‘ಅಮೃತಧಾರೆ’ ಧಾರಾವಾಹಿಯಲ್ಲಿ ಗೌತಮ್ ದಿವಾನ್ ತನ್ನ ಪತ್ನಿ ಭೂಮಿಕಾ ಮತ್ತು ಮಗನೊಂದಿಗೆ ದಿವಾನ್ ಮನೆಗೆ ಮರಳಿದ್ದಾರೆ. ಈ ಅನಿರೀಕ್ಷಿತ ಪುನರಾಗಮನದಿಂದ ಜೈದೇವ್ ಮತ್ತು ಶಕುಂತಲಾ ದೇವಿಗೆ ಆಘಾತವಾಗಿದ್ದು, ಮನೆಯಲ್ಲಿ ಮತ್ತೆ ಗೌತಮ್ ದರ್ಬಾರ್ ಶುರುವಾಗಲಿದೆ.
ಬೆಂಗಳೂರು (ಫೆ.01): ಜೀ ಕನ್ನಡ ವಾಹಿನಿಯ ಜನಪ್ರಿಯ ಧಾರಾವಾಹಿ ‘ಅಮೃತಧಾರೆ’ ಈಗ ರೋಚಕ ಘಟ್ಟವನ್ನು ತಲುಪಿದೆ. ವೀಕ್ಷಕರು ಎಷ್ಟೋ ದಿನಗಳಿಂದ ಕಾಯುತ್ತಿದ್ದ ಕ್ಷಣವೊಂದು ಕೊನೆಗೂ ಬಂದೊದಗಿದೆ. ದಿವಾನ್ ಮನೆಯಲ್ಲಿ ಅಟ್ಟಹಾಸ ಮೆರೆಯುತ್ತಿದ್ದ ಕೇಡಿಗಳಿಗೆ ಬ್ರೇಕ್ ಹಾಕಲು, ಮನೆಯ ಯಜಮಾನ ಗೌತಮ್ ದಿವಾನ್ ಮತ್ತೆ ಮರಳಿದ್ದಾರೆ. ವಾಹಿನಿ ಬಿಡುಗಡೆ ಮಾಡಿರುವ ಹೊಸ ಪ್ರೋಮೋ ವೀಕ್ಷಕರ ಎದೆಯಲ್ಲಿ ಕುತೂಹಲದ ಕಿಚ್ಚು ಹಚ್ಚಿದೆ.

ಕಳೆದ ಕೆಲವು ಸಂಚಿಕೆಗಳಿಂದ ಗೌತಮ್ ದಿವಾನ್ ಇಲ್ಲದ ಮನೆಯಲ್ಲಿ ಜೈದೇವ್ ಮತ್ತು ಶಕುಂತಲಾ ದೇವಿ ಆಡಿದ್ದೇ ಆಟವಾಗಿತ್ತು. ಅಧಿಕಾರದ ಮದದಲ್ಲಿ ತೇಲುತ್ತಿದ್ದ ಜೈದೇವ್, ‘ಎದುರಾಳಿ ನನ್ನ ಎದುರಿಗೆ ಬರಬೇಕು’ ಎಂದು ಬೊಬ್ಬೆ ಹೊಡೆಯುತ್ತಿದ್ದ.

ಆದರೆ, ಈಗ ಆತನ ಸವಾಲಿಗೆ ಉತ್ತರ ಸಿಕ್ಕಿದೆ. ಗೌತಮ್ ದಿವಾನ್ ಒಂಟಿಯಾಗಿ ಬಂದಿಲ್ಲ, ತನ್ನ ಪ್ರೀತಿಯ ಪತ್ನಿ ಭೂಮಿಕಾ ಒಂದಾಗಿರುವ ಬೆನ್ನಲ್ಲಿಯೇ ಇದೀಗ ತನ್ನ ಮಗನೊಂದಿಗೆ (ಮರಿ ಸಿಂಹ) ರಾಯಲ್ ಎಂಟ್ರಿ ಕೊಟ್ಟಿದ್ದಾರೆ. ‘ದಿವಾನ್ ಮನೆಗೆ ಸಿಂಹದ ಜೊತೆಗೆ ಮರಿ ಸಿಂಹಾನೂ ಬಂತು’ ಎಂಬ ಮಾತು ಈಗ ಅಕ್ಷರಶಃ ಸತ್ಯವಾಗಿದೆ.

