ಇನ್ನೂ ಮದುವೆ ಆಗದಿರಲು ಆ ಸಮಸ್ಯೆ ಕಾರಣ: ನಟಿ ಚಿತ್ರ ರೇಖಾ

ಇನ್ನೂ ಮದುವೆ ಆಗದಿರಲು ಆ ಸಮಸ್ಯೆ ಕಾರಣ: ನಟಿ ಚಿತ್ರ ರೇಖಾ


ಇಸವಿ 2000 ರಲ್ಲಿ ಕನ್ನಡ ಚಿತ್ರರಂಗಕ್ಕೆ (ಸ್ಯಾಂಡಲ್ವುಡ್) ಇಬ್ಬರು ರೇಖಾರ ಪರಿಚಯವಾಯ್ತು. ಒಬ್ಬರು ‘ಸ್ಪರ್ಶ’ ರೇಖಾ ಎನಿಸಿಕೊಂಡರೆ ಮತ್ತೊಬ್ಬರು ‘ಚಿತ್ರ’ ರೇಖಾ. ‘ಸ್ಪರ್ಶ’ ರೇಖಾ, ಸುದೀಪ್ ಮತ್ತು ದರ್ಶನ್ ಇಬ್ಬರೂ ನಾಯಕನಾಗಿ ನಟಿಸಿದ ಸಿನಿಮಾದಲ್ಲಿ ನಾಯಕಿ ಆಗಿ ನಟಿಸಿದ್ದರು. 2004 ರ ಬಳಿಕ ಚಿತ್ರರಂಗದಿಂದ ದೂವಾಯಿತು ಸ್ಪರ್ಷ ರೇಖಾ, 2015 ರಿಂದ ಮತ್ತೆ ಸಕ್ರಿಯವಾಗಿದೆ. ಬಿಗ್ಬಾಸ್ ನಲ್ಲಿಯೂ ಇವರು ಭಾಗವಹಿಸಿದ್ದರು. ಆದರೆ ಚಿತ್ರ ರೇಖಾ ಅವರದ್ದು ಬೇರೆ ಕತೆ. ಕನ್ನಡದೆ ತೆಲುಗು, ತಮಿಳು ಚಿತ್ರರಂಗದಲ್ಲೂ ಮಿಂಚಿದ ಕನ್ನಡತಿ ‘ಚಿತ್ರ’ ರೇಖಾ. 2014ರ ವರೆಗೆ ಸಕ್ರಿಯವಾಗಿದೆ. ಆ ಬಳಿಕ ಹಠಾತ್ತನೆ ಚಿತ್ರರಂಗದಿಂದ ದೂರಾದರು. ರೇಖಾ ಮದುವೆ ಸಹ ಆಗಿಲ್ಲ, ಸಿಂಗಲ್ ಆಗಿಯೇ ಇದ್ದಾರೆ. ಇದೀಗ ಸಂದರ್ಶನದಲ್ಲಿ ಮಾತನಾಡಿರುವ ರೇಖಾ ತಮ್ಮ ಖಾಸಗಿ ಬದುಕಿನ ಬಗ್ಗೆ ಮಾಹಿತಿ ಹಂಚಿಕೊಂಡಿದ್ದಾರೆ.

ತೆರೆಯ ಮೇಲೆ ಹಾಡುತ್ತಾ, ಕುಣಿಯುತ್ತಾ ಖುಷಿಯಿಂದ ಕಾಣಿಸಿಕೊಳ್ಳುವ ನಟಿಯರ ಖಾಸಗಿ ಜೀವನದಲ್ಲಿ ಎಷ್ಟೆಲ್ಲ ನೋವುಗಳಿವೆ ಎಂಬುದಕ್ಕೆ ರೇಖಾ ಅವರ ಜೀವನ ಉದಾಹರಣೆ. ಬೆಂಗಳೂರಿನವರಾದ ರೇಖಾ ವೇದವ್ಯಾಸ, ಚಿತ್ರರಂಗದಲ್ಲಿ ಸುಮಾರು ಒಂದು ಕಾಲದ ಸ್ಟಾರ್ ನಟಿಯಾಗಿ ಮೆರೆದರು. ಭಾರಿ ಬೇಡಿಕೆಯ ನಟಿ ಎನಿಸಿಕೊಂಡರು. ಆದರೆ ಅವರ ಖಾಸಗಿ ಜೀವನದಲ್ಲಿ ಉಂಟಾದ ಸಮಸ್ಯೆ, ನೋವುಗಳು ಅವರನ್ನು ಹಿಂಡಿ ಹಿಪ್ಪೆ ಮಾಡಿದವು.

