Yash: ‘ಇದು ಸೆ*ಕ್ಸ್ ಬಗ್ಗೆ ಅಲ್ಲ, ಪ್ರಬುದ್ಧರಿಗೆ ಒಂದು ಕಾಲ್ಪನಿಕ ಕಥೆ’ ಎಂದು ‘ಟಾಕ್ಸಿಕ್’ ಸೀಕ್ರೆಟ್ ಬಿಚ್ಚಿಟ್ಟ ಅನುರಾಗ್ ಕಶ್ಯಪ್ | Yash Toxic Fairytale For Grown Movie Ups Does Not To Be About Physical Relationship Says Director Anurag Kashyap

ಗೀತು ಮೋಹನ್ ದಾಸ್ ನಿರ್ದೇಶನದ, ಕೆವಿಎನ್ ಪ್ರೊಡಕ್ಷನ್ಸ್ ಅಡಿಯಲ್ಲಿ ಮೂಡಿಬರುತ್ತಿರುವ ಈ ಪ್ಯಾನ್-ಇಂಡಿಯಾ ಸಿನಿಮಾ ಜೂನ್ 4 ರಂದು ವಿಶ್ವದಾದ್ಯಂತ ತೆರೆಕಾಣಲು ಸಜ್ಜಾಗಿದೆ. ಒಟ್ಟಾರೆಯಾಗಿ ಯಶ್ ಅವರ ಈ ಹೊಸ ಅವತಾರ ಬೆಳ್ಳಿತೆರೆಯ ಮೇಲೆ ಯಾವ ರೀತಿ ಧೂಳೆಬ್ಬಿಸಲಿದೆ ಎಂಬುದನ್ನು ಕಾದು ನೋಡಬೇಕಿದೆ.

ರಾಕಿಂಗ್ ಸ್ಟಾರ್ ಯಶ್ ‘ಟಾಕ್ಸಿಕ್’ ಚಿತ್ರದ ಸೀಕ್ರೆಟ್ ಬಿಚ್ಚಿಟ್ಟ ಅನುರಾಗ್ ಕಶ್ಯಪ್

ಸ್ಯಾಂಡಲ್‌ವುಡ್‌ನಿಂದ ಗ್ಲೋಬಲ್ ಸ್ಟಾರ್ ಆಗಿ ಬೆಳೆದಿರುವ ರಾಕಿಂಗ್ ಸ್ಟಾರ್ ಯಶ್ (Rocking Star Yash) ಅವರ ಮುಂದಿನ ಸಿನಿಮಾ ‘ಟಾಕ್ಸಿಕ್’ (Toxic) ಬಗ್ಗೆ ಇಡೀ ಭಾರತೀಯ ಚಿತ್ರರಂಗವೇ ಕಾತರದಿಂದ ಕಾಯುತ್ತಿದೆ. ಇತ್ತೀಚೆಗೆ ಲಾಸ್ ಏಂಜಲೀಸ್‌ನಲ್ಲಿ ‘ರಾಮಾಯಣ’ ಚಿತ್ರದ ಪ್ರಚಾರದ ನಡುವೆ ಯಶ್ ಅವರು ತಮ್ಮ ಬಹುನಿರೀಕ್ಷಿತ ‘ಟಾಕ್ಸಿಕ್: ಎ ಫೇರಿಟೇಲ್ ಫಾರ್ ಗ್ರೋನ್-ಅಪ್ಸ್’ ಚಿತ್ರದ ಒಂಬತ್ತು ನಿಮಿಷಗಳ ವಿಶೇಷ ದೃಶ್ಯಗಳನ್ನು ಪ್ರದರ್ಶಿಸಿದ್ದಾರೆ. ಈ ವೇಳೆ ಚಿತ್ರದ ಕಥಾಹಂದರ ಹಾಗೂ ಅದರ ವಿಶಿಷ್ಟತೆಯ ಬಗ್ಗೆ ಯಶ್ ಕೆಲವು ಆಸಕ್ತಿದಾಯಕ ವಿಷಯಗಳನ್ನು ಹಂಚಿಕೊಂಡಿದ್ದಾರೆ.

‘ಟಾಕ್ಸಿಕ್’ ಕಥೆ ಏನು? ಯಶ್ ಹೇಳಿದ್ದೇನು?

