ಯಶ್ (ಯಶ್) ಅಭಿನಯದ ‘ಟಾಕ್ಸಿಕ್’ ಸಿನಿಮಾ ಬಿಡುಗಡೆಗೂ ಮುನ್ನವೇ ಜಾಗತಿಕ ಮಟ್ಟದಲ್ಲಿ ಹೊಸ ದಾಖಲೆ ಬರೆಯುತ್ತಿದೆ. ಸಿನಿಮಾದ ಇತರೆ ರಾಜ್ಯಗಳ ಬಿಡುಗಡೆ ಹಕ್ಕುಗಳು ದಾಖಲೆ ಮೊತ್ತಕ್ಕೆ ಮಾರಾಟವಾಗುತ್ತಿದೆ. ಕೇವಲ ಸಿನಿಮಾದ ಟೀಸರ್ ಒಂದೇ ಸಿನಿಮಾದ ಬಗ್ಗೆ ಬಹುದೊಡ್ಡ ಹೈಪ್ ಕ್ರಿಯೇಟ್ ಆಗಿದೆ. ಆದರೆ ‘ಟಾಕ್ಸಿಕ್’ ಬಿಡುಗಡೆ ಆಗುವ ದಿನವೇ ಹಿಂದಿಯ ‘ಧುರಂಧರ 2’ ಸಿನಿಮಾ ಸಹ ಬಿಡುಗಡೆ ಆಗುತ್ತಿದೆ, ಎರಡೂ ಸಿನಿಮಾಗಳ ಬಗ್ಗೆ ಭಾರಿ ಪೈಪೋಟಿ ಏರ್ಪಟ್ಟಿದೆ. ಆದರೆ ಇದೀಗ ‘ಟಾಕ್ಸಿಕ್’ ಸಿನಿಮಾ ‘ಧುರಂಧರ 2’ ಸಿನಿಮಾವನ್ನು ಹಿಂದಿಕ್ಕಿ ಮೊದಲ ಸ್ಥಾನಕ್ಕೇರಿದೆ!
ಮತ್ತು ವಿಶ್ವಾಸಾರ್ಹ ಸಿನಿಮಾ ಡೇಟಾಬೇಸ್ (ಮಾಹಿತಿ ಸಂಗ್ರಹ) ಜಾಲತಾಣವಾದ ಐಎಂಬಿಡಿ (IMDb) ಬಿಡುಗಡೆ ಮಾಡಿರುವ 2026ರ ಅತ್ಯಂತ ನಿರೀಕ್ಷಿತ ಭಾರತೀಯ ಸಿನಿಮಾಗಳಲ್ಲಿ ಯಶ್ ಅವರ ‘ಟಾಕ್ಸಿಕ್’ ನಂಬರ್ 1 ಸ್ಥಾನವನ್ನು ಅಲಂಕರಿಸಲಾಗಿದೆ. ‘ಟಾಕ್ಸಿಕ್’ ಎದುರಾಳಿ ಎಂದು ಬಿಂಬಿತವಾಗುತ್ತಿರುವ ಬಾಲಿವುಡ್‌ನ ಸ್ಟಾರ್ ನಟ ರಣವೀರ್ ಸಿಂಗ್ ಅಭಿನಯದ ‘ಧುರಂಧರ್ 2’ ಚಿತ್ರದ ಹಿಂದಿಕ್ಕಿ ‘ಟಾಕ್ಸಿಕ್’ ಈ ಸಾಧನೆ ಮಾಡಿರುವುದು ವಿಶೇಷ. ವರದಿಗಳ ಪ್ರಕಾರ, ಐಎಂಡಿಬಿ ಬಳಕೆದಾರರ ಶೇ. 35ರಷ್ಟು ಆಸಕ್ತಿಯೊಂದಿಗೆ ಯಶ್ ಸಿನಿಮಾ ಅಗ್ರಸ್ಥಾನದಲ್ಲಿದ್ದರೆ, ‘ಧುರಂಧರ 2’ ಶೇ. 26.6ರಷ್ಟು ವೀಕ್ಷಕರ ಆಸಕ್ತಿಯು ಎರಡನೇ ಸ್ಥಾನಕ್ಕೆ ತೃಪ್ತಿ ಪಟ್ಟುಕೊಂಡಿದೆ.
