Kannada Serial Actress: ಓರ್ವ ನಟಿಯೋರ್ವರು ಏಕಕಾಲಕ್ಕೆ ಎರಡು ಕನ್ನಡ ಧಾರಾವಾಹಿಗಳಲ್ಲಿ ನಟಿಸುತ್ತಿದ್ದಾರೆ. ಈಗ ಎರಡೂ ಧಾರಾವಾಹಿಯಿಂದ ಹೊರಬರುವ ಅಥವಾ ಬ್ರೇಕ್ ತಗೊಳ್ಳುವ ಸಾಧ್ಯತೆ ಇದೆ ಎನ್ನಲಾಗಿದೆ.

ಕನ್ನಡ ಕಿರುತೆರೆಯ ಜನಪ್ರಿಯ ಧಾರಾವಾಹಿಗಳಾದ ‘ಲಕ್ಷ್ಮೀ ನಿವಾಸ’ ಮತ್ತು ‘ಶಾಂಭವಿ’ ಮೂಲಕ ಜನಪ್ರಿಯತೆ ಪಡೆದಿರುವ ನಟಿ ಮಾನಸಾ ಮನೋಹರ್ ಅವರು ಶೀಘ್ರದಲ್ಲೇ ನಟನೆಯಿಂದ ತಾತ್ಕಾಲಿಕ ವಿರಾಮ ಪಡೆಯುವ ಸಾಧ್ಯತೆ ಹೆಚ್ಚಿದೆ.

ಮಾನಸಾ ಮನೋಹರ್ ಅವರು ಈಗ ಮೊದಲ ಮಗುವಿನ ನಿರೀಕ್ಷೆಯಲ್ಲಿದ್ದಾರೆ. ಅವರು ಗರ್ಭಿಣಿಯಾಗಿದ್ದು, ಮಗುವಿನ ಆರೋಗ್ಯ, ಅವರ ಆರೋಗ್ಯದ ಕಡೆಗೆ ಗಮನ ಕೊಡಬೇಕಿದೆ. ಮಗುವಿನ ಜೊತೆ ಸಮಯ ಕಳೆಯಲು, ಅವರು ಸ್ವಲ್ಪ ದಿನಗಳ ಕಾಲ ಶೂಟಿಂಗ್‌ನಿಂದ ದೂರ ಸರಿಯಲಿದ್ದಾರೆ ಎನ್ನಲಾಗ್ತಿದೆ.

’ಲಕ್ಷ್ಮೀ ನಿವಾಸ’ ಧಾರಾವಾಹಿಯಲ್ಲಿ ಮಾನಸಾ ಅವರು ‘ನೀಲು’ ಎಂಬ ನೆಗೆಟಿವ್ ಶೇಡ್ ಪಾತ್ರವನ್ನು ಅದ್ಭುತವಾಗಿ ನಿರ್ವಹಿಸುತ್ತಿದ್ದಾರೆ. ಸದ್ಯ ಧಾರಾವಾಹಿಯಲ್ಲಿ ನೀಲು ಪಾತ್ರಕ್ಕೆ ಹೆಚ್ಚಿನ ಆದ್ಯತೆ ಕೊಟ್ಟು, ಅದರ ಸುತ್ತ ಕತೆ ಸಾಗುತ್ತಿದೆ.

ಮಾನಸಾ ಅವರು ಬ್ರೇಕ್ ತಗೊಳ್ಳಬೇಕಿದ್ದು, ಹೀಗಾಗಿ ಸ್ವಲ್ಪ ದಿನಗಳ ಕಾಲ ಪಾತ್ರ ಬಂದರೂ ಬರಬಹುದು, ಪಾತ್ರ ಅಂತ್ಯ ಮಾಡಲೂಬಹುದು. ಇದೇ ರೀತಿ ‘ಶಾಂಭವಿ’ ಧಾರಾವಾಹಿಯಲ್ಲೂ ಅವರ ಪಾತ್ರ ಪ್ರಮುಖವಾಗಿದೆ.

ಸಾಮಾನ್ಯವಾಗಿ ಧಾರಾವಾಹಿಗಳಲ್ಲಿ ಕಲಾವಿದರು ತಂಡದಿಂದ ಹೊರಹೋದಾಗ ಬೇರೆಯವರನ್ನು ಕರೆತರುವುದು ಅಥವಾ ಪಾತ್ರ ಅಂತ್ಯ ಮಾಡುವುದೇ ಜಾಸ್ತಿ. ಈಗ ಏನು ಮಾಡಲಿದ್ದಾರೆ ಎಂದು ಕಾದು ನೋಡಬೇಕಿದೆ.

Source link
ಏಕಕಾಲಕ್ಕೆ ಎರಡು ಕನ್ನಡ ಧಾರಾವಾಹಿಗಳಿಂದ ಹೊರಬರ್ತಾರಾ ಈ ನಟಿ? ಅನಿವಾರ್ಯತೆ ಇದೆ!