ಮಾನವಕುಲದ ಪೂರ್ವಜರು ಮೊಟ್ಟೆ ಇಡುತ್ತಿದ್ದರೇ? 250 ಮಿಲಿಯನ್ ವರ್ಷಗಳ ಹಿಂದಿನ ಕೌತುಕ ಬಿಚ್ಚಿಟ್ಟ ಸೈಂಟಿಸ್ಟ್! | Revolution In Science Did Human Ancestors Lay Eggs Scientists Unveil 250 Million Year Old Mystery

ಸುಮಾರು 280 ರಿಂದ 200 ಮಿಲಿಯನ್ ವರ್ಷಗಳ ಹಿಂದೆ, ಭೂಮಿಯ ಮೇಲೆ ವಿಚಿತ್ರ ಪ್ರಾಣಿಗಳ ಗುಂಪೊಂದು ವಾಸಿಸುತ್ತಿತ್ತು. ಇವುಗಳನ್ನೇ ವಿಜ್ಞಾನಿಗಳು ‘ಥೆರಪ್ಸಿಡ್‌ಗಳು’ (Therapsids) ಎಂದು ಕರೆಯುತ್ತಾರೆ. ಇಂದು ನಾವು ನೋಡುವ ಸಸ್ತನಿಗಳು ಮತ್ತು ಸ್ವತಃ ಮಾನವಕುಲ ವಿಕಸನಗೊಂಡಿರುವುದು ಇದೇ ಥೆರಪ್ಸಿಡ್‌ಗಳಿಂದ! ಅಂದರೆ, ಇವು ನಮ್ಮ ಆದಿ ಪೂರ್ವಜರು. ದಕ್ಷಿಣ ಆಫ್ರಿಕಾದಲ್ಲಿ 150 ವರ್ಷಗಳ ಹಿಂದೆಯೇ ಇವುಗಳ ಪಳೆಯುಳಿಕೆಗಳು ಪತ್ತೆಯಾಗಿದ್ದರೂ, ಒಂದು ದೊಡ್ಡ ರಹಸ್ಯ ಮಾತ್ರ ವಿಜ್ಞಾನಿಗಳನ್ನು ಕಾಡುತ್ತಲೇ ಇತ್ತು.

ದಕ್ಷಿಣ ಆಫ್ರಿಕಾದ ಖ್ಯಾತ ಪಳೆಯುಳಿಕೆ ಹಂಟರ್ ಜೇಮ್ಸ್ ಕಿಚಿಂಗ್, ಕರೂ ಪ್ರಾಂತ್ಯದ ಬಂಡೆಗಳ ನಡುವೆ ಸಾವಿರಾರು ಥೆರಪ್ಸಿಡ್ ಪಳೆಯುಳಿಕೆಗಳನ್ನು ಪತ್ತೆಹಚ್ಚಿದ್ದರು. ಅವರು ಡೈನೋಸಾರ್ ಮೊಟ್ಟೆಗಳನ್ನೇನೋ ಕಂಡುಹಿಡಿದರು, ಆದರೆ ಅವರಿಗೆ ಒಂದೇ ಒಂದು ಥೆರಪ್ಸಿಡ್ ಮೊಟ್ಟೆ ಸಿಗಲಿಲ್ಲ. ‘ಇವು ಸಸ್ತನಿಗಳಂತೆ ನೇರವಾಗಿ ಮರಿ ಹಾಕುತ್ತಿದ್ದವೇ (Viviparous) ಅಥವಾ ಮೊಟ್ಟೆ ಇಡುತ್ತಿದ್ದವೇ?’ ಎಂಬ ಪ್ರಶ್ನೆ ಕಿಚಿಂಗ್ ಅವರನ್ನು ಕಾಡತೊಡಗಿತ್ತು. ಇಂದಿಗೂ ಪ್ಲಾಟಿಪಸ್‌ನಂತಹ ಕೆಲವು ಸಸ್ತನಿಗಳು ಮೊಟ್ಟೆ ಇಡುವುದರಿಂದ, ಇವು ಕೂಡ ಮೊಟ್ಟೆ ಇಡಲೇಬೇಕು ಎಂಬ ತರ್ಕವಿತ್ತು. ಆದರೆ ಪುರಾವೆ ಮಾತ್ರ ಇರಲಿಲ್ಲ.

Source link

Leave a Reply

Your email address will not be published. Required fields are marked *