ಕೇಸ್ ದಾಖಲಾದ ಬಳಿಕ ಜರ್ರನೆ ಜ್ವರದಂತೆ ಮೇಲಕ್ಕೇರಿದ ‘ಬಿಗ್ ಬಾಸ್’ ವಿಷ್ಣುಪ್ರಿಯಾ ಅಕೌಂಟ್ ಬ್ಯಾಲೆನ್ಸ್! | Bigg Boss Fame Actress Vishnu Priya Bhimeneni Controversy Become Boon For Her Income

ಕೇಸ್ ದಾಖಲಾದ ಬಳಿಕ ಜರ್ರನೆ ಜ್ವರದಂತೆ ಮೇಲಕ್ಕೇರಿದ ‘ಬಿಗ್ ಬಾಸ್’ ವಿಷ್ಣುಪ್ರಿಯಾ ಅಕೌಂಟ್ ಬ್ಯಾಲೆನ್ಸ್! | Bigg Boss Fame Actress Vishnu Priya Bhimeneni Controversy Become Boon For Her Income



ಕೇಸ್ ದಾಖಲಾದ ಬಳಿಕ ಜರ್ರನೆ ಜ್ವರದಂತೆ ಮೇಲಕ್ಕೇರಿದ ‘ಬಿಗ್ ಬಾಸ್’ ವಿಷ್ಣುಪ್ರಿಯಾ ಅಕೌಂಟ್ ಬ್ಯಾಲೆನ್ಸ್! | Bigg Boss Fame Actress Vishnu Priya Bhimeneni Controversy Become Boon For Her Income

ಕೇವಲ ಕೆಲವೇ ದಿನಗಳಲ್ಲಿ ಸಬ್‌ಸ್ಕ್ರೈಬರ್‌ಗಳ ಸಂಖ್ಯೆ 5,600 ದಾಟಿದೆ! ಈಗ ಅವರ ಮಾಸಿಕ ಆದಾಯ ಬರೋಬ್ಬರಿ 21 ಲಕ್ಷ ರೂಪಾಯಿಗಳಿಗೂ ಅಧಿಕವಾಗಿದೆ. ಅಂದರೆ ಒಂದೇ ಒಂದು ವಿವಾದದಿಂದ ಅವರ ತಿಂಗಳ ಆದಾಯದಲ್ಲಿ 14 ಲಕ್ಷ ರೂಪಾಯಿ ಲಾಭವಾಗಿದೆ! ಇದನ್ನು ನೋಡಿ ನೆಟ್ಟಿಗರು ಏನಂತಿದಾರೆ ನೋಡಿ..

ವಿವಾದವೇ ಈಕೆಗೆ ವರದಾನ: ಪೊಲೀಸ್ ಕೇಸ್ ಆದ್ರೂ ವಿಷ್ಣುಪ್ರಿಯಾ ಅಕೌಂಟ್‌ಗೆ ಹರಿದು ಬಂತು ಲಕ್ಷ ಲಕ್ಷ ಹಣ!

ಸೋಷಿಯಲ್ ಮೀಡಿಯಾ ಅನ್ನೋದು ಒಂದು ವಿಚಿತ್ರ ಲೋಕ. ಇಲ್ಲಿ ಕೆಲವೊಮ್ಮೆ ಕೆಟ್ಟದ್ದೇ (Controversy) ಒಳ್ಳೆಯದಾಗಿ ಬದಲಾಗಿಬಿಡುತ್ತದೆ! ಇದಕ್ಕೆ ತಾಜಾ ಉದಾಹರಣೆ ಅಂದ್ರೆ, ತೆಲುಗಿನ ಖ್ಯಾತ ನಟಿ ಹಾಗೂ ಬಿಗ್‌ಬಾಸ್ ಬೆಡಗಿ ವಿಷ್ಣುಪ್ರಿಯಾ ಭೀಮಿನೇನಿ. ಸದ್ಯ ವಿಷ್ಣುಪ್ರಿಯಾ (Vishnu Priya Bhimeneni ) ಹೆಸರು ಗಾಂಧಿನಗರದಿಂದ ಹಿಡಿದು ಹೈದರಾಬಾದ್ ಫಿಲ್ಮ್ ನಗರ್‌ವರೆಗೂ ಸಖತ್ ಸೌಂಡ್ ಮಾಡುತ್ತಿದೆ. ಆದರೆ ಇದು ಸಿನಿಮಾ ಕಾರಣಕ್ಕಲ್ಲ, ಬದಲಾಗಿ ಒಂದು ಪೊಲೀಸ್ ಕೇಸ್‌ನಿಂದಾಗಿ!

