ಲೈವ್​ಗೆ ಬಂದು ಫ್ಯಾನ್ಸ್​ಗೆ ಗುಡ್​​​ನ್ಯೂಸ್​ ಕೊಟ್ಟ Bigg Boss ರಿಷಾ ಗೌಡ: ಅಭಿಮಾನಿಗಳು ಫುಲ್​ ಖುಷ್​

ಲೈವ್​ಗೆ ಬಂದು ಫ್ಯಾನ್ಸ್​ಗೆ ಗುಡ್​​​ನ್ಯೂಸ್​ ಕೊಟ್ಟ Bigg Boss ರಿಷಾ ಗೌಡ: ಅಭಿಮಾನಿಗಳು ಫುಲ್​ ಖುಷ್​

ಲೈವ್​ಗೆ ಬಂದು ಫ್ಯಾನ್ಸ್​ಗೆ ಗುಡ್​​​ನ್ಯೂಸ್​ ಕೊಟ್ಟ Bigg Boss ರಿಷಾ ಗೌಡ: ಅಭಿಮಾನಿಗಳು ಫುಲ್​ ಖುಷ್​

ಬಿಗ್​ಬಾಸ್​ 12ರ ಸ್ಪರ್ಧಿಯಾಗಿದ್ದ ನಟಿ, ಮಾಡೆಲ್ ರಿಷಾ ಗೌಡ ಅವರು ಇನ್​ಸ್ಟಾಗ್ರಾಮ್​ ಲೈವ್​ ಮೂಲಕ ಅಭಿಮಾನಿಗಳಿಗೆ ಸಿಹಿ ಸುದ್ದಿಯೊಂದನ್ನು ನೀಡಿದ್ದಾರೆ. ಬಿಗ್​ಬಾಸ್​ ಸ್ಪರ್ಧಿಗಳನ್ನು ಕಣ್ತುಂಬಿಸಿಕೊಳ್ಳುವ ಅವಕಾಶ ಮತ್ತೊಮ್ಮೆ ಸಿಕ್ಕಿದ್ದಕ್ಕೆ ಅಭಿಮಾನಿಗಳು ಫುಲ್​​ ಖುಷ್ ಆಗಿದ್ದಾರೆ. ನಟಿ ಹೇಳಿದ್ದೇನು?

ಬಿಗ್​ಬಾಸ್​ 12 (Bigg Boss 12)ರ ಟಫೆಸ್ಟ್​ ಸ್ಪರ್ಧಿ ಎನ್ನಿಸಿಕೊಂಡಿದ್ದ ರಿಷಾ ಗೌಡ ಅವರು, ‘ಬಿಗ್‌ ಬಾಸ್’ಗೆ ಎಂಟ್ರಿ ಕೊಟ್ಟ 5ನೇ ವಾರದಲ್ಲಿ ದೊಡ್ಮನೆಯಿಂದ ಔಟ್‌ ಆಗಿ ಹೊರ ಬಂದವರು. ನಟಿ, ಮಾಡೆಲ್, ರಂಗಭೂಮಿ ಕಲಾವಿದೆ, ರಾಷ್ಟ್ರೀಯ ಕ್ರೀಡಾಸ್ಪರ್ಧಿಯಾಗಿರುವ ರಿಷಾ ಗೌಡ ಇದೀಗ ದಿಢೀರ್​ ಎಂದು ಇನ್​ಸ್ಟಾಗ್ರಾಮ್​ ಲೈವ್​ಗೆ ಬಂದು ಗುಡ್​ ನ್ಯೂಸ್​ ಕೊಟ್ಟಿದ್ದಾರೆ.

ಅಷ್ಟಕ್ಕೂ ರಿಷಾ ಗೌಡ ಕುರಿತು ಹೇಳುವುದಾದರೆ, ಇವರು ಮೈಸೂರಿನವರು. 2019ರಲ್ಲಿ ಮಿಸ್ ಮೈಸೂರು, 2020ರಲ್ಲಿ ಮಿಸ್ ಕರ್ನಾಟಕ ಪಟ್ಟ ಗೆದ್ದಿದ್ದಾರೆ. 2021ರಲ್ಲಿ ‘ಕ್ರೇಜಿ ಕೀರ್ತಿ’ ಸಿನಿಮಾದಲ್ಲಿ ನಟಿಸಿದ್ದು, ಇದು SIIMAಯಲ್ಲಿ ಅತ್ಯುತ್ತಮ ಚೊಚ್ಚಲ ನಟಿ ವಿಭಾಗಕ್ಕೆ ನಾಮನಿರ್ದೇಶನಗೊಂಡಿತು.