ಗೌತಮ್ ದಿವಾನ್ ಅವರ ಕಾರು ಮನೆಯ ಪೋರ್ಟಿಕೋಗೆ ಬರುತ್ತಿದ್ದಂತೆಯೇ, ಮನೆಯ ಕೆಲಸಗಾರರು ಮತ್ತು ಸಿಬ್ಬಂದಿಗಳು ಓಡಿ ಬಂದು ಗೌರವ ಸಲ್ಲಿಸುವ ದೃಶ್ಯ ಮನಮುಟ್ಟುವಂತಿದೆ. ಇದು ಗೌತಮ್ ಗಳಿಸಿರುವ ನಿಜವಾದ ಆಸ್ತಿ ಮತ್ತು ವ್ಯಕ್ತಿತ್ವವನ್ನು ತೋರಿಸುತ್ತದೆ.

ಇತ್ತ ಗೌತಮ್ ಮರಳಿದ್ದನ್ನು ಕಂಡು ಜೈದೇವ್ ಮತ್ತು ಶಕುಂತಲಾ ದೇವಿಯ ಮುಖದಲ್ಲಿ ಬಣ್ಣ ಮಾಸಿದೆ. ರಾತ್ರಿ ನೆಮ್ಮದಿಯಿಂದ ಮಲಗಿದ್ದ ಜೈದೇವ್‌ನ ನಿದ್ದೆ ಕೆಡಿಸಲು ಗೌತಮ್ ಮಾಡಿದ ಒಂದೇ ಒಂದು ಫೋನ್ ಕರೆ ಸಾಕಿತ್ತು. ಆ ಅನಿರೀಕ್ಷಿತ ಕರೆಯಿಂದ ಜೈದೇವ್ ಬೆಚ್ಚಿಬಿದ್ದಿದ್ದು, ‘ಇನ್ನ ನಿನ್ ಕಥೆ ಗೋವಿಂದಾ ಗೋವಿಂದಾ’ ಎಂದು ವೀಕ್ಷಕರು ಕಮೆಂಟ್ ಮಾಡುತ್ತಿದ್ದಾರೆ.

ಎಲ್ಲದಕ್ಕಿಂತ ಹೆಚ್ಚಾಗಿ, ಗೌತಮ್ ಮತ್ತು ಭೂಮಿಕಾ ಒಂದಾಗಿರುವುದು ಧಾರಾವಾಹಿ ಪ್ರಿಯರಿಗೆ ಹಬ್ಬದ ಊಟದಂತಾಗಿದೆ. ಇವರಿಬ್ಬರ ಜೋಡಿ ಮತ್ತೆ ಒಂದಾಗಿರುವುದರಿಂದ ದಿವಾನ್ ಮನೆಯ ಅಸಲಿ ಗತ್ತು ಮರಳಿದೆ. ಜೈದೇವ್ ಮತ್ತು ಶಕುಂತಲಾ ಹೆಣೆದಿದ್ದ ತಂತ್ರಗಳೆಲ್ಲವೂ ಈಗ ಉಲ್ಟಾ ಹೊಡೆಯುವ ಸಮಯ ಬಂದಿದೆ.

ಗೌತಮ್ ದಿವಾನ್ ತನ್ನ ಕುಟುಂಬವನ್ನು ಹೇಗೆ ರಕ್ಷಿಸಿಕೊಳ್ಳುತ್ತಾನೆ ಮತ್ತು ದುಷ್ಟರಿಗೆ ಹೇಗೆ ಪಾಠ ಕಲಿಸುತ್ತಾನೆ ಎಂಬುದೇ ಮುಂದಿನ ಸಂಚಿಕೆಗಳ ಹೈಲೈಟ್. ವೀಕ್ಷಕರೇ, ಇನ್ಮುಂದೆ ‘ಅಮೃತಧಾರೆ’ಯಲ್ಲಿ ಗೌತಮ್ ದಿವಾನ್ ದರ್ಬಾರ್ ಶುರುವಾಗಲಿದ್ದು, ಜೈದೇವ್‌ನ ಪತನವನ್ನು ಕಣ್ತುಂಬಿಕೊಳ್ಳಲು ಸಜ್ಜಾಗಿ.

Source link
ಅಮೃತಧಾರೆ: ಮರಿಸಿಂಹನ ಜೊತೆ ಅರಮನೆಗೆ ಮರಳಿದ ಗೌತಮ್ ದಿವಾನ್; ಜೈದೇವ್ ಆಟಕ್ಕೆ ಬ್ರೇಕ್, ಶಕುಂತಲಾಗೆ ಬಿಗ್ ಶಾಕ್!