ಅಡಿಗೆ ಅನಿಲ ಸೊರಕೆಯಿಂದ ಅಗ್ನಿ ಅವಗಢ; ಗಂಭೀರಗೊಂಡ ಮೂವರ ಸಾವು!
ರಾಮನಗರ, ಫೆಬ್ರುವರಿ 02: ಕನಕಪುರದ (ರಾಮನಗರ) ಅಮರನಾರಾಯಣ ಬ್ಲಾಕ್‌ನಲ್ಲಿ ಜನವರಿ 26ರಂದು ಅಡಿಗೆ ಅನಿಲ ಸೋರಿಕೆಯಾಗಿ ಅಗ್ನಿ ಅವಘಡ ಸಂಭವಿಸಿತ್ತು. ಈ ವೇಳೆ ಒಂದೇ ಕುಟುಂಬದವರು ಗಂಭೀರವಾಗಿ ಗಾಯಗೊಂಡಿದ್ದು, ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿದ್ದು ತಡವಾಗಿ ಬೆಳಕಿಗೆ ಬಂದಿದೆ.
ಒಂದು ವಾರ ಸಾವು ಬದುಕಿನ ನಡುವೆ ಹೋರಾಡಿದ ಕುಟುಂಬ
ಸೋಮವಾರ (ಜ.26) ಅಡಿಗೆ ಅನಿಲ ಸೊರಿಕೆಯಿಂದ ಸಂಭವಿಸಿದ ಅಗ್ನಿ ದುರಂತದಲ್ಲಿ ಮನೆ ಮಂದಿಯೆಲ್ಲಾ ತಪ್ಪಿದ್ದರು. ಈ ವೇಳೆ ಸಿದ್ದರಾಜು (55), ಅವರ ಪತ್ನಿ ಚಂದ್ರಮ್ಮ (50) ಹಾಗೂ ಪುತ್ರ ಪ್ರಶಾಂತ್ (22) ಎಂಬ ಒಂದೇ ಕುಟುಂಬದ ಮೂವರು ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾರೆ.
ಮನೆಯೊಳಗೆ ತಿಂಡಿ ತಯಾರಿಸುವ ವೇಳೆ ಅಡಿಗೆ ಅನಿಲ ಸೋರಿಕೆ, ಏಕಾಏಕಿ ಬೆಂಕಿ ಹೊತ್ತಿಕೊಂಡಿತ್ತು. ಈ ದುರಂತದಲ್ಲಿ ಮೂವರಿಗೂ ತೀವ್ರ ಗಾಯಗಳಾಗಿದ್ದರೆ, ಹೆಚ್ಚಿನ ಚಿಕಿತ್ಸೆಗೆ ಅವರನ್ನು ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಿಸಲಾಗಿದೆ. ಆಸ್ಪತ್ರೆಯಲ್ಲಿ ಕಳೆದ ಕೆಲ ದಿನಗಳಿಂದ ತೀವ್ರ ನಿಗಾ ಘಟಕದಲ್ಲಿ (ICU) ಚಿಕಿತ್ಸೆ ನೀಡಲಾಗುತ್ತಿದ್ದರೂ, ಮೂವರೂ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾರೆ ಎಂದು ವೈದ್ಯರು ತಿಳಿಸಿದ್ದಾರೆ. ಈ ಕನಕಪುರ ಪೊಲೀಸ್ ಠಾಣಾ ಘಟನೆ ನಡೆದಿದ್ದು, ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಮುಂದುವರಿಸಿದ್ದಾರೆ.
ಕರ್ನಾಟಕದ ಹೆಚ್ಚಿನ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.