಳ ಕಣ್ಣೆದುರೇ ತಂದೆಯನ್ನ ಬರ್ಬರವಾಗಿ ಕೊಂದ ದುಷ್ಕರ್ಮಿಗಳು
ಇನ್ನು ಬಂಧಿತರು ಅಂತರರಾಜ್ಯ ಕಳ್ಳರಾಗಿದ್ದರೆ, ರಾಜ್ಯದ ಹಲವು ಕಡೆ ಕಳ್ಳತನ ಕೃತ್ಯ ಎಸಗಿದ್ದಾರೆ. ಜೊತೆಗೆ 2018ರಲ್ಲಿ ಆನೇಕಲ್ ಬಳಿ ನಡೆದಿದ್ದ ಕೊಲೆ ಪ್ರಕರಣ ಒಂದರಲ್ಲಿ ಶಾಮೀಲಾಗಿದ್ದರು.
ಅಸಲಿಗೆ ಕೊಲೆಯಲ್ಲಿ ಐವರು ಶಾಮೀ ಆಗಿದ್ದು, ನಾಲ್ವರ ಬಂಧನವಾಗಿದೆ. ಮತ್ತೊಬ್ಬ ಆರೋಪಿ ನಾಪತ್ತೆ ಆತನಿಗಾಗಿ ಹುಳಿಯಾರಿನ ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ.
ಕರ್ನಾಟಕದ ಹೆಚ್ಚಿನ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