ಆಸ್ತಿಗಾಗಿ ತಂದೆಯನ್ನೇ ಹತ್ಯೆಗೈದ ಇಬ್ಬರು ಗಂಡು ಮಕ್ಕಳು: ದಾರುಣ ಘಟನೆಗೆ ಸಾಕ್ಷಿಯಾದ ಬೆಂಗಳೂರಿನ ದೂಪನಹಳ್ಳಿ

ಆಸ್ತಿಗಾಗಿ ತಂದೆಯನ್ನೇ ಹತ್ಯೆಗೈದ ಇಬ್ಬರು ಗಂಡು ಮಕ್ಕಳು: ದಾರುಣ ಘಟನೆಗೆ ಸಾಕ್ಷಿಯಾದ ಬೆಂಗಳೂರಿನ ದೂಪನಹಳ್ಳಿ


ಬೆಂಗಳೂರು, ಫೆಬ್ರವರಿ 17: ಇಂದಿರಾನಗರ ಪೊಲೀಸ್ ಠಾಣಾ ವ್ಯಾಪ್ತಿಯ ದೂಪನಹಳ್ಳಿಯಲ್ಲಿ ಆಸ್ತಿ ವಿವಾದವೊಂದು ವೃದ್ಧರೊಬ್ಬರ ಸಾವಿಗೆ. ಬಿಎಂಟಿಸಿಯ ನಿವೃತ್ತ ಕಂಡಕ್ಟರ್ 70 ವರ್ಷದ ಮುನಿಕೃಷ್ಣಪ್ಪ ಅವರ ಇಬ್ಬರು ಮಕ್ಕಳ ಆಸ್ತಿ ಆಸೆಗಾಗಿ ಹತ್ಯೆ ಮಾಡಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ಕಳೆದ ಶನಿವಾರ ರಾತ್ರಿ ದೂಪನಹಳ್ಳಿಯ ಮುತ್ತಿಯಾಲಮ್ಮ ದೇವಾಲಯದ ಬಳಿ ತಂದೆ ಮುನಿಕೃಷ್ಣಪ್ಪ ಮತ್ತು ಅವರ ಪುತ್ರರಾದ ಮೋಹನ್ ಕುಮಾರ್ ಹಾಗೂ ಗಜೇಂದ್ರ ನಡುವೆ ಆಸ್ತಿ ವಿಚಾರಕ್ಕೆ ಗಲಾಟೆ ನಡೆದಿದೆ. ಈ ವೇಳೆ ಮಗ ಮೋಹನ್ ಕುಮಾರ್ ಸ್ಟಿಕ್ ಮತ್ತು ರಾಡ್ ನಿಂದ ತಂದೆಯ ಮೇಲೆ ಮಾರಣಾಂತಿಕವಾಗಿ ಹಲ್ಲೆ ನಡೆಸಿದ್ದ. ತೀವ್ರವಾಗಿ ರಕ್ತಸ್ರಾವಗೊಂಡು ಕುಸಿದುಬಿದ್ದ ಮುನಿಕೃಷ್ಣಪ್ಪ ಅವರನ್ನು ಸ್ಥಳೀಯರು ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದರು.

ಎರಡು ದಿನಗಳ ಕಾಲ ಆಸ್ಪತ್ರೆಯಲ್ಲಿ ಜೀವನ್ಮರಣ ಹೋರಾಟ ನಡೆಸಿದ ಮುನಿಕೃಷ್ಣಪ್ಪ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾರೆ. ಇದು ಮುನಿಕೃಷ್ಣಪ್ಪ ಅವರ ಸ್ವಯಾರ್ಜಿತ ಆಸ್ತಿ, ಮಕ್ಕಳಿಗೆ ಪಾಲು ನೀಡದ ಕಾರಣ ಹಲವು ಬಾರಿ ಗಲಾಟೆಗಳು ನಡೆಯುತ್ತಿದ್ದವು. ಘಟನೆ ಸಂಬಂಧ ಹಲ್ಲೆ ನಡೆಸಿದ ಮೋಹನ್ ಕುಮಾರ್ ಅವರನ್ನು ಇಂದಿರಾನಗರ ಪೊಲೀಸರು ಬಂಧಿಸಿದ್ದು, ತನಿಖೆ ಮುಂದುವರಿಸಿದ್ದಾರೆ.

ಕರ್ನಾಟಕದ ಹೆಚ್ಚಿನ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ



Source link

Leave a Reply

Your email address will not be published. Required fields are marked *