ಬ್ಯಾಕ್‌ಲೆಸ್ ಡ್ರೆಸ್‌ನಲ್ಲಿ ನಟಿ Janhvi Kapoor ಫೋಟೋಶೂಟ್ ವೈರಲ್: ಕಿವಿಯೋಲೆ ಬೆಲೆ ಕೇಳಿದ್ರೆ ಶಾಕ್ ಆಗ್ತೀರಾ! | Janhvi Kapoor Glamorous Photoshoot Ivory Backless Dress Viral Gvd

ಬ್ಯಾಕ್‌ಲೆಸ್ ಡ್ರೆಸ್‌ನಲ್ಲಿ ನಟಿ Janhvi Kapoor ಫೋಟೋಶೂಟ್ ವೈರಲ್: ಕಿವಿಯೋಲೆ ಬೆಲೆ ಕೇಳಿದ್ರೆ ಶಾಕ್ ಆಗ್ತೀರಾ! | Janhvi Kapoor Glamorous Photoshoot Ivory Backless Dress Viral Gvd


ಜಾನ್ವಿ ಕಪೂರ್ ತಮ್ಮ ಲೇಟೆಸ್ಟ್ ಫೋಟೋಶೂಟ್ ಅನ್ನು ಇನ್‌ಸ್ಟಾಗ್ರಾಮ್‌ನಲ್ಲಿ ಹಂಚಿಕೊಂಡಿದ್ದಾರೆ. ಆದರೆ, ಈ ಫೋಟೋಗಳಿಗೆ ಅವರು ಯಾವುದೇ ಕ್ಯಾಪ್ಶನ್ ಬರೆದಿಲ್ಲ. ಈ ಫೋಟೋಗಳಲ್ಲಿ ಗ್ಲಾಮರಸ್ ಲುಕ್ ನೋಡಬಹುದು.

ನಟಿ ಜಾನ್ವಿ ಕಪೂರ್ ಗ್ಲಾಮರಸ್ ಫೋಟೋಶೂಟ್ ಮಾಡಿಸಿದ್ದು, ಈ ಫೋಟೋಗಳು ಸೋಷಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗುತ್ತಿವೆ. ಇದರಲ್ಲಿ ಜಾನ್ವಿ ಹಿಂದೆಂದಿಗಿಂತಲೂ ಸಖತ್ ಗಾರ್ಜಿಯಸ್ ಆಗಿ ಕಾಣಿಸಿಕೊಂಡಿದ್ದಾರೆ. ತಮ್ಮ ಇನ್‌ಸ್ಟಾಗ್ರಾಮ್‌ನಲ್ಲಿ ಈ ಹೊಸ ಫೋಟೋಗಳನ್ನು ಹಂಚಿಕೊಂಡಿದ್ದು, ಅಭಿಮಾನಿಗಳು ಕಾಮೆಂಟ್‌ಗಳ ಸುರಿಮಳೆಗೈಯುತ್ತಿದ್ದಾರೆ. ಜಾನ್ವಿ ಕಪೂರ್ ತಮ್ಮ ಲೇಟೆಸ್ಟ್ ಫೋಟೋಶೂಟ್ ಅನ್ನು ಇನ್‌ಸ್ಟಾಗ್ರಾಮ್‌ನಲ್ಲಿ ಹಂಚಿಕೊಂಡಿದ್ದಾರೆ.

ಆದರೆ, ಈ ಫೋಟೋಗಳಿಗೆ ಅವರು ಯಾವುದೇ ಕ್ಯಾಪ್ಶನ್ ಬರೆದಿಲ್ಲ. ಈ ಫೋಟೋಗಳಲ್ಲಿ ಅವರ ಗ್ಲಾಮರಸ್ ಮತ್ತು ಸಿಜ್ಲಿಂಗ್ ಲುಕ್ ನೋಡಬಹುದು. ಈ ಫೋಟೋಗಳಿಗೆ ಈಗಾಗಲೇ 4.40 ಲಕ್ಷಕ್ಕೂ ಹೆಚ್ಚು ಲೈಕ್ಸ್ ಬಂದಿವೆ. ಜಾನ್ವಿ ಕಪೂರ್ ಮಾಡಿಸಿರುವ ಈ ಫೋಟೋಶೂಟ್‌ನಲ್ಲಿ ಐವರಿ ಶೇಡ್‌ನ ಬ್ಯಾಕ್‌ಲೆಸ್ ಔಟ್‌ಫಿಟ್‌ನಲ್ಲಿ ಕಾಣಿಸಿಕೊಂಡಿದ್ದಾರೆ. ಈ ಫೋಟೋಗಳಲ್ಲಿ ಅವರು ತುಂಬಾ ಸ್ಟೈಲಿಶ್ ಮತ್ತು ಎಲಿಗೆಂಟ್ ಆಗಿ ಕಾಣುತ್ತಿದ್ದಾರೆ.

