Headlines

ಟೋಕಿಯೋದಲ್ಲಿ ತಿಂಗಳಿಗೆ ₹2.9 ಲಕ್ಷ ಖರ್ಚು? ಭಾರತೀಯ ಮಹಿಳೆಯ ವಿಡಿಯೋ ವೈರಲ್, ನೆಟ್ಟಿಗರ ಜಟಾಪಟಿ! | Indian Womans Tokyo Expense Video Sparks Online Debate Sat

ಟೋಕಿಯೋದಲ್ಲಿ ತಿಂಗಳಿಗೆ ₹2.9 ಲಕ್ಷ ಖರ್ಚು? ಭಾರತೀಯ ಮಹಿಳೆಯ ವಿಡಿಯೋ ವೈರಲ್, ನೆಟ್ಟಿಗರ ಜಟಾಪಟಿ! | Indian Womans Tokyo Expense Video Sparks Online Debate Sat



ಟೋಕಿಯೋದಲ್ಲಿ ತಿಂಗಳಿಗೆ ₹2.9 ಲಕ್ಷ ಖರ್ಚು? ಭಾರತೀಯ ಮಹಿಳೆಯ ವಿಡಿಯೋ ವೈರಲ್, ನೆಟ್ಟಿಗರ ಜಟಾಪಟಿ! | Indian Womans Tokyo Expense Video Sparks Online Debate Sat

ಟೋಕಿಯೋದಲ್ಲಿ ವಾಸಿಸುವ ಭಾರತೀಯ ಮಹಿಳೆ ಸುನಕ್ಷಿ ಶರ್ಮಾ, ತಮ್ಮ ಮೂರು ಜನರ ಕುಟುಂಬದ ತಿಂಗಳ ಖರ್ಚು ಸುಮಾರು 2.9 ಲಕ್ಷ ರೂ. ಎಂದು ವಿಡಿಯೋ ಹಂಚಿಕೊಂಡಿದ್ದಾರೆ. ಮನೆ ಬಾಡಿಗೆ, ಡೇ ಕೇರ್, ದಿನಸಿ ಒಳಗೊಂಡ ಜಪಾನ್‌ನ ಜೀವನ ವೆಚ್ಚದ ಬಗ್ಗೆ ದೊಡ್ಡ ಚರ್ಚೆಯನ್ನೇ ಹುಟ್ಟುಹಾಕಿದೆ.

ಟೋಕಿಯೋ: ಜಪಾನ್ ರಾಜಧಾನಿ ಟೋಕಿಯೋದಲ್ಲಿ ವಾಸಿಸುವ ಭಾರತೀಯ ಮಹಿಳೆಯೊಬ್ಬರು ತಮ್ಮ ಕುಟುಂಬದ ತಿಂಗಳ ಖರ್ಚಿನ ಬಗ್ಗೆ ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿರುವ ವಿಡಿಯೋ ಒಂದು ಈಗ ಸಿಕ್ಕಾಪಟ್ಟೆ ವೈರಲ್ ಆಗಿದೆ. ಸುನಕ್ಷಿ ಶರ್ಮಾ ಎಂಬ ಈ ಮಹಿಳೆ, ತಮ್ಮ ಮೂರು ಜನರ ಕುಟುಂಬಕ್ಕೆ ಟೋಕಿಯೋದಲ್ಲಿ ಜೀವನ ಮಾಡಲು ತಿಂಗಳಿಗೆ ಸುಮಾರು 2.9 ಲಕ್ಷ ರೂಪಾಯಿ ಖರ್ಚಾಗುತ್ತದೆ ಎಂದು ಹೇಳಿಕೊಂಡಿದ್ದಾರೆ. ಬಾಡಿಗೆ, ಡೇ ಕೇರ್, ದಿನಸಿ, ಸಾರಿಗೆ ಅಂತ ಅವರು ಕೊಟ್ಟಿರುವ ಖರ್ಚಿನ ಪಟ್ಟಿ, ಭಾರತದ ಮೆಟ್ರೋ ನಗರಗಳ ಜೀವನ ವೆಚ್ಚದ ಜೊತೆ ಹೋಲಿಕೆ ಮಾಡಿ ಚರ್ಚೆ ಹುಟ್ಟುಹಾಕಿದೆ.

