ಜನವರಿ, ಏಪ್ರಿಲ್ 15: ವಿಶ್ವದ ಶೇ. 20 ತೈಲ ಸಾಗಣೆಯಾಗುವ ಹಾರ್ಮುಜ್ ಜಲಸಂಧಿ ಬಂದ್ ಆಗಿದ್ದಕ್ಕೆ ಇಡೀ ಜಗತ್ತು ಶಾಕ್ ಪಡೆದಿದೆ. ಹಾರ್ಮುಜ್ ಜಲಸಂಧಿಯನ್ನು ಇರಾನ್ ನಿಯಂತ್ರಿಸುತ್ತಿದೆ. ಇದನ್ನು ತಡೆಯಲು ಅಮೆರಿಕ ಕಸರತ್ತು ನಡೆಸಿದೆ. ಇದೇ ವೇಳೆ, ಅಮೆರಿಕವು ಹಾರ್ಮುಜ್‌ಗಿಂತ ಮುಖ್ಯವಾಗಿರುವ ಇನ್ನೊಂದು ಜಲಸಂಧಿಗೆ ತಂಟೆಗೆ ತೆರಳುತ್ತಿದೆ ಎಂಬಂತಹ ಸುದ್ದಿಗಳಿವೆ. ಇದು ಸ್ಟ್ರೇಟ್ ಆಫ್ ಮಲಾಕ್ಕ, ಅಥವಾ ಮಲಾಕ್ಕ ಜಲಸಂಧಿ (ಮಲಕ್ಕಾ ಜಲಸಂಧಿ). ಶೇ. 40ರಷ್ಟು ವ್ಯಾಪಾರ ವಹಿವಾಟುಗಳಾಗುವ ಸರಕುಗಳು ಈ ಜಲಸಂಧಿ ಮೂಲಕ ಸಾಗುತ್ತವೆ. ಹೀಗಾಗಿ, ಅಮೆರಿಕವು ಮಲಕ್ಕಾ ಮೇಲೆ ಕಣ್ಣಿಟ್ಟಿರುವುದು ಇಡೀ ಪ್ರಪಂಚದ ಕಣ್ಣು ನೆಡುವಂತೆ ಮಾಡಿದೆ.
ಭಾರತದ ಸಮೀಪದಲ್ಲೇ ಇರುವ ಮಲಕ್ಕಾ ಜಲಸಂಧಿ
ಮಲಕ್ಕಾ ಜಲಸಂಧಿಯು ಭಾರತದ ಆಗ್ನೇಯ ದಿಕ್ಕಿನಲ್ಲಿರುವ ಇಂಡೋನೇಷ್ಯಾ, ಮಲೇಷ್ಯಾ, ಥಾಯ್ಲೆಂಡ್, ಸಿಂಗಾಪುರ ಇತ್ಯಾದಿ ದೇಶಗಳ ಕಡೆ ಇದೆ. ಹಿಂದೂ ಮಹಾಸಾಗರದ ಅಂಡಮಾನ್ ಸಮುದ್ರ ಮತ್ತು ಪೆಸಿಫಿಕ್ ಮಹಾಸಾಗರದ ಸೌತ್ ಚೀನಾ ಸಮುದ್ರವನ್ನು ಇದು ಸಂಪರ್ಕಿಸುತ್ತದೆ.
ಇದನ್ನೂ ಓದಿ: ಜಾಗತಿಕ ಬಿಕ್ಕಟ್ಟುಗಳ ನಡುವೆಯೂ ಭಾರತದ ಉತ್ತಮ ಆರ್ಥಿಕ ಬೆಳವಣಿಗೆ ಸಾಧ್ಯ: ಐಎಂಎಫ್ ಅಂದಾಜು
ವಿಶ್ವದ ಶೇ. 30-40ರಷ್ಟು ಸರಕುಗಳ ಆಮದು ರಫ್ತು ಈ ಜಲಸಂಧಿ ಮೂಲಕ ಆಗುತ್ತದೆ. ಇದು ವಿಶ್ವದಲ್ಲಿ ಅತಿಹೆಚ್ಚು ಹಡಗು ಟ್ರಾಫಿಕ್ ಇರುವ ಮಾರ್ಗಗಳಲ್ಲಿ ಒಂದು. ತೈಲ, ಬಹಳಷ್ಟು ಸರಕುಗಳನ್ನು ಹೊತ್ತು ಹಡಗುಗಳು ಇಲ್ಲಿ ಸಾಗುತ್ತವೆ. ಚೀನಾ, ಜಪಾನ್, ಕೊರಿಯಾ ಇತ್ಯಾದಿ ದೇಶಗಳ ಆಮದು ರಫ್ತಿಗೆ ಈ ಮಾರ್ಗ ಪ್ರಧಾನವಾದುದು. ಜಗತ್ತಿನ ಸಪ್ಲೈ ಚೈನ್‌ಗಳಲ್ಲಿ ಈ ಮೂರು ದೇಶಗಳ ಪಾತ್ರ ಮಹತ್ತರವಾದುದು. ಹೀಗಾಗಿ, ಮಲಕ್ಕಾ ಜಲಸಂಧಿಯಲ್ಲಿ ಅಡೆತಡೆಯುಂಟಾದರೆ, ಹಾರ್ಮುಜ್ ಭಿಕರವಾದ ಪರಿಣಾಮಗಳನ್ನು ಜಗತ್ತು ಎದುರಿಸಬೇಕಾಯಿತು.
