Headlines

ಭಾರತದ ಅಳಿಯ ಜೆಡಿ ವ್ಯಾನ್ಸ್ ಮುಟ್ಟಿದ್ದೆಲ್ಲಾ ವ್ಯಾನಿಷ್! ಅಮೆರಿಕ ಉಪಾಧ್ಯಕ್ಷನ ಮಟಾಷ್‌ ಲೆಗ್‌ ಮೀಮ್ಸ್ ವೈರಲ್!

ಭಾರತದ ಅಳಿಯ ಜೆಡಿ ವ್ಯಾನ್ಸ್ ಮುಟ್ಟಿದ್ದೆಲ್ಲಾ ವ್ಯಾನಿಷ್! ಅಮೆರಿಕ ಉಪಾಧ್ಯಕ್ಷನ ಮಟಾಷ್‌ ಲೆಗ್‌ ಮೀಮ್ಸ್ ವೈರಲ್!

ಭಾರತದ ಅಳಿಯ ಜೆಡಿ ವ್ಯಾನ್ಸ್ ಮುಟ್ಟಿದ್ದೆಲ್ಲಾ ವ್ಯಾನಿಷ್! ಅಮೆರಿಕ ಉಪಾಧ್ಯಕ್ಷನ ಮಟಾಷ್‌ ಲೆಗ್‌ ಮೀಮ್ಸ್ ವೈರಲ್!

ಪಾಕಿಸ್ತಾನದಲ್ಲಿ ನಡೆದ ಅಮೆರಿಕ-ಇರಾನ್‌ ಮಾತುಕತೆ ಮುರಿದುಬಿದ್ದ ಬೆನ್ನಲ್ಲೇ, ಉಪಾಧ್ಯಕ್ಷ ಜೆಡಿ ವ್ಯಾನ್ಸ್‌ ಕಾಲಿಟ್ಟ ನೆಲದಲ್ಲಿ ಕೆಟ್ಟದ್ದು ನಡೆಯುತ್ತದೆ, ಕೈ ಹಾಕಿದ ಕೆಲಸವೆಲ್ಲಾ ಕೆಟ್ಟುಹೋಗುತ್ತದೆ ಎಂಬ ಮೀಮ್‌ಗಳು ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡತೊಡಗಿವೆ. ಈ ವಾದಕ್ಕೆ ಕಾರಣ ಇಲ್ಲದಿಲ್ಲ.

ಏ.15ರಂದು ಓಹಿಯೋ ಫುಟ್ಬಾಲ್ ತಂಡ ವೈಟ್‌ಹೌಸ್‌ಗೆ ಭೇಟಿ ನೀಡಿದ್ದ ವೇಳೆ ಫೋಟೋಗೆ ಪೋಸ್‌ ಕೊಡಲು ಹೋದ ವ್ಯಾನ್ಸ್‌ ಕೈಯ್ಯಿಂದ ಟ್ರೋಫಿ ಜಾರಿ ಇಬ್ಭಾಗವಾಗಿತ್ತು.

2025ರ ಏ.20ರಂದು ವ್ಯಾನ್ಸ್‌ ಅವರು ಪೋಪ್‌ ಫ್ರಾನ್ಸಿಸ್‌ ಅವರನ್ನು ಭೇಟಿಯಾಗಿದ್ದರು. ಅದರ ಮರುದಿನವೇ ಪೋಪ್‌ ಅಸುನೀಗಿದ್ದರು.

ಏ.21ರಂದು ವ್ಯಾನ್ಸ್‌ ಕುಟುಂಬ ಸಮೇತರಾಗಿ ಭಾರತಕ್ಕೆ ಬಂದಿದ್ದರು. ಏ.22ರಂದು ಕಾಶ್ಮೀರದ ಪಹಲ್ಗಾಂನಲ್ಲಿ ಭೀಕರ ಉಗ್ರದಾಳಿ ನಡೆದಿತ್ತು.

ಮಧ್ಯಪ್ರಾಚ್ಯ ಯುದ್ಧ ನಿಲ್ಲಿಸುವ ಸಲುವಾಗಿ ಪಾಕ್‌ ಮಧ್ಯಸ್ಥಿಕೆಯಲ್ಲಿ ಇರಾನ್‌ ಜತೆ ನಡೆದ ಮಾತುಕತೆಗೆ ಅಮೆರಿಕದ ಪರವಾಗಿ ವ್ಯಾನ್ಸ್‌ ಹೋಗಿದ್ದರು. ಯಶಸ್ಸು ಕಾಣದೆ ಮರಳಿದರು.

ವ್ಯಾನ್ಸ್‌ರನ್ನು ತಮ್ಮ ಪರ ಪ್ರಚಾರಕ್ಕೆ ಕರೆದಿದ್ದ ಹಂಗೆರಿ ಪ್ರಧಾನಿ ವಿಕ್ಟರ್ ಓರ್ಬನ್ ಇದೀಗ ಹೀನಾಯ ಸೋಲು ಕಂಡಿದ್ದಾರೆ. ಕಳೆದ ವರ್ಷ ಫೆ.14ರಂದು ವ್ಯಾನ್ಸ್‌, ಜರ್ಮನಿಯ ಎಎಫ್‌ಡಿ ಪಕ್ಷದ ಪರ ಪ್ರಚಾರ ನಡೆಸಿದ್ದರು. ಆ ಪಕ್ಷ ಚುನಾವಣೆಯಲ್ಲಿ ಸೋತಿತ್ತು.

Source link

Leave a Reply

Your email address will not be published. Required fields are marked *