ಜಪಾನ್‌ನಲ್ಲಿ ಬದುಕು ದುಬಾರಿ ಎಂದ ವಿಡಿಯೋ

ಸುನಕ್ಷಿ ಅವರ ಕುಟುಂಬದ ಅತಿ ದೊಡ್ಡ ಖರ್ಚು ಮನೆ ಬಾಡಿಗೆಯದ್ದಾಗಿದೆ. ಇದಕ್ಕೆ ಸುಮಾರು 2,00,000 ಯೆನ್ (ಅಂದಾಜು 1.16 ಲಕ್ಷ ರೂ.) ಆಗುತ್ತದೆ. ಇನ್ನು ಮಗನ ಡೇ ಕೇರ್‌ಗೆ ಸುಮಾರು 1,00,000 ಯೆನ್ (ಅಂದಾಜು 58,000 ರೂ.) ಖರ್ಚಾಗುತ್ತದೆ. ಜಪಾನ್‌ನಲ್ಲಿ ಭಾರತೀಯ ದಿನಸಿ ಸಾಮಾನುಗಳು ಸುಲಭವಾಗಿ ಸಿಗದ ಕಾರಣ, ಅದಕ್ಕಾಗಿ ತಿಂಗಳಿಗೆ 1,00,000 ದಿಂದ 1,50,000 ಯೆನ್ (ಸುಮಾರು 58,000 ದಿಂದ 87,000 ರೂ.) ಖರ್ಚು ಮಾಡುತ್ತಾರೆ. ಕಾರ್ ನಿರ್ವಹಣೆ, ಇಂಧನ, ಟೋಲ್ ಮತ್ತು ಪಾರ್ಕಿಂಗ್‌ಗೆ 50,000 ದಿಂದ 1,00,000 ಯೆನ್ (ಸುಮಾರು 29,000 ದಿಂದ 58,000 ರೂ.) ಬೇಕಾಗುತ್ತದೆ. ‘ಭಾರತದ ಮೆಟ್ರೋ ನಗರಗಳಿಗೆ ಹೋಲಿಸಿದರೆ ಇದು ದುಬಾರಿನಾ?’ ಎಂಬ ಪ್ರಶ್ನೆಯೊಂದಿಗೆ ಅವರು ಈ ವಿಡಿಯೋವನ್ನು ಹಂಚಿಕೊಂಡಿದ್ದಾರೆ.

ಖರ್ಚಿನ ಲೆಕ್ಕಕ್ಕೆ ನೆಟ್ಟಿಗರ ಜಟಾಪಟಿ

ಈ ವಿಡಿಯೋಗೆ ನೆಟ್ಟಿಗರಿಂದ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ. ಜಪಾನ್‌ನಲ್ಲಿ ಜೀವನ ವೆಚ್ಚದ ಬಗ್ಗೆ ತಿಳಿದಿರುವ ಕೆಲವರು, ವಿದೇಶಿಯರಾದ ಕಾರಣ ಖರ್ಚು ಹೆಚ್ಚಿರುವುದು ಸಹಜ ಎಂದಿದ್ದಾರೆ. ಒಂದು ಯೂನಿಫಾರ್ಮ್ ಶರ್ಟ್‌ಗೆ ಸುಮಾರು 5,000 ಯೆನ್ (ಅಂದಾಜು 2,900 ರೂ.) ಆಗುತ್ತದೆ ಎಂದು ಕೆಲವರು ಉದಾಹರಣೆ ಕೊಟ್ಟಿದ್ದಾರೆ. ಆದರೆ, ಹಲವರು ಈ ಲೆಕ್ಕವನ್ನು ನಂಬಲು ಸಿದ್ಧರಿಲ್ಲ. ಅದರಲ್ಲೂ ಊಟ ಮತ್ತು ಇಂಧನಕ್ಕೆ ನೀಡಿರುವ ಲೆಕ್ಕಾಚಾರದಲ್ಲಿ ಅತಿಶಯೋಕ್ತಿ ಇದೆ ಎಂದು ಒಂದು ವರ್ಗ ವಾದಿಸುತ್ತಿದೆ.

‘ಜಪಾನ್‌ನಲ್ಲಿ ಇಂಧನ ಅಷ್ಟು ದುಬಾರಿಯಿಲ್ಲ, ಇಷ್ಟೊಂದು ಹಣ ಯಾಕೆ ಬೇಕು?’ ಎಂದು ಕೆಲವರು ಪ್ರಶ್ನಿಸಿದ್ದಾರೆ. ಜಪಾನ್‌ನಲ್ಲಿ ವಾಸಿಸುವ ಮತ್ತೊಬ್ಬರು ಈ ಲೆಕ್ಕಾಚಾರ ತಪ್ಪು ಎಂದು ವಾದಿಸಿದ್ದಾರೆ. ತಮಗೆ ಭಾರತೀಯ ದಿನಸಿಗಾಗಿ ತಿಂಗಳಿಗೆ ಕೇವಲ 20,000 ಯೆನ್ ಖರ್ಚಾಗುತ್ತದೆ, ಒಂದು ಲಕ್ಷ ಯೆನ್ ಕಾರ್‌ಗೆ ಖರ್ಚಾಗುವುದು ನಂಬಲು ಅಸಾಧ್ಯ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ. ಒಟ್ಟಿನಲ್ಲಿ, ಟೋಕಿಯೋನಂತಹ ದುಬಾರಿ ನಗರಗಳಲ್ಲಿ ವಾಸಿಸುವವರ ಆರ್ಥಿಕ ಬಜೆಟ್ ಬಗ್ಗೆ ಈ ವಿಡಿಯೋ ದೊಡ್ಡ ಚರ್ಚೆಯನ್ನೇ ಹುಟ್ಟುಹಾಕಿದೆ.



Source link

Leave a Reply

Your email address will not be published. Required fields are marked *