ಜಾನ್ವಿ ಕಪೂರ್ ಅವರ ಈ ಹೊಸ ಫೋಟೋಶೂಟ್‌ನ ಚಿತ್ರಗಳಲ್ಲಿ, ತಮ್ಮ ಔಟ್‌ಫಿಟ್ ಅನ್ನು ಬಹಳ ಗ್ರೇಸ್‌ಫುಲ್ ಆಗಿ ಕ್ಯಾರಿ ಮಾಡಿದ್ದಾರೆ. ಅವರ ಬ್ಯಾಕ್‌ಲೆಸ್ ಸ್ಟೈಲ್ ಎಲ್ಲರ ಗಮನ ಸೆಳೆಯುತ್ತಿದೆ. ಈ ಫೋಟೋಶೂಟ್‌ನಲ್ಲಿ ಜಾನ್ವಿ ಕಪೂರ್ ‘Antithesis’ ಬ್ರ್ಯಾಂಡ್‌ನ ಕಸ್ಟಮ್ ಡ್ರೆಸ್ ಧರಿಸಿದ್ದಾರೆ. ಇದು ಸಂಪೂರ್ಣವಾಗಿ ಸಾಫ್ಟ್ ಮತ್ತು ಫ್ಲೋಯಿ ಫ್ಯಾಬ್ರಿಕ್‌ನಿಂದ ಮಾಡಲ್ಪಟ್ಟಿದೆ. ಈ ಐವರಿ ಶೇಡ್‌ನ ಡ್ರೆಸ್‌ನ ಬ್ಯಾಕ್ ಡಿಸೈನ್ ಎಲ್ಲರ ಗಮನ ಸೆಳೆಯುತ್ತಿದೆ. ಇದರಲ್ಲಿ ಕ್ರಾಸ್ ಸ್ಟ್ರಾಪ್ಸ್ ಜೊತೆಗೆ ಡೀಪ್ ಬ್ಯಾಕ್ ಕಟ್ ಮತ್ತು ಶೀರ್ ಕೇಪ್ ಸ್ಲೀವ್ಸ್ ಇವೆ.

ಕಿವಿಯೋಲೆಗಳ ಮೇಲೆ ಎಲ್ಲರ ಕಣ್ಣು

ಜಾನ್ವಿ ಕಪೂರ್ ಅವರ ಈ ಹೊಸ ಫೋಟೋಶೂಟ್‌ನಲ್ಲಿ ಎಲ್ಲರ ಕಣ್ಣು ಅವರ ಕಿವಿಯೋಲೆಗಳ ಮೇಲೆ ನೆಟ್ಟಿದೆ. ಅವರು ಸುಮಾರು 5 ಲಕ್ಷ ರೂಪಾಯಿ ಮೌಲ್ಯದ ಸ್ಟೇಟ್‌ಮೆಂಟ್ ಇಯರಿಂಗ್ಸ್ ಧರಿಸಿದ್ದಾರೆ. ಇದು ಅವರ ಸಿಂಪಲ್ ಔಟ್‌ಫಿಟ್‌ಗೆ ರಾಯಲ್ ಲುಕ್ ನೀಡುತ್ತಿದೆ. ಅವರು ‘Shachee Fine Jewellery’ ಬ್ರ್ಯಾಂಡ್‌ನ ‘The Promise of Eden-Mystic Earrings’ ಅನ್ನು ಧರಿಸಿದ್ದಾರೆ.

ಜಾನ್ವಿ ಕಪೂರ್ ಅವರ ವೃತ್ತಿಜೀವನದ ಬಗ್ಗೆ ಹೇಳುವುದಾದರೆ, ಅವರು ಕೊನೆಯದಾಗಿ 2025 ರಲ್ಲಿ ತೆರೆಕಂಡ ರೊಮ್ಯಾಂಟಿಕ್ ಕಾಮಿಡಿ ಚಿತ್ರ ‘ಸನ್ನಿ ಸಂಸ್ಕಾರಿ ಕಿ ತುಳಸಿ ಕುಮಾರಿ’ಯಲ್ಲಿ ಕಾಣಿಸಿಕೊಂಡಿದ್ದರು. ಅವರ ಮುಂಬರುವ ಚಿತ್ರಗಳೆಂದರೆ ‘ಪೆಡ್ಡಿ’, ‘ರಾಕಾ’ ಮತ್ತು ‘ದೇವರ ಪಾರ್ಟ್ 2’.



Source link

Leave a Reply

Your email address will not be published. Required fields are marked *