ಕನ್ನಡದ ‘ಹುಚ್ಚ’ ಚಿತ್ರದ ಮೂಲಕ ಕನ್ನಡಿಗರಿಗೆ ಪರಿಚಯವಾದ ರೇಖಾ, ಬಳಿಕ ‘ಚಿತ್ರ’ ಸಿನಿಮಾದಲ್ಲಿ ನಟಿಸಿ ಚಿತ್ರ ರೇಖಾ ಎನಿಸಿಕೊಂಡರು. ತೆಲುಗಿನ ‘ಆನಂದಂ’ ಸಿನಿಮಾ ಮೂಲಕ ತೆಲುಗು ಚಿತ್ರರಂಗಕ್ಕೆ ಎಂಟ್ರಿ ಕೊಟ್ಟ ನಟಿ ರೇಖಾ, ಅಲ್ಲಿಯೂ ಸಹ ಮೊದಲ ಸಿನಿಮಾದಲ್ಲಿ ಭಾರಿ ಯಶಸ್ಸು ಗಳಿಸಿದರು. ತಮಿಳು, ಕನ್ನಡ ಸೇರಿದಂತೆ ದಕ್ಷಿಣ ಭಾರತದಾದ್ಯಂತ ಸಾಲು ಸಾಲು ಸಿನಿಮಾಗಳಲ್ಲಿ ನಟಿಸಿದ್ದ ಈ ಸುಂದರಿ, 2012ರ ನಂತರ ಚಿತ್ರರಂಗದಿಂದ ಸಂಪೂರ್ಣವಾಗಿ ತೆಲುಗು ದೂರ ಉಳಿದರು. ಈ ಹಠಾತ್ ಕಣ್ಮರೆಯ ಹಿಂದೆ ದೊಡ್ಡದೊಂದು ನೋವಿನ ಕಥೆಯೇ ಇತ್ತು.

ಇದನ್ನೂ ಓದಿ:ಈ ವಾರವೂ ಒಟಿಟಿಗೆ ಬಂದಿವೆ ಹಿಟ್ ಸಿನಿಮಾಗಳು: ಪಟ್ಟಿ ಇಲ್ಲಿದೆ

ಇತ್ತೀಚಿನ ಸಂದರ್ಶನದಲ್ಲಿ ಭಾವುಕರಾಗಿ ಮಾತನಾಡಿರುವ ರೇಖಾ, ತಾನು ಸಿನಿಮಾದಿಂದ ದೂರ ಉಳಿಯಲು ಮುಖ್ಯ ಕಾರಣ ‘ಆರೋಗ್ಯದ ಸಮಸ್ಯೆ’ ಎಂದು. ಕಳೆದ ಕೆಲವು ವರ್ಷಗಳಿಂದ ಅವರು ದೈಹಿಕ ಹಾಗೂ ಮಾನಸಿಕ ಆರೋಗ್ಯದ ಏರುಪೇರಿನಿಂದ ಬಳಲುತ್ತಿದ್ದರಂತೆ. ಅವರು ದೈಹಿಕವಾಗಿ ತುಂಬಾ ಕುಗ್ಗಿ ಹೋಗಿದ್ದರು. ಇದೇ ಕಾರಣಕ್ಕೆ ಅವರು ಬಂದಂತಹ ಅನೇಕ ಸಿನಿಮಾ ಅವಕಾಶಗಳನ್ನು ಕೈಬಿಡಬೇಕಾಯಿತಂತೆ.

ರೇಖಾ ಅವರ ವೈಯಕ್ತಿಕ ಜೀವನದ ಬಗ್ಗೆ ಮಾತನಾಡುತ್ತಾ, “ಹಿಂದೆ ನನಗೆ ಮದುವೆಯ ಬಗ್ಗೆ ಅಷ್ಟೊಂದು ಆಸಕ್ತಿ ಇಲ್ಲ. ಆದರೆ ನಂತರ ಮನಸ್ಸು ಮದುವೆಯಾಗೋಣ ಎಂದು ನಿರ್ಧರಿಸಿದೆ. ಆದರೆ ನನ್ನ ಇಂದಿನ ಪರಿಸ್ಥಿತಿ ಮತ್ತು ಆರೋಗ್ಯದ ಸ್ಥಿತಿಯನ್ನು ನೋಡಿ ಯಾರೂ ನನ್ನನ್ನು ಮದುವೆಯಾಗಲು ಮುಂದೆ ಬರುತ್ತಿಲ್ಲ” ಎಂದು ಅತೀವ ನೋವಿನಿಂದ ಹೇಳಲಾಗಿದೆ.

ಜೊತೆಗೆ, “ಅವಶ್ಯಪಟ್ಟು ಮದುವೆಯಾಗಿ ವಿಚ್ಛೇದನದವರೆಗೆ ಹೋಗುವ ಸಂಬಂಧವಿದೆ, ಸ್ವಲ್ಪ ತಡವಾದರೂ ಪರವಾಗಿಲ್ಲ ಒಬ್ಬ ಸರಿಯಾದ ಸಂಗಾತಿ ಸಿಗಲಿ ಎಂಬುದು ನನ್ನ ಅಭಿಪ್ರಾಯ. ಇಂದು ಚಿತ್ರರಂಗ ಸಂಪೂರ್ಣ ಬದಲಾಗಿದೆ.

ತಾವು ಆರೋಗ್ಯ ಸಮಸ್ಯೆಯಿಂದ ಬಳಲುತ್ತಿರುವ ಬಗ್ಗೆ ಹೇಳಿಕೊಂಡಿರುವ ರೇಖಾ, ತಮಗೆ ಇದ್ದ ಸಮಸ್ಯೆ ಏನು ಎಂದು ಹೇಳಿಲ್ಲ. ಸದ್ಯ ರೇಖಾ ಅವರ ಹೇಳಿಕೆಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿವೆ, ಅಭಿಮಾನಿಗಳು ಅವರು ಶೀಘ್ರವಾಗಿ ಚೇತರಿಸಿಕೊಳ್ಳುತ್ತಾರೆ ಮತ್ತು ಅವರಿಗೆ ಒಳ್ಳೆಯದಾಗಲಿ ಎಂದು ಹಾರೈಸುತ್ತಿದ್ದಾರೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ



Source link

Leave a Reply

Your email address will not be published. Required fields are marked *