ನಂತರ ‘ಜೂನಿಯರ್’ (ತೆಲುಗು) ಮತ್ತು ‘ಆಸ್ಟಿನ್ ನ ಮಹಾನ್ ಮೌನ’, ಭಗೀರಥ ಸಿನಿಮಾಗಳಲ್ಲಿ ನಟಿಸಿದರು. ‘ಬೆಂಗಳೂರು ಇನ್’ (ಧರ್ಮ ಕೀರ್ತಿ ನಿರ್ದೇಶನ), ‘ಪ್ರರಕಾಮಿ’ (ಪ್ರಮೋದ್ ಶೆಟ್ಟಿ ನಟಿಸಿದ್ದು), ‘ಪಿಂಗಕ್ಷ’ ಸಿನಿಮಾದಲ್ಲಿ ನಟಿಸಿದ್ದಾರೆ. ತೆಲುಗು ಸಿನಿಮಾಗಳಾದ ‘ಮಿಸ್ ಕರೋನಲ್’, ‘ಡಿಯರ್ ಲವ್’ಗಳಲ್ಲಿ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.

ರಿಷಾ ಗೌಡಗೆ ರಂಗಭೂಮಿ ನಂಟು ಕೂಡ ಇದೆ. ರಿಷಾ "ಬಿಗ್ ಬಾಸ್ ಮೂಲಕ ಜನರ ಪ್ರೀತಿಯನ್ನು ಸಂಪಾದಿಸಬಹುದು. ಅದಕ್ಕಾಗಿ ನಾನು ಈ ಮನೆಗೆ ಬಂದಿದ್ದೇನೆ" ಎಂದು ಹೇಳಿದ್ದರು.

ಅಂದಹಾಗೆ ಇದೀಗ ಅವರು ಲೈವ್​ಗೆ ಬರಲು ಕಾರಣ, ಇದೇ 14 ಮತ್ತು 15ರಂದು ಬಿಗ್​ಬಾಸ್​ 12ರ ಸ್ಪರ್ಧಿಗಳ ಮರುಮಿಲನ ಕಾರ್ಯಕ್ರಮ ದೊಡ್ಮನೆ ಹಬ್ಬ ಕಲರ್ಸ್​ ಕನ್ನಡದಲ್ಲಿ ಪ್ರಸಾರ ಆಗುತ್ತಿದ್ದು, ಅದನ್ನು ವೀಕ್ಷಿಸುವಂತೆ ಮನವಿ ಮಾಡಿಕೊಂಡಿದ್ದಾರೆ.

ಈ ಕಾರ್ಯಕ್ರಮ ಸಕತ್​ ಎಂಜಾಯ್​ ಮಾಡಿದ್ವಿ. ನನಗೆ ಸ್ವಲ್ಪ ಕೋಪ ಜಾಸ್ತಿ. ಅದನ್ನು ಬಿಗ್​ಬಾಸ್​ನಿಂದ ಅರಿತುಕೊಂಡೆ. ನೀವೆಲ್ಲಾ ಬಿಗ್​ಬಾಸ್​​ ಎಂಜಾಯ್​ ಮಾಡಿರುತ್ತೀರಿ ಎಂದು ಗೊತ್ತು. ದೊಡ್ಮನೆ ಹಬ್ಬ ಇನ್ನೂ ಸಕತ್​ ಆಗಿದೆ. ಅಲ್ಲಿ ಹಬ್ಬದ ವಾತಾವರಣ ಇದೆ. ಎಲ್ಲರೂ ತಪ್ಪದೇ ನೋಡಿ ಎಂದು ಕೇಳಿಕೊಂಡಿದ್ದಾರೆ ನಟಿ. ಅಂದಹಾಗೆ ಕಲರ್ಸ್​ ಕನ್ನಡ ಇದಾಗಲೇ ಹಲವಾರು ಪ್ರೊಮೋಗಳನ್ನು ಬಿಡುಗಡೆ ಮಾಡುತ್ತಿದೆ.

Source link

Leave a Reply

Your email address will not be published. Required fields are marked *