Headlines

ಗದಗ: ಮನೆ ಮುಂದೆ ಹಾರ್ನ್​ ಹೊಡೆದಿಕ್ಕೆ ನಡೆಯಿತು ರಕ್ತಪಾತ! ಗಂಭೀರ ಸ್ಥಿತಿಯಲ್ಲಿ ತಂದೆ-ಮಗ

ಗದಗ: ಮನೆ ಮುಂದೆ ಹಾರ್ನ್​ ಹೊಡೆದಿಕ್ಕೆ ನಡೆಯಿತು ರಕ್ತಪಾತ! ಗಂಭೀರ ಸ್ಥಿತಿಯಲ್ಲಿ ತಂದೆ-ಮಗ


ಮನೆ ಮುಂದೆ ಹಾರ್ನ್ ಹೊಡೆದಕ್ಕೆ ರಕ್ತಪಾತ!

ಗದಗ, ಜನವರಿ 20: ಮನೆ ಮುಂದೆ ಹಾರ್ನ್ ಹೊಡೆದ ಕ್ಷುಲ್ಲಕ ಕಾರಣಕ್ಕೆ ಎರಡು ಕುಟುಂಬಗಳ ನಡುವೆ ಭೀಕರ ಜಗಳ ಉಂಟಾಗಿ ತಂದೆ–ಮಗನನಿಗೆ ಚಾಕುವಿನಿಂದ ಇರಿದ ಘಟನೆ ಗದಗ ತಾಲೂಕಿನ ಅಡವಿ ಸೋಮಾಪುರ ಗ್ರಾಮದಲ್ಲಿ ನಡೆದಿದೆ. ಈ ಘಟನೆಯಲ್ಲಿ ತಂದೆ-ಮಗ ಗಂಭೀರವಾಗಿ ಪರಿಗಣಿಸಿದ್ದು, ಗದಗ ಜಿಮ್ ಆಸ್ಪತ್ರೆಗೆ ದಾಖಲಿಸಲಾಗಿದೆ.

ಎರಡು ಕುಟುಂಬಗಳ ನಡುವೆ ಹಿಂದಿನಿಂದಲೂ ಇತ್ತು ವೈಷಮ್ಯ

ಕಂಬಳಿ ಕುಟುಂಬ ಮತ್ತು ಚಕ್ರಣ್ಣವರ ಕುಟುಂಬದ ನಡುವೆ ನಡೆದ ಗಲಾಟೆಯಲ್ಲಿ 17 ವರ್ಷದ ಶರಣಬಸಪ್ಪ ಕಂಬಳಿ ಹಾಗೂ ಅವರ ತಂದೆ 45 ವರ್ಷದ ಹೂವಪ್ಪ ಕಂಬಳಿ ಗಂಭೀರವಾಗಿ ಗಾಯಗೊಂಡಿದ್ದಾರೆ. ಜಗಳ ಬಿಡಿಸಲು ಹೋದ ಸಹೋದರ ಮಲ್ಲಪ್ಪ ಕಂಬಳಿ ಮೇಲೂ ಹಲ್ಲೆ ನಡೆಸಲಾಗಿದೆ. ಚಕ್ರಣ್ಣವರ ಕುಟುಂಬದ ಈರಪ್ಪ, ಚಿನ್ನಪ್ಪ, ದೊಡ್ಡ ಯಲ್ಲಪ್ಪ ಹಾಗೂ ರಮೇಶ್ ಎಂಬವರು ಚಾಕು ಮತ್ತು ಕಬ್ಬಿಣದ ರಾಡ್‌ನಿಂದ ಹಲ್ಲೆ ನಡೆಸಿದ್ದಾರೆ.

ಪ್ರತಿಯಾಗಿ ಇನ್ನೊಂದು ಗುಂಪಿನ ಈರವ್ವ ಹಾಗೂ ದೊಡ್ಡ ಯಲ್ಲಪ್ಪನಿಗೂ ಗಾಯದ. ಎರಡು ಕುಟುಂಬಗಳ ಹಿಂದಿನಿಂದಲೂ ವೈಷಮ್ಯವಿದ್ದು, ಈ ಹಿಂದೆ ಗ್ರಾಮದ ಹಿರಿಯರು ರಾಜಿ ಪಂಚಾಯಿತಿ ನಡೆಸಿದ್ದರು. ನಿನ್ನೆ ರಾತ್ರಿ ನಡೆದ ಈ ಘಟನೆಯಲ್ಲಿ ಗಂಭೀರ ವ್ಯಕ್ತಿಯನ್ನು ಗದಗ ಜಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಗದಗ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

ಇದನ್ನೂ ಓದಿ ಮಾಟ-ಮಂತ್ರ ಮಾಡುತ್ತಿರುವ ಪೂಜಾರಿಯ ಬರ್ಬರ ಹತ್ಯೆ: ಅಮಾವಾಸ್ಯೆಯಂದೇ ಕೃತ್ಯವೆಸಗಿದ ದುಷ್ಕರ್ಮಿಗಳು

ಮೈಸೂರಿನಲ್ಲಿ ಯುವಕನ ಕೊಲೆ

ಮೈಸೂರಿನ ಉದಯಗಿರಿ ಬೀದಿ ಕಾಲೋನಿ ಬಳಿ ಚಾಕುವಿನಿಂದ ಇರಿದು ಯುವಕನನ್ನು ಹತ್ಯೆ ಮಾಡಿದ ಘಟನೆ ವರದಿಯಾಗಿದೆ. ಗೌಸಿಯಾ ನಗರದ ನಿವಾಸಿ ಶಹಬಾಜ್ (26) ಎಂಬ ಯುವಕನನ್ನು ಜುಬೇರ್ ಎಂಬಾತನು ಸ್ನೇಹಿತರ ಜೊತೆ ಸೇರಿ ಕೊಲೆ ಮಾಡಿದ ಆರೋಪ ಕೇಳಿಬಂದಿದೆ. ಸಣ್ಣಪುಟ್ಟ ವಿಚಾರಕ್ಕೆ ಗಲಾಟೆ ಉಂಟಾಗಿ ಈ ದುರ್ಘಟನೆ ಸಂಭವಿಸಿದೆ. ಈ ಸಂಬಂಧ ಉದಯಗಿರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರಿದಿದೆ.

ಕರ್ನಾಟಕದ ಹೆಚ್ಚಿನ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.



Source link

Leave a Reply

Your email address will not be published. Required fields are marked *