ವಿಶ್ವದ ದೊಡ್ಡ ಆರ್ಥಿಕತೆ: 5ನೇ ಸ್ಥಾನದಿಂದ 6ನೇ ಸ್ಥಾನಕ್ಕೆ ಕುಸಿದ ಭಾರತ; ಕಾರಣ ಏನು ಗೊತ್ತಾ?

ವಿಶ್ವದ ದೊಡ್ಡ ಆರ್ಥಿಕತೆ: 5ನೇ ಸ್ಥಾನದಿಂದ 6ನೇ ಸ್ಥಾನಕ್ಕೆ ಕುಸಿದ ಭಾರತ; ಕಾರಣ ಏನು ಗೊತ್ತಾ?


ಜನವರಿ, ಏಪ್ರಿಲ್ 15: ಭಾರತ ಅತಿವೇಗವಾಗಿ ಬೆಳೆಯುತ್ತಿರುವ ಆರ್ಥಿಕತೆಯನ್ನು (ಭಾರತೀಯ ಆರ್ಥಿಕತೆ) ಹೊಂದಿರುವ ದೇಶ. ವಿಶ್ವದ ಅತಿದೊಡ್ಡ ಆರ್ಥಿಕತೆಯ ದೇಶಗಳ ಪಟ್ಟಿಯಲ್ಲಿ ಬ್ರಿಟನ್ ಮತ್ತು ಜಪಾನ್ ಅನ್ನು ಹಿಂದಿಕ್ಕಿ ನಾಲ್ಕನೇ ಸ್ಥಾನಕ್ಕೆ ದೌಡಾಯಿಸಿದೆ ಎಂದು ಹೇಳಲಾಗಿದೆ. ಆದರೆ, ಐಎಂಎಫ್ ಬಿಡುಗಡೆ ಮಾಡಿದ ದತ್ತಾಂಶದ ಪ್ರಕಾರ ಭಾರತ ಅತಿದೊಡ್ಡ ಆರ್ಥಿಕತೆಯ ಸಾಲಿನಲ್ಲಿ ಆರನೇ ಸ್ಥಾನಕ್ಕೆ ಕುಸಿದಿದೆ. ಅಂತರರಾಷ್ಟ್ರೀಯ ಹಣಕಾಸು ನಿಧಿ ಸಂಸ್ಥೆ ಪ್ರಕಾರ 2025 ರಲ್ಲಿ ಭಾರತದ ಆರ್ಥಿಕತೆ 3.92 ಟ್ರಿಲಿಯನ್ ಡಾಲರ್ ಗಾತ್ರದ್ದಾಗಿರುತ್ತದೆ. ಆ ವರ್ಷ ಯುಕೆ ಅಥವಾ ಬ್ರಿಟನ್ನದ್ದು 4 ಟ್ರಿಲಿಯನ್ ಡಾಲರ್ ಜಿಡಿಪಿ ಇದೆ. ಜಪಾನ್ 4.44 ಟ್ರಿಲಿಯನ್ ಡಾಲರ್ ಗಾತ್ರದ ಜಿಡಿಪಿ ಹೊಂದಿದೆ.

ಹಿಂದಿನ ವರ್ಷ (2024) ಭಾರತದ ಜಿಡಿಪಿಯು ಬ್ರಿಟನ್ನದಕ್ಕಿಂತ ಹೆಚ್ಚಿತ್ತು. ಅತಿದೊಡ್ಡ ಆರ್ಥಿಕತೆಯ ಪಟ್ಟಿಯಲ್ಲಿ ಭಾರತ 5ನೇ ಸ್ಥಾನದಲ್ಲಿದೆ. ಆದರೆ, 2025ರಲ್ಲಿ ಭಾರತ ಒಂದು ಸ್ಥಾನ ಕುಸಿದಿದ್ದು ಹೇಗೆ? ಈ ಒಂದು ಬೆಳವಣಿಗೆ ಭಾರತದ ಬೆಳವಣಿಗೆಯ ವೇಗವೇನೂ ಕಡಿಮೆಯಾಗಲಿಲ್ಲ. ಬ್ರಿಟನ್ನ ವೇಗವೇನೂ ಭಾರತದ ಸಮಕ್ಕೂ ಇರಲಿಲ್ಲ. ಆದರೂ ಕೂಡ ಭಾರತ ಒಂದು ಸ್ಥಾನ ಕಡಿಮೆಯಾಗಿದೆ. ಅದಕ್ಕೆ ಸಕಾರಣಗಳೂ ಇವೆ.