ಇಂಡೋನೇಷ್ಯಾ ಜೊತೆ ಅಮೆರಿಕದ ನಂಟು…
ಹಾರ್ಮುಜ್ ಜಲಸಂಧಿಯಲ್ಲಿ ಒಂದು ಬದಿಯಲ್ಲಿ ಓಮನ್, ಯುಇಇ ಇತ್ಯಾದಿ ಗಲ್ಫ್ ರಾಷ್ಟ್ರಗಳಿವೆ. ಮತ್ತೊಂದು ಬದಲಿಯಲ್ಲಿ ಇರಾನ್ ಇದೆ. ಆ ಜಲಸಂಧಿಯಲ್ಲಿ ಹೆಚ್ಚಿನ ನಿಯಂತ್ರಣ ಇರಾನ್‌ಗೆ ಇದೆ. ಅದೇ ರೀತಿ, ಮಲಕ್ಕಾ ಜಲಸಂಧಿಯ ಒಂದು ಬದಿಯಲ್ಲಿ ಸಿಂಗಾಪುರ್, ಮಲೇಷ್ಯಾ ಮತ್ತು ಥಾಯ್ಲೆಂಡ್ ದೇಶಗಳಿವೆ. ಇನ್ನೊಂದು ಬದಿಯಲ್ಲಿ ಇಂಡೋನೇಷ್ಯಾ ಇದೆ. ಇಲ್ಲಿ ಈ ಜಲಸಂಧಿಯ ಹೆಚ್ಚಿನ ನಿಯಂತ್ರಣ ಸಾಧ್ಯತೆಯನ್ನು ಹೊಂದಿರುವುದು ಇಂಡೋನೇಷ್ಯಾ.
ಇಂಡೋನೇಷ್ಯಾ ಅಮೆರಿಕದೊಂದಿಗೆ ಉತ್ತಮ ಸಂಬಂಧ ಹೊಂದಿದೆ. ಥಾಯ್ಲೆಂಡ್ ದೇಶವು ಚೀನಾ ಪರವಾಗಿದೆ. ಚೀನಾದ ಶೇ. 80ರಷ್ಟು ತೈಲ ಆಮದು ಈ ಮಲಕ್ಕಾ ಜಲಸಂಧಿಯಿಂದ ಆಗುತ್ತದೆ. ಇಂಡೋನೇಷ್ಯಾ ಮೂಲಕ ಈ ಜಲಸಂಧಿಯನ್ನು ನಿಯಂತ್ರಿಸಿದರೆ ಚೀನಾವನ್ನು ಹಣಿಯಲು ಸಾಧ್ಯ ಎಂದು ಅಮೆರಿಕದ ಎಣಿಕೆ ಇರಬಹುದು.
ಇದನ್ನೂ ಓದಿ: ಸೆನ್ಸೆಕ್ಸ್ 1,400 ಅಂಕ ಏರಿಕೆ; ಹೂಡಿಕೆದಾರರಿಗೆ 9 ಲಕ್ಷ ಕೋಟಿ ರೂ ಲಾಭದ ಹಿಗ್ಗು; ಷೇರುಪೇಟೆ ಖುಷಿಯಲ್ಲಿರುವುದು ಯಾಕೆ?
ಮಲಕ್ಕಾ ಜಲಸಂಧಿ ಸಮೀಪ ಭಾರತದ ಉಪಸ್ಥಿತಿ
ಭಾರತದ ಭಾಗವಾಗಿರುವ ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳು ಈ ಜಲಮಾರ್ಗದ ಸಮೀಪಕವೇ ಇವೆ. ಅಂಡಮಾನ್ ಪೋರ್ಟ್ ಬ್ಲೇರ್‌ನಿಂದ ಈ ಮಾರ್ಗವನ್ನು ತಲುಪಲು ಕೇವಲ 24 ಗಂಟೆ ಸಾಕು, ಅಷ್ಟು ಹತ್ತಿರದಲ್ಲಿದೆ. ಆದರೆ, ಮಲಕ್ಕಾ ಜಲಸಂಧಿಯನ್ನು ನಿಯಂತ್ರಿಸುವಷ್ಟು ಸಾಮೀಪ್ಯವು ಭಾರತಕ್ಕೆ ಇಲ್ಲದಿದ್ದರೂ ತಕ್ಕಮಟ್ಟಿಗೆ ಪ್ರಭಾವ ಬೀರಲು ಶಕ್ಯವಾಗಿದೆ.
ಭಾರತದ ಶೇ. 55ರಷ್ಟು ವ್ಯಾಪಾರ ವಹಿವಾಟುಗಳು ಈ ಮಾರ್ಗದಲ್ಲೇ ನಡೆಯುತ್ತಿದೆ. ಇಲ್ಲಿ ನಡೆಯುವ ಯಾವುದೇ ಬೆಳವಣಿಗೆಯು ಭಾರತದ ಮೇಲೆ ಪರಿಣಾಮ. ಹೀಗಾಗಿ, ಈ ಪ್ರದೇಶದಲ್ಲಿ ಭಾರತ ಎಚ್ಚರದಿಂದಿರುವುದು ಅವಶ್ಯ. ಅಂಡಮಾನ್ ನಿಕೋಬಾರ್ ದ್ವೀಪಗಳಲ್ಲಿ ಭಾರತದ ಮಿಲಿಟರಿ ಉಪಸ್ಥಿತಿ ಇತ್ತೀಚೆಗೆ ಹೆಚ್ಚಾಗಿದೆ. ಇಲ್ಲಿ ಸಮರನೌಕೆಗಳನ್ನು ನಿಯೋಜಿಸಲಾಗಿದೆ. ಈ ಮಾರ್ಗದಲ್ಲಿ ಸಾಗಿ ಹೋಗುವ ಹಡಗುಗಳ ಮೇಲೆ ಭಾರತ ಹದ್ದಿನಗಣ್ಣು ಇಡಲು ಸಾಧ್ಯ.
ಹೆಚ್ಚಿನ ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