ಯಶ್ ಅವರ ಪ್ರಕಾರ, ‘ಟಾಕ್ಸಿಕ್’ ಕೇವಲ ಒಂದು ಸಾಧಾರಣ ಮಾಸ್ ಸಿನಿಮಾವಲ್ಲ. “ಇದು ನಾನು ಮಾಡುತ್ತಿರುವ ‘ರಾಮಾಯಣ’ ಚಿತ್ರಕ್ಕಿಂತ ಸಂಪೂರ್ಣವಾಗಿ ಭಿನ್ನವಾಗಿದೆ. ಇದೊಂದು ‘ವೈಲ್ಡ್’ ಸಿನಿಮಾ ಹಾಗೂ ಪ್ರಬುದ್ಧರಿಗಾಗಿ ಸಿದ್ಧಪಡಿಸಿದ ಕಾಲ್ಪನಿಕ ಕಥೆ. ಸರಳವಾಗಿ ಹೇಳಬೇಕೆಂದರೆ ಇದೊಂದು ತಂದೆ ಮತ್ತು ಮಗನ ನಡುವಿನ ಸೇಡಿನ ಕಥೆ (Father-Son Revenge Saga),” ಎಂದು ಯಶ್ ವಿವರಿಸಿದ್ದಾರೆ.

ವಿಶೇಷವೆಂದರೆ ಈ ಸಿನಿಮಾ 1947 ರಿಂದ 1961ರ ಕಾಲಘಟ್ಟದಲ್ಲಿ ನಡೆಯುತ್ತದೆ. ಭಾರತಕ್ಕೆ ಸ್ವಾತಂತ್ರ್ಯ ಸಿಕ್ಕರೂ ಗೋವಾ ರಾಜ್ಯ ಇನ್ನೂ ಪೋರ್ಚುಗೀಸರ ಆಳ್ವಿಕೆಯಲ್ಲಿದ್ದ ಕಾಲವನ್ನೇ ಈ ಸಿನಿಮಾದ ಹಿನ್ನೆಲೆಯಾಗಿ ಬಳಸಿಕೊಳ್ಳಲಾಗಿದೆ. ಇದೊಂದು ಫಿಕ್ಷನಲ್ ಗ್ಯಾಂಗ್‌ಸ್ಟರ್ ಸಿನಿಮಾ ಎಂದು ಯಶ್ ಹೇಳುವ ಮೂಲಕ ಅಭಿಮಾನಿಗಳಲ್ಲಿ ಕುತೂಹಲದ ಕಿಚ್ಚು ಹಚ್ಚಿದ್ದಾರೆ.

ಅನುರಾಗ್ ಕಶ್ಯಪ್ ವಿಶ್ಲೇಷಣೆ: ‘ಅಡಲ್ಟ್’ ಎಂದರೆ ಕೇವಲ ಅಶ್ಲೀಲತೆಯಲ್ಲ!

ಇನ್ನೊಂದೆಡೆ, ಖ್ಯಾತ ಬಾಲಿವುಡ್ ನಿರ್ದೇಶಕ ಅನುರಾಗ್ ಕಶ್ಯಪ್ (Anurag Kashyap) ಈ ಚಿತ್ರದ ಶೀರ್ಷಿಕೆಯ ಬಗ್ಗೆ ಇರುವ ತಪ್ಪು ಕಲ್ಪನೆಗಳನ್ನು ದೂರ ಮಾಡಿದ್ದಾರೆ. ‘ಫೇರಿಟೇಲ್ ಫಾರ್ ಗ್ರೋನ್-ಅಪ್ಸ್’ (ಪ್ರಬುದ್ಧರಿಗಾಗಿ ಕಾಲ್ಪನಿಕ ಕಥೆ) ಎಂದರೆ ಜನರು ಕೇವಲ ಲೈಂಗಿಕತೆ ಅಥವಾ ಅಶ್ಲೀಲತೆ ಎಂದು ಭಾವಿಸುತ್ತಾರೆ. ಆದರೆ ಕಶ್ಯಪ್ ಪ್ರಕಾರ, “ಇಲ್ಲಿ ‘ಗ್ರೋನ್-ಅಪ್ಸ್’ ಎಂದರೆ ಪ್ರಬುದ್ಧವಾಗಿ ಯೋಚಿಸುವವರು ಎಂದರ್ಥ. ಇದು ಕೇವಲ ಸೆಕ್ಸ್ ಬಗ್ಗೆ ಅಲ್ಲ. ನಮ್ಮ ಸಮಾಜ ಮತ್ತು ಸಿನಿಮಾ ಇದುವರೆಗೆ ಪುರುಷ ಮತ್ತು ಮಹಿಳಾ ಪಾತ್ರಗಳನ್ನು ಹೇಗೆ ನೋಡುತ್ತಾ ಬಂದಿದೆಯೋ, ಆ ಮೌಲ್ಯಗಳನ್ನು ಮರು ವ್ಯಾಖ್ಯಾನಿಸುವ ಸಿನಿಮಾ ಇದಾಗಿದೆ. ನಿರ್ದೇಶಕಿ ಗೀತು ಮೋಹನ್ ದಾಸ್ ಅವರು ಈ ಚಿತ್ರದ ಮೂಲಕ ಹೊಸದನ್ನೇ ಸಾಧಿಸಿದ್ದಾರೆ” ಎಂದು ಕೊಂಡಾಡಿದ್ದಾರೆ.