ಇದನ್ನೂ ಓದಿ: ಕಳೆದ ವರ್ಷ ಭಾರತದಿಂದ 860 ಬಿಲಿಯನ್ ಡಾಲರ್ ರಫ್ತು; ಇದು ಹೊಸ ದಾಖಲೆ

2025 ರ ನಂತರ ಭಾರತ ರುಪಾಯಿ ಲೆಕ್ಕದಲ್ಲಿ ಶೇ. 9ರಷ್ಟು ನಾಮಿನಲ್ ಗ್ರೋತ್ ದಾಖಲಿಸಿದೆ. ಆದರೆ, ಜಿಡಿಪಿ ಲೆಕ್ಕಾಚಾರಕ್ಕೆ ಹೊಸ ಸರಣಿಯನ್ನು ಆಧಾರವಾಗಿರಿಸಲಾಗಿದೆ. ಇದರಿಂದ ಜಿಡಿಜಿ ಲೆಕ್ಕಾಚಾರದಲ್ಲಿ ಬದಲಾವಣೆಗಳಾಗಿ, ಜಿಡಿಪಿ ಕಡಿಮೆಯಾಗಿದೆ. ಇದು ಒಂದು ಕಾರಣ. ಆದಾಗ್ಯೂ, ಡಾಲರ್ ಎದುರು ರುಪಾಯಿ ಮೌಲ್ಯವು ಕಡಿಮೆಗೊಂಡಿದ್ದೂ ಜಿಡಿಪಿಗೆ ಹಿನ್ನಡೆ ತಂದಿದೆ. 2024ರಲ್ಲಿ ಒಂದು ಡಾಲರ್‌ಗೆ 84.6 ರೂಪಾಯಿ ಇತ್ತು. 2025ರಲ್ಲಿ ಅದು 88.5ಕ್ಕೆ ಇಳಿಯಿತು. ಜಿಡಿಪಿಯು ಡಾಲರ್ ಲೆಕ್ಕದಲ್ಲಿ ಒಟ್ಟಾರೆ ಜಿಡಿಪಿ ಗಾತ್ರ ಕುಸಿದಿದೆ.

2026ರಲ್ಲಿ ಭಾರತದ ಸ್ಥಾನ ಏರುತ್ತಾ?

ಐಎಂಎಫ್ ಅಂದಾಜು ಪ್ರಕಾರ 2026ರಲ್ಲೂ ಭಾರತದ ಸ್ಥಾನದಲ್ಲಿ ಬದಲಾವಣೆ ಆಗುವುದಿಲ್ಲ. ಅತಿದೊಡ್ಡ ಆರ್ಥಿಕತೆಯ ದೇಶಗಳ ಸಾಲಿನಲ್ಲಿ ಭಾರತ 6ನೇ ಸ್ಥಾನದಲ್ಲೇ ಮುಂದುವರಿಯಬಹುದು ಎಂದು ನಿರೀಕ್ಷಿಸಲಾಗಿದೆ. ಆದರೆ 2027ರಲ್ಲಿ ಭಾರತ ಐದನೇ ಸ್ಥಾನಕ್ಕೆ ಏರಬಹುದು. 2028ಕ್ಕೆ ಜಪಾನ್ ಅನ್ನು ಹಿಂದಿಕ್ಕಿ 4ನೇ ಸ್ಥಾನಕ್ಕೆ ಏರಬಹುದು.

ಇದನ್ನೂ ಓದಿ: ಜಾಗತಿಕ ಬಿಕ್ಕಟ್ಟುಗಳ ನಡುವೆಯೂ ಭಾರತದ ಉತ್ತಮ ಆರ್ಥಿಕ ಬೆಳವಣಿಗೆ ಸಾಧ್ಯ: ಐಎಂಎಫ್ ಅಂದಾಜು

2027ರಲ್ಲಿ ಬ್ರಿಟನ್ ಜಿಡಿಪಿ 4.47 ಟ್ರಿಲಿಯನ್ ಡಾಲರ್ ಇರಲಿದೆ, ಭಾರತದ ಜಿಡಿಪಿ 4.58 ಟ್ರಿಲಿಯನ್ ಡಾಲರ್ ಗೆ ಏರಬಹುದು. 2028ರಲ್ಲಿ ಜಪಾನ್ ಜಿಡಿಪಿ 4.75 ಟ್ರಿಲಿಯನ್ ಡಾಲರ್ ಇದ್ದರೆ, ಭಾರತದ ಜಿಡಿಪಿ 5 ಟ್ರಿಲಿಯನ್ ಡಾಲರ್ ಗಡಿ ದಾಟಬಹುದು.

ಅಮೆರಿಕ, ಚೀನಾ ಮತ್ತು ಜರ್ಮನಿ ದೇಶಗಳು ಟಾಪ್-3ಯಲ್ಲಿ ಮುಂದುವರಿಯಲಿವೆ. 2030ಕ್ಕೆ ಭಾರತದ ಜಿಡಿಪಿ 6 ಟ್ರಿಲಿಯನ್ ಡಾಲರ್ ಗಡಿದಾಟಲಿದೆ, ಜರ್ಮನಿಯ ಆರ್ಥಿಕತೆಯ ಗಾತ್ರಕ್ಕೆ ಸಮೀಪಿಸಬಹುದು. 2030 ರ ನಂತರ ಭಾರತ ಜರ್ಮನಿಯನ್ನು ಮೀರಿಸಿ ಬೆಳೆಯುವ ನಿರೀಕ್ಷೆ ಇದೆ.

ಹೆಚ್ಚಿನ ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ



Source link

Leave a Reply

Your email address will not be published. Required fields are marked *