ಆದರೆ ಅಸಲಿ ಟ್ವಿಸ್ಟ್ ಇಲ್ಲಿದೆ ನೋಡಿ.. ವಿಷ್ಣುಪ್ರಿಯಾ ಮೇಲೆ ಎಫ್‌ಐಆರ್ ದಾಖಲಾದ ಮೇಲೆ ಅವರ ಹಣೆಬರಹವೇ ಬದಲಾಗಿ ಹೋಗಿದೆ. ಪೊಲೀಸ್ ಸ್ಟೇಷನ್ ಮೆಟ್ಟಿಲೇರಿದ ಮೇಲೆ ವಿಷ್ಣುಪ್ರಿಯಾಗೆ ಸಂಕಷ್ಟ ಶುರುವಾಗುತ್ತೆ ಅಂದುಕೊಂಡರೆ, ಅವರ ಬ್ಯಾಂಕ್ ಬ್ಯಾಲೆನ್ಸ್ ಮಾತ್ರ ರಾಕೆಟ್ ವೇಗದಲ್ಲಿ ಏರುತ್ತಿದೆ!

ಏನಿದು ‘ಎಕ್ಸ್‌ಕ್ಲೂಸಿವ್’ ವಿವಾದ?

ವಿಷ್ಣುಪ್ರಿಯಾ ತಮ್ಮ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಒಂದು ಹೊಸ ಪ್ಲಾನ್ ಮಾಡಿದ್ದರು. ತಮ್ಮ ಫೋಟೋ ಮತ್ತು ವಿಡಿಯೋಗಳನ್ನು ನೋಡಲು ಅಭಿಮಾನಿಗಳು ತಿಂಗಳಿಗೆ 390 ರೂಪಾಯಿ ಚಂದಾದಾರಿಕೆ (Subscription) ಕಟ್ಟಬೇಕು ಎಂಬ ನಿಯಮ ಹಾಕಿದ್ದರು. ಆದರೆ ಈ ‘ಎಕ್ಸ್‌ಕ್ಲೂಸಿವ್ ಕಂಟೆಂಟ್’ ಹೆಸರಿನಲ್ಲಿ ವಿಷ್ಣುಪ್ರಿಯಾ ಅಶ್ಲೀಲತೆಯನ್ನು ಪ್ರೋತ್ಸಾಹಿಸುತ್ತಿದ್ದಾರೆ, ಅರೆನಗ್ನ ವಿಡಿಯೋಗಳನ್ನು ಹಾಕಿ ಯುವಜನತೆಯನ್ನು ದಾರಿ ತಪ್ಪಿಸುತ್ತಿದ್ದಾರೆ ಎಂದು ಎಐಎಸ್ಎಫ್ (AISF) ಸಂಘಟನೆ ವಿಜಯವಾಡದ ಸೈಬರ್ ಕ್ರೈಂ ಪೊಲೀಸರಿಗೆ ದೂರು ನೀಡಿತು.

ಸಬ್‌ಸ್ಕ್ರೈಬರ್‌ಗಳ ಸುನಾಮಿ!

ದೂರು ದಾಖಲಾಗುವ ಮೊದಲು ವಿಷ್ಣುಪ್ರಿಯಾ ಅವರ ಈ ಪ್ರೀಮಿಯಂ ಅಕೌಂಟ್‌ನಲ್ಲಿ ಕೇವಲ 1,892 ಮಂದಿ ಸಬ್‌ಸ್ಕ್ರೈಬರ್‌ಗಳಿದ್ದರು. ಅಂದರೆ ಅವರಿಂದ ತಿಂಗಳಿಗೆ ಸುಮಾರು 7.37 ಲಕ್ಷ ರೂಪಾಯಿ ಆದಾಯ ಬರುತ್ತಿತ್ತು. ಆದರೆ ಯಾವಾಗ “ವಿಷ್ಣುಪ್ರಿಯಾ ಮೇಲೆ ಕೇಸ್ ದಾಖಲಾಗಿದೆ” ಎಂಬ ಸುದ್ದಿ ಕಾಡ್ಗಿಚ್ಚಿನಂತೆ ಹರಡಿತೋ, ನೆಟ್ಟಿಗರಲ್ಲಿ ಕುತೂಹಲ ಉಕ್ಕಿ ಬಂತು. “ಅಂತದ್ದೇನಿದೆ ಅವರ ಅಕೌಂಟ್‌ನಲ್ಲಿ?” ಎಂದು ನೋಡಲು ಮುಗಿಬಿದ್ದ ಜನ ಸಬ್‌ಸ್ಕ್ರಿಪ್ಷನ್ ತಗೆದುಕೊಳ್ಳಲು ಶುರು ಮಾಡಿದರು.