ಇದನ್ನೂ ಓದಿ:ಯಶ್, ರಣಬೀರ್ ನಟನೆಯ ‘ರಾಮಾಯಣ’ಕ್ಕೆ ಯುವ ಸ್ಟಾರ್ ಎಂಟ್ರಿ
ಗೀತು ಮೋಹನ್‌ದಾಸ್ ನಿರ್ದೇಶನದ ಈ ಗ್ಯಾಂಗ್‌ಸ್ಟರ್ ಆಕ್ಷನ್ ಚಿತ್ರದಲ್ಲಿ ಯಶ್ ಅವರ ಸ್ಟೈಲಿಶ್ ಲುಕ್ ಮತ್ತು ಟೀಸರ್ ನೋಡಲು ಭರ್ಜರಿ ವೈರಲ್ ಆಗಿದೆ. ಸಿನಿಮಾದಲ್ಲಿ ಕಿಯಾರಾ ಅಡ್ವಾಣಿ, ನಯನತಾರಾ ಮತ್ತು ರುಕ್ಮಿಣಿ ವಸಂತ್ ಸೇರಿದಂತೆ ಬೃಹತ್ ತಾರಾಗಣವಿದೆ. ಸಿನಿಮಾದಲ್ಲಿ ದೇಶದ ಮತ್ತು ಹಾಲಿವುಡ್ನ ಕೆಲವು ಪ್ರಮುಖ ತಂತ್ರಜ್ಞರು ಕೆಲಸ ಮಾಡಿದ್ದಾರೆ. ಮಾರ್ಚ್ 19 ರಂದು ‘ಟಾಕ್ಸಿಕ್’ ಸಿನಿಮಾ ಬಿಡುಗಡೆ ಆಗಲಿದೆ. ಅದೇ ದಿನ ‘ಧುರಂಧರ 2’ ಸಿನಿಮಾ ಸಹ ಬಿಡುಗಡೆ ಆಗುತ್ತಿದೆ.
‘ಧುರಂಧರ 2’ ಸಿನಿಮಾ ‘ಟಾಕ್ಸಿಕ್’ಗೆ ಭರ್ಜರಿ ಎದುರಾಳಿ ಆಗುವ ಎಲ್ಲ ಲಕ್ಷಣಗಳಿವೆ. ‘ಧುರಂಧರ’ ಸಿನಿಮಾ ಬಾಕ್ಸ್ ಆಫೀಸ್‌ನಲ್ಲಿ ಭಾರಿ ಯಶಸ್ಸು ಗಳಿಸಿದೆ. ‘ಪುಷ್ಪ 2’ ಸಿನಿಮಾದ ದಾಖಲೆಯನ್ನು ಸಹ ಹಿಂದಿಕ್ಕಿದೆ. ‘ಧುರಂಧರ’ ದೇಶ ಪ್ರೇಮವನ್ನು ಜಾಗೃತಗೊಳಿಸುವ ಸಿನಿಮಾ ಎಂಬ ಅಂಶವೂ ಸಿನಿಮಾದ ಬೆನ್ನಿಗಿದೆ. ಹೀಗಾಗಿ ಸಿನಿಮಾದ ಬಗ್ಗೆ ಸಹಜವಾಗಿಯೇ ಕಾಣಿಸುತ್ತದೆ. ಎರಡೂ ಸಿನಿಮಾಗಳು ಒಂದೇ ದಿನ ಬಿಡುಗಡೆ ಆಗುತ್ತಿದೆ, ಯಾವುದು ಹೆಚ್ಚು ಯಶಸ್ಸು ಗಳಿಸಲಿದೆ ಎಂದು ನೋಡಬೇಕಿದೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