Headlines

ಖಾಲಿಯಾದ ಪಾಕ್ ಬೊಕ್ಕಸಕ್ಕೆ ಬೂಸ್ಟರ್ ಡೋಸ್, ಮತ್ತೆ 3 ಬಿಲಿಯನ್ ಡಾಲರ್ ನೆರವು ನೀಡಲು ಮುಂದಾದ ಸೌದಿ ಅರೇಬಿಯಾ

ಖಾಲಿಯಾದ ಪಾಕ್ ಬೊಕ್ಕಸಕ್ಕೆ  ಬೂಸ್ಟರ್ ಡೋಸ್, ಮತ್ತೆ 3 ಬಿಲಿಯನ್ ಡಾಲರ್ ನೆರವು ನೀಡಲು ಮುಂದಾದ ಸೌದಿ ಅರೇಬಿಯಾ


ಸೌದಿ ಅರೇಬಿಯಾ, ಏಪ್ರಿಲ್ 15: ತೀವ್ರ ಆರ್ಥಿಕ ಸಂಕಷ್ಟದಲ್ಲಿ ಸಿಲುಕಿ ಕಂಗಾಲಾದ ಪಾಕಿಸ್ತಾನ(ಪಾಕಿಸ್ತಾನ)ದ ಕೈಯನ್ನು ಸೌದಿ ಅರೇಬಿಯಾ ಮತ್ತೊಮ್ಮೆ ಹಿಡಿದಿದೆ. ಸೌದಿ ಸರ್ಕಾರವು ಪಾಕಿಸ್ತಾನಕ್ಕೆ 3 ಬಿಲಿಯನ್ ಅಮೆರಿಕನ್ ಡಾಲರ್ ಹೆಚ್ಚುವರಿ ಆರ್ಥಿಕ ಸಹಾಯವನ್ನು ಪ್ರಕಟಿಸಿದೆ. ಅಷ್ಟೇ ಅಲ್ಲದೆ, 5 ಬಿಲಿಯನ್ ಡಾಲರ್ ನೆರವಿನ ಅವಧಿಯನ್ನು ಮುಂದಿನ ಮೂರು ವರ್ಷಗಳವರೆಗೆ ವಿಸ್ತರಿಸುವ ಮೂಲಕ ದೊಡ್ಡ ಸಮಾಧಾನ ನೀಡಿದೆ.

ಪಾಕಿಸ್ತಾನದ ಪಾಲಿಗೆ ಈ ನೆರವು ಅತ್ಯಂತ ನಿರ್ಣಾಯಕವಾಗಿದೆ. ಈ ತಿಂಗಳ ಅಂತ್ಯದ ವೇಳೆಗೆ ಪಾಕಿಸ್ತಾನವು ಯುನೈಟೆಡ್ ಅರಬ್ ಎಮಿರೇಟ್ಸ್‌ಗೆ (ಯುಎಇ) 3.5 ಬಿಲಿಯನ್ ಡಾಲರ್ ಸಾಲವನ್ನು ಮರುಪಾವತಿಸಬೇಕಾಗಿದೆ. ಇಂತಹ ಸಮಯದಲ್ಲಿ ಬೊಕ್ಕಸ ಖಾಲಿಯಾಗುವ ಭೀತಿಯಲ್ಲಿದ್ದ ಇಸ್ಲಾಮಾಬಾದ್‌ಗೆ ಸೌದಿಯ ಘೋಷಣೆ ಮಾಡಿದೆ.

ಈ ಹಿಂದೆ ನೀಡಲಾಗಿದ್ದ 5 ಬಿಲಿಯನ್ ಡಾಲರ್ ಸಾಲಕ್ಕೆ ಪ್ರತಿ ವರ್ಷ ನೀಡಲಾಗುತ್ತಿದ್ದ ‘ರೋಲ್‌ಓವರ್’ (ಅವಧಿ ವಿಸ್ತರಣೆ) ವ್ಯವಸ್ಥೆಯನ್ನು ತೆಗೆದುಹಾಕಲಾಗಿದೆ, ಅದನ್ನು ನೇರವಾಗಿ 3 ವರ್ಷಗಳ ದೀರ್ಘಾವಧಿಗೆ ವಿಸ್ತರಿಸಲಾಗಿದೆ. ಪ್ರಧಾನಿ ಶೆಹಬಾಜ್ ಷರೀಫ್ ಅವರು ಏಪ್ರಿಲ್ 15 ರಿಂದ 18 ರವರೆಗೆ ಸೌದಿ ಅರೇಬಿಯಾ, ಕತಾರ್ ಮತ್ತು ಟರ್ಕಿಗೆ ಭೇಟಿ ನೀಡುತ್ತಿರುವ ಬೆನ್ನಲ್ಲೇ ಈ ಘೋಷಣೆ ಹೊರಬಿದ್ದಿದೆ.