ಕೇವಲ ಕೆಲವೇ ದಿನಗಳಲ್ಲಿ ಸಬ್‌ಸ್ಕ್ರೈಬರ್‌ಗಳ ಸಂಖ್ಯೆ 5,600 ದಾಟಿದೆ! ಈಗ ಅವರ ಮಾಸಿಕ ಆದಾಯ ಬರೋಬ್ಬರಿ 21 ಲಕ್ಷ ರೂಪಾಯಿಗಳಿಗೂ ಅಧಿಕವಾಗಿದೆ. ಅಂದರೆ ಒಂದೇ ಒಂದು ವಿವಾದದಿಂದ ಅವರ ತಿಂಗಳ ಆದಾಯದಲ್ಲಿ 14 ಲಕ್ಷ ರೂಪಾಯಿ ಲಾಭವಾಗಿದೆ! ಇದನ್ನು ನೋಡಿ ನೆಟ್ಟಿಗರು “ನೆಗೆಟಿವ್ ಪಬ್ಲಿಸಿಟಿ ಅಂದ್ರೆ ಇದೇ ಅಲ್ವಾ?” ಎಂದು ಮೂಗಿನ ಮೇಲೆ ಬೆರಳಿಡುತ್ತಿದ್ದಾರೆ.

ದೂರುದಾರರ ವಾದವೇನು?

“ಸೆಲೆಬ್ರಿಟಿಗಳು ಸಮಾಜಕ್ಕೆ ಮಾದರಿಯಾಗಿರಬೇಕು. ಹಣಕ್ಕಾಗಿ ಇಂತಹ ಅಶ್ಲೀಲ ಕೃತ್ಯಗಳಿಗೆ ಕೈಹಾಕಬಾರದು” ಎಂದು ಎಐಎಸ್ಎಫ್ ಮುಖಂಡ ಎಂ. ಸಾಯಿ ಕುಮಾರ್ ಕಿಡಿ ಕಾರಿದ್ದಾರೆ. ಆದರೆ ನೈತಿಕತೆಯ ಮಾತು ಒಂದು ಕಡೆಯಾದರೆ, ವಿಷ್ಣುಪ್ರಿಯಾಗೆ ಮಾತ್ರ ಉಚಿತ ಪ್ರಚಾರ ಸಿಕ್ಕಂತಾಗಿದೆ. ಈ ವಿವಾದದ ಬಗ್ಗೆ ವಿಷ್ಣುಪ್ರಿಯಾ ಇದುವರೆಗೂ ಬಾಯಿ ಬಿಟ್ಟಿಲ್ಲ, ತಮ್ಮ ಪಾಡಿಗೆ ತಾವು ಗ್ಲಾಮರ್ ಲೋಕದಲ್ಲಿ ಬ್ಯುಸಿಯಾಗಿದ್ದಾರೆ.

ಯಾರಿದು ವಿಷ್ಣುಪ್ರಿಯಾ?

ತೆಲುಗು ಕಿರುತೆರೆಯಲ್ಲಿ ನಿರೂಪಕಿಯಾಗಿ ಮಿಂಚಿದ್ದ ಈ 36 ವರ್ಷದ ನಟಿ, ‘ವಾಂಟೆಡ್ ಪಾಂಡುಗಾಡ್’, ‘ಚೆಕ್ ಮೇಟ್’ ನಂತಹ ಸಿನಿಮಾಗಳಲ್ಲಿ ನಟಿಸಿದ್ದಾರೆ. ಬಿಗ್ ಬಾಸ್ ತೆಲುಗು ಸೀಸನ್ 8 ರಲ್ಲಿ ಸ್ಪರ್ಧಿಯಾಗಿ ಹೋಗಿ ಭರ್ಜರಿ 98 ದಿನಗಳ ಕಾಲ ಕಿಚ್ಚು ಹಚ್ಚಿದ್ದ ಇವರು, ಈಗ ಇನ್‌ಸ್ಟಾಗ್ರಾಮ್ ಮೂಲಕ ಹೊಸ ಸಂಚಲನ ಸೃಷ್ಟಿಸಿದ್ದಾರೆ.

ಒಟ್ಟಿನಲ್ಲಿ, ಕಾನೂನು ಸಮರ ಒಂದು ಕಡೆಯಾದರೆ, ವಿಷ್ಣುಪ್ರಿಯಾ ಅವರ ಆರ್ಥಿಕ ಲಾಭ ಮಾತ್ರ ಎಲ್ಲರ ಹುಬ್ಬೇರಿಸುವಂತೆ ಮಾಡಿದೆ. ಸೋಷಿಯಲ್ ಮೀಡಿಯಾದಲ್ಲಿ ವಿವಾದಗಳೇ ಬಂಡವಾಳವಾಗುತ್ತಿರುವ ಕಾಲದಲ್ಲಿ ವಿಷ್ಣುಪ್ರಿಯಾ ಸದ್ಯಕ್ಕೆ ‘ಟ್ರೆಂಡಿಂಗ್ ಕ್ವೀನ್’!



Source link

Leave a Reply

Your email address will not be published. Required fields are marked *