ಬೆಂಗಳೂರು, ಏ 15: ಪ್ರೀತಿ ಮತ್ತು ಮಮಕಾರಕ್ಕೆ ಕೇವಲ ಮನುಷ್ಯರು ಮಾತ್ರ ಸೀಮಿತವಲ್ಲ ಎನ್ನುವುದಕ್ಕೆ ಬೆಂಗಳೂರಿನ ಮೆಟ್ರೋ ನಿಲ್ದಾಣವೊಂದು ಸಾಕ್ಷಿಯಾಗಿದೆ. ತನ್ನ ಮಗು ಸಾವನ್ನಪ್ಪಿ ಅಸ್ಥಿಪಂಜರವಾದರೂ, ಅದನ್ನು ಬಿಟ್ಟುಕೊಡದೆ ಸಾಗುತ್ತಿರುವ ಮಂಗನ ತಾಯಿಯ ದೃಶ್ಯವು ಪ್ರತಿಯೊಬ್ಬರ ಕಣ್ಣಂಚಿನಲ್ಲಿ ನೀರು ತರಿಸುವಂತಿದೆ.ಮಗು ಸಾವನ್ನಪ್ಪಿದ ದಿನಗಳು ಕಳೆದರೂ, ಆ ತಾಯಿ ಮಾತ್ರ ಮಗುವಿನ ಅಸ್ಥಿಪಂಜರವನ್ನೇ ತನ್ನ ಎದೆಯ ಮೇಲೆ ಹೊತ್ತುಕೊಂಡು ಮೆಟ್ರೋ ನಿಲ್ದಾಣದಿಂದ ಬಳಲುತ್ತಿದೆ. ಮಗು ಸತ್ತಿದೆ ಎಂಬ ಕಟು ಸತ್ಯವನ್ನು ಒಪ್ಪಿಕೊಳ್ಳಲು ಸಾಧ್ಯವಾಗದ ಆ ತಾಯಿಯ ವೇದ ಮೌನನೆ ಅಲ್ಲಿನ ಜನರನ್ನು ಮರುಗುವಂತೆ ಮಾಡಿದೆ. ಪ್ರಾಣಿ ಪ್ರಪಂಚದಲ್ಲಿ ಯಾವುದೇ ಮಂಗಗಳಲ್ಲಿ ಈ ರೀತಿಯ ವರ್ತನೆ ವಿರಳವಾದರೂ, ಅದು ಅವರಿಗೂ ಮನುಷ್ಯರಂತೆಯೇ ಮತ್ತು ಬಾಂಧವ್ಯ ಇರುತ್ತದೆ ಎನ್ನುವುದನ್ನು ತೋರಿಸುತ್ತದೆ. ಅಸ್ಥಿಪಂಜರವನ್ನೇ ಮಗುವೆಂದು ಭಾವಿಸಿ ರಕ್ಷಿಸುತ್ತಿರುವ ಆ ತಾಯಿಯ ಪ್ರೀತಿ ಸಾವನ್ನೂ ಮೀರಿಸುವಂತದ್ದು. ಮೆಟ್ರೋ ನಿಲ್ದಾಣಕ್ಕೆ ಬಂದಿದ್ದ ಪ್ರಯಾಣಿಕರು ಈ ಹೃದಯವಿದ್ರಾವಕ ದೃಶ್ಯವನ್ನು ಕಂಡು ಮಮ್ಮಲ ಮರುಗಿದ್ದಾರೆ. ಪ್ರಕೃತಿಯಲ್ಲಿನ ತಾಯ್ತನದ ಈ ಅಂತಿಮ ಸತ್ಯದ ವಿಡಿಯೋ ಈಗ ಎಲ್ಲೆಡೆ ವೈರಲ್ ಆಗುತ್ತಿದೆ, “ಜಗತ್ತಿನಲ್ಲಿ ತಾಯಿಯ ಪ್ರೀತಿಗೆ ಸಾಟಿಯಿಲ್ಲ” ಎಂಬ ಸಂದೇಶ ಸಾರುತ್ತಿದೆ.
ವಿಡಿಯೋ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