ಟೀಸರ್ ವಿವಾದ ಮತ್ತು ಕಶ್ಯಪ್ ತಿರುಗೇಟು:

ಈ ಹಿಂದೆ ‘ಟಾಕ್ಸಿಕ್’ ಟೀಸರ್ ಬಿಡುಗಡೆಯಾದಾಗ ಸಮಾಜದ ಕೆಲವು ವರ್ಗಗಳಿಂದ ವಿರೋಧ ವ್ಯಕ್ತವಾಗಿತ್ತು. ಮಹಿಳಾ ಆಯೋಗಕ್ಕೂ ದೂರು ಸಲ್ಲಿಕೆಯಾಗಿತ್ತು. ಈ ಬಗ್ಗೆ ಪ್ರತಿಕ್ರಿಯಿಸಿದ ಕಶ್ಯಪ್, “ನಮ್ಮ ಸಮಾಜದಲ್ಲಿ ಇಬ್ಬಂದಿ ತನವಿದೆ. ಗಂಡಸರು ಶರ್ಟ್ ಬಿಚ್ಚಿ ಮಾಸ್ ಆಗಿ ಕಾಣಿಸಿಕೊಂಡರೆ ಯಾರು ಪ್ರಶ್ನಿಸುವುದಿಲ್ಲ. ಆದರೆ ಮಹಿಳೆಯರು ಪ್ರಬಲವಾಗಿ ಅಥವಾ ತಮ್ಮದೇ ಆದ ರೀತಿಯಲ್ಲಿ ಕಾಣಿಸಿಕೊಂಡಾಗ ವಿರೋಧ ವ್ಯಕ್ತವಾಗುತ್ತದೆ. ಟಾಕ್ಸಿಕ್ ಒಂದು ಧೈರ್ಯವಂತ ಪ್ರಯತ್ನ,” ಎಂದು ಸಮರ್ಥಿಸಿಕೊಂಡಿದ್ದಾರೆ.

ಗೀತು ಮೋಹನ್ ದಾಸ್ ನಿರ್ದೇಶನದ, ಕೆವಿಎನ್ ಪ್ರೊಡಕ್ಷನ್ಸ್ ಅಡಿಯಲ್ಲಿ ಮೂಡಿಬರುತ್ತಿರುವ ಈ ಪ್ಯಾನ್-ಇಂಡಿಯಾ ಸಿನಿಮಾ ಜೂನ್ 4 ರಂದು ವಿಶ್ವದಾದ್ಯಂತ ತೆರೆಕಾಣಲು ಸಜ್ಜಾಗಿದೆ. ಒಟ್ಟಾರೆಯಾಗಿ ಯಶ್ ಅವರ ಈ ಹೊಸ ಅವತಾರ ಬೆಳ್ಳಿತೆರೆಯ ಮೇಲೆ ಯಾವ ರೀತಿ ಧೂಳೆಬ್ಬಿಸಲಿದೆ ಎಂಬುದನ್ನು ಕಾದು ನೋಡಬೇಕಿದೆ.

Source link

Leave a Reply

Your email address will not be published. Required fields are marked *