ಕನ್ನಡ ಚಿತ್ರರಂಗದಲ್ಲಿ ನಟ ರಾಕ್ಷಸ ಎಂದೇ ಖ್ಯಾತಿ ಪಡೆದ ನಟ ಡಾಲಿ ಧನಂಜಯ್ ಮತ್ತು ಧನ್ಯತಾ ವೈವಾಹಿಕ ಜೀವನಕ್ಕೆ ಕಾಲಿಟ್ಟು ಇಂದಿಗೆ ಒಂದು ವರ್ಷ ತುಂಬಿದ್ದು, ಈ ಹಿನ್ನೆಲೆಯಲ್ಲಿ ಪತಿ-ಪತ್ನಿ ಪರಸ್ಪರ ಮುದ್ದಾದ ಫೋಟೊಗಳ ಮೂಲಕ ವಿಶ್ ಮಾಡಿದ್ದಾರೆ. ಇಲ್ಲಿದೆ ನೋಡಿ ಜೋಡಿಯ Unseen Photos.

ಚಂದನವನದ ನಟ ರಾಕ್ಷಸ ಡಾಲಿ ಧನಂಜಯ್ ಇಂದು ಅಂದರೆ ಫೆಬ್ರವರಿ 16ರಂದು ತಮ್ಮ ಮೊದಲನೇ ವರ್ಷದ ವಿವಾಹ ವಾರ್ಷಿಕೋತ್ಸವವನ್ನು ಆಚರಿಸಿಕೊಳ್ಳುತ್ತಿದ್ದಾರೆ. ಈ ಹಿನ್ನೆಯಲ್ಲಿ ಜೋಡಿ ಸುಂದರವಾದ ತಮ್ಮ ಮಧುರ ಕ್ಷಣಗಳ ಫೋಟೊಗಳನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡು ಪರಸ್ಪರ ಶುಭಾಶಯ ಕೋರಿದ್ದಾರೆ.

ಡಾಲಿ ಕಳೆದ ವರ್ಷ ಫೆಬ್ರವರಿ 16ರಂದು ಮೈಸೂರಿನ ಅರಮನೆ ಮೈದಾನದಲ್ಲಿ ಅದ್ಧೂರಿಯಾಗಿ, ಸಾವಿರಾರು ಅಭಿಮಾನಿಗಳ ಸಮ್ಮುಖದಲ್ಲಿ ವೈದ್ಯೆಯಾಗಿರುವ ಧನ್ಯತಾ ಗೌರಾಕ್ಲರ್ ಜೊತೆ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದರು.

ಒಂದು ವರ್ಷ ಆಗಿದ್ದು ಗೊತ್ತೇ ಆಗ್ಲಿಲ್ಲ, ನಮ್ಮಿಬ್ಬರನ್ನ ಒಂದು ಮಾಡಿದ ಭೂ-ತಾಯಿಗೆ ಧನ್ಯವಾದಗಳು..ಹ್ಯಾಪಿ ವಾಲೆಂಟೈನ್, ಹ್ಯಾಪಿ ಆನಿವರ್ಸರಿ, ನಾಳೆಗೆ ಅಡ್ವಾನ್ಸ್ ಹ್ಯಾಪಿ ಬರ್ತ್ ಡೇ (Feb-17) ಎಂದು ಧನಂಜಯ್ ವಿಶ್ ಮಾಡಿದ್ದಾರೆ. ಇನ್ನು ಧನ್ಯತಾ ಸುಂದರ ಫೋಟೊಗಳ ಜೊತೆಗೆ ಹ್ಯಾಪಿ ಅನಿವರ್ಸರಿ ಟು ಅಸ್ ಎಂದಿದ್ದಾರೆ.

ಇತ್ತೀಚೆಗೆ ಕನ್ನಡದ ವಾಹಿನಿಯೊಂದರಲ್ಲಿ ಪ್ರಸಾರವಾದ ಪ್ರಶಸ್ತಿ ವಿತರಣಾ ಕಾರ್ಯಕ್ರಮದಲ್ಲಿ ಡಾಲಿ ಧನಂಜಯ್ ಅವರು ವೇದಿಕೆ ಮೇಲೆ ನಿಂತು ತಾವು ತಂದೆಯಾಗುತ್ತಿರುವುದಾಗಿ ತಿಳಿಸಿದ್ದರು. ಆ ಮೂಲಕ ತಮ್ಮ ಸಂಭ್ರಮವನ್ನು ಅಭಿಮಾನಿಗಳ ಜೊತೆಗೆ ಹಂಚಿಕೊಂಡಿದ್ದರು. ಇದೀಗ ಒಂದು ವರ್ಷದ ವಿವಾಹ ಜೀವನದ ಸಂಭ್ರಮವನ್ನು ಆಚರಿಸುತ್ತಿದ್ದಾರೆ.

ಧನ್ಯತಾ ತಮ್ಮ ಸೋಶಿಯಲ್ ಮೀಡಿಯಾದಲ್ಲಿ ಯಾರೂ ಕಂಡಿರದ ಒಂದಷ್ಟು ಸುಂದರ ಕ್ಷಣಗಳ ಫೋಟೊಗಳನ್ನು ಶೇರ್ ಮಾಡಿದ್ದಾರೆ. ಇಬ್ಬರ ಮಿರರ್ ಸೆಲ್ಫಿ, ಟ್ವಿನ್ನಿಂಗ್ ಡ್ರೆಸ್, ಪಾರ್ಟಿಗೆ ರೆಡಿಯಾಗಿರುವ ಫೋಟೊ, ಜೊತೆಯಾಗಿ ಜಿಮ್ ಮಾಡುತ್ತಿರುವ ಫೋಟೊ, ಧನ್ಯತಾ, ಧನಂಜಯ್ ಅವರ ಬಿಪಿ ಚೆಕ್ ಮಾಡುತ್ತಿರುವ ಫೋಟೊ, ಇಬ್ಬರು ಹಗ್ ಮಾಡುತ್ತಿರುವ ಸುಂದರ ಕ್ಷಣಗಳ ಫೋಟೊಗಳನ್ನು ಹಂಚಿಕೊಂಡಿದ್ದಾರೆ.

ಕಳೆದ ವರ್ಷ ಒಂದೇ ಒಂದು ಸಿನಿಮಾದಲ್ಲಿ ಗೆಸ್ಟ್ ಅಪಿಯರೆನ್ಸ್ ಕೊಟ್ಟಿದ್ದ ಡಾಲಿ ಧನಂಜಯ್, ಈ ವರ್ಷ ಆರು ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ. ತಮಿಳಿನಲ್ಲಿ ಪರಾಶಕ್ತಿ, ಉತ್ತರಾಕಾಂಡ, ಹಲಗಲಿ, ಜಿಂಗೋ, ಅಣ್ಣಾ ಫ್ರಮ್ ಮೆಕ್ಸಿಕೋ, 666 ಆಪರೇಶನ್ ಡ್ರೀಮ್ ಥಿಯೇಟರ್, ಇನ್ನು ಇಮ್ಮಡಿ ಪುಲಿಕೇಶಿ ಸಿನಿಮಾದಲ್ಲೂ ನಟಿಸುತ್ತಿದ್ದಾರೆ ಎನ್ನಲಾಗಿದೆ.

Source link
ಮೊದಲ ವಿವಾಹ ವಾರ್ಷಿಕೋತ್ಸವ ಸಂಭ್ರಮದಲ್ಲಿ ಡಾಲಿ ಧನಂಜಯ್- ಧನ್ಯತಾ… ಇಲ್ಲಿವೆ Unseen Photos