Bigg Boss Kannada Season 12: ಬಿಗ್ ಬಾಸ್ ಕನ್ನಡ ಸೀಸನ್ 12 ಶೋ ಗಿಲ್ಲಿ ನಟ ಅವರು ದೊಡ್ಮನೆ ಹಬ್ಬ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದಾರೆ. ಬಿಗ್ ಬಾಸ್ ಶೋನಿಂದ ಇಲ್ಲಿಯವರೆಗೆ ಏನೇನು ಆಯ್ತು ಎಂದು ಅವರು ಹೇಳಿದ್ದಾರೆ. ಈ ಬಗ್ಗೆ ಇನ್ನಷ್ಟು ಮಾಹಿತಿ ಇಲ್ಲಿದೆ.

ಬಿಗ್ ಬಾಸ್ ಕನ್ನಡ ಸೀಸನ್ 12 ಶೋ ಸ್ಪರ್ಧಿಗಳೆಲ್ಲರೂ ದೊಡ್ಮನೆ ಹಬ್ಬ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದಾರೆ. ಈಗಾಗಲೇ ವಾಹಿನಿಯು ಪ್ರೋಮೋಗಳನ್ನು ರಿಲೀಸ್ ಮಾಡಿದೆ.

ಬಿಗ್ ಬಾಸ್ ಕನ್ನಡ ಸೀಸನ್ 12 ಶೋ ಸ್ಪರ್ಧಿಗಳು ಅನೇಕ ವಿಚಾರಗಳ ಬಗ್ಗೆ ಮಾತನಾಡಿದ್ದಾರೆ. ಅಂದಹಾಗೆ ಈ ಶೋ ಆರಂಭಕ್ಕೂ ಮುನ್ನ ಗಿಲ್ಲಿ ನಟ ಅವರಿಗೆ ಮೇಕಪ್ ಮಾಡಲಾಗಿದೆ. ಆಗ ಅವರು ಕೆಲ ವಿಷಯಗಳನ್ನು ಹಂಚಿಕೊಂಡಿದ್ದಾರೆ.

“ಸ್ನೇಹಿತರ ಜೊತೆಗೆ ಹೊರಗಡೆ ಹೋಗಬೇಕು ಎಂದುಕೊಂಡಿದ್ದೆ, ಆಗಿಲ್ಲ” ಎಂದು ಗಿಲ್ಲಿ ನಟ ಅವರು ಬೇಸರ ಹೊರಹಾಕಿದ್ದಾರೆ. “ಬಿಗ್ ಬಾಸ್ ಶೋ ಗೆದ್ದಿದ್ದೇನೆ, ಅದೇ ದೊಡ್ಡ ಪ್ರಶಸ್ತಿ” ಎಂದು ಗಿಲ್ಲಿ ನಟ ಹೇಳಿದ್ದಾರೆ.

“ಬಿಗ್ ಬಾಸ್ ಅವಾರ್ಡ್ ಮನೆಯಲ್ಲಿದೆ, ಎಲ್ಲರ ಮನಸ್ಸಿನಲ್ಲಿದೆ, ಇದಕ್ಕಿಂತ ಇನ್ನೇನು ಬೇಕು?” ಎಂದು ಗಿಲ್ಲಿ ನಟ ಅವರು ಹೇಳಿದ್ದಾರೆ.

“ಟ್ಯಾಟೂ ಹಾಕಿಸಿಕೊಂಡವರನ್ನು ಮೀಟ್ ಮಾಡಬೇಕಿತ್ತು. ಆದರೆ ಆಗಿಲ್ಲ, ಅಂದುಕೊಂಡಿದ್ದು ಆಗಿಲ್ಲ ಎಂಬ ಬೇಸರ ಇದೆ” ಎಂದು ಗಿಲ್ಲಿ ನಟ ಹೇಳಿದ್ದಾರೆ.

Source link
ಬಿಗ್ ಬಾಸ್ ಮನೆಯಿಂದ ಬಂದಿದ್ದೇ ಬಂದಿದ್ದು, ಅಂದ್ಕೊಂಡಿದ್ದು ಒಂದೂ ಆಗಿಲ್ಲ: Gilli Nata ಬೇಸರ