
ಈಗ ಎಲ್ಲೆಲ್ಲೂ ಲವ್ ಜಿಹಾದ್, ಮತಾಂತರದ್ದೇ ಮಾತು. ಅದರಲ್ಲಿಯೂ ಪ್ರತಿಷ್ಠಿತ ಟಾಟಾ ಕನ್ಸಲ್ಟೆನ್ಸಿ (TCS) ಲವ್ ಜಿಹಾದ್ ಪ್ರಕರಣದಿಂದ ಕಾರ್ಪೋರೇಟ್ ಜಗತ್ತಿಗೂ ಕಾಲಿಟ್ಟ ಜಿಹಾದಿಗಳ ಬಗ್ಗೆ ದೇಶಾದ್ಯಂತ ಹಿಂದೂಗಳಲ್ಲಿ ಆತಂಕ ಎದುರಾಗಿದೆ. ಹಿಂದೂ ಹೆಣ್ಣುಮಕ್ಕಳು ಅದ್ಹೇಗೆ ಮರುಳಾಗುತ್ತಾರೆ, ಅಲ್ಲಿ ಏನು ನಡೆಯುತ್ತದೆ, ಅಸಲಿಗೆ ಆಗೋದೇನು ಎನ್ನುವುದನ್ನು ಅರಿಯದೇ ಬೆಚ್ಚಿಬಿದ್ದಿದ್ದಾರೆ ಪೋಷಕರು. ಈಚೆಗೆ ಹುಬ್ಬಳ್ಳಿಯಲ್ಲಿ ನಡೆದ ಘಟನೆಗಳೂ ಎಲ್ಲರನ್ನು ನಡುಗಿಸುವಂತಿದೆ. ಹಾಗೆಂದು ಈ ಲವ್ ಜಿಹಾದ್ ಅಥವಾ ಮತಾಂತರ ಈಗಿನ ಮಾತಲ್ಲ, ಬದಲಿಗೆ ಸೋಷಿಯಲ್ ಮೀಡಿಯಾಗಳಿಂದ ಇವು ಬೆಳಕಿಗೆ ಬರುತ್ತಿವೆ ಅಷ್ಟೇ.