ಮತ್ತಷ್ಟು ಓದಿ: ಅಮೆರಿಕದ ಉಪಾಧ್ಯಕ್ಷ ಜೆಡಿ ವ್ಯಾನ್ಸ್‌ಗೆ ಪಾಕಿಸ್ತಾನದ ಯುದ್ಧವಿಮಾನಗಳು ಬೆಂಗಾವಲು

ಪಾಕಿಸ್ತಾನವು ಅಂತಾರಾಷ್ಟ್ರೀಯ ಹಣಕಾಸು ನಿಧಿಯಿಂದ (IMF) ಸಾಲ ಪಡೆಯಲು ಹರಸಾಹಸ ಪಡುತ್ತಿದೆ. ಐಎಂಎಫ್ ಶರತ್ತಿನ ಪ್ರಕಾರ, ಪಾಕಿಸ್ತಾನಕ್ಕೆ ಮಿತ್ರರಾಷ್ಟ್ರಗಳಿಗೆ ನೀಡುವ ಠೇವಣಿಗಳನ್ನು ಕಾಯ್ದುಕೊಳ್ಳುವುದು ಅನಿವಾರ್ಯವಾಗಿತ್ತು. ಸೌದಿ ಅರೇಬಿಯಾದ ಇತ್ತೀಚಿನ ನಡೆ ಪಾಕಿಸ್ತಾನಕ್ಕೆ ಐಎಂಎಫ್‌ನಿಂದ ಮತ್ತಷ್ಟು ಆರ್ಥಿಕ ನೆರವು ಸಿಗಲು ಹಾದಿ ಸುಗಮಗೊಳಿಸಿ

ಐಎಂಎಫ್ ಷರತ್ತು ಮತ್ತು ಮಿತ್ರರಾಷ್ಟ್ರಗಳ ಬೆಂಬಲ
ಅಂತಾರಾಷ್ಟ್ರೀಯ ಹಣಕಾಸು ನಿಧಿ (IMF) ಪಾಕಿಸ್ತಾನಕ್ಕೆ ಸಾಲ ನೀಡಲು ಒಂದು ಕಠಿಣ ಷರತ್ತು ವಿಧಿಸಿತ್ತು. ಪಾಕಿಸ್ತಾನದ ಪ್ರಮುಖ ಸಾಲಗಾರರಾದ ಸೌದಿ ಅರೇಬಿಯಾ, ಚೀನಾ ಮತ್ತು ಯುಇಐ ದೇಶಗಳು ತಮ್ಮ ನಗದು ಠೇವಣಿಗಳನ್ನು ಪಾಕಿಸ್ತಾನದ ಬ್ಯಾಂಕ್‌ಗಳಲ್ಲಿ ಕನಿಷ್ಠ ಮೂರು ವರ್ಷಗಳ ಕಾಲ ಉಳಿಸಿಕೊಳ್ಳಬೇಕು ಎಂಬುದು ಆ ಷರತ್ತಾಗಿತ್ತು. ಸೌದಿ ಅರೇಬಿಯಾ ಈ ಶರತ್ತಿಗೆ ಒಪ್ಪಿಗೆ ಸೂಚಿಸಿರುವುದು ಐಎಂಎಫ್‌ನಿಂದ ಪಾಕಿಸ್ತಾನಕ್ಕೆ ಮುಂದಿನ ದಿನಗಳಲ್ಲಿ ಸಾಲ ಸಿಗಲು ಹಾದಿ ಸುಗಮಗೊಳಿಸಿದೆ. ಒಟ್ಟಾರೆಯಾಗಿ, ಸಾಲದ ಸುಳಿಯಲ್ಲಿ ಸಿಲುಕಿರುವ ಪಾಕಿಸ್ತಾನಕ್ಕೆ ಅರೇಬಿಯಾ ನೀಡಲಾಗಿದೆ ಈ ಬೂಸ್ಟರ್ ಡೋಸ್ ಸೌ, ನೆರೆರಾಷ್ಟ್ರವು ದಿವಾಳಿಯಾಗುವುದನ್ನು ಸದ್ಯಕ್ಕೆ ತಪ್ಪಿಸಿ.

ಅಂತಾರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ



Source link

Leave a Reply

Your email address will not be published. Required fields